ಸಿದ್ಧಗಂಗಾ ಮಠದ ನೂತನ ಉತ್ತರಾಧಿಕಾರಿ ಇವರೇ ನೋಡಿ
Tumkurnews
ತುಮಕೂರು; ಸಿದ್ಧಗಂಗಾ ಮಠದ ಉತ್ತರಾಧಿಕಾರಿ ಯಾರಾಗಲಿದ್ದಾರೆ ಎಂಬ ಬಹು ದಿನಗಳ ಕುತೂಹಲಕ್ಕೆ ತೆರೆ ಬಿದ್ದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮನೋಜ್ ಕುಮಾರ್ ಎಂಬುವವರನ್ನು ಸಿದ್ಧಗಂಗಾ ಮಠದ ನೂತನ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.
ನೆಲಮಂಗಲ ತಾಲ್ಲೂಕು ಮೈಲನಹಳ್ಳಿಯ ಮನೋಜ್ ಕುಮಾರ್ ಅವರು ಷಡಕ್ಷರಿ ಎಂ.ಬಿ ಹಾಗೂ ವಿರೂಪಾಕ್ಷಮ್ಮ ದಂಪತಿಗಳ ಪುತ್ರರಾಗಿದ್ದು, 1987 ಜೂನ್ 2ರಂದು ಜನಿಸಿದ್ದಾರೆ. ಇವರು ಬಿ.ಎಸ್ಸಿ, ಬಿ.ಎಡ್, ಎಂ.ಎಸ್ಸಿ, ಎಂ.ಎ ವಿದ್ವತ್ ಶಿಕ್ಷಣ ಪಡೆದುಕೊಂಡಿದ್ದು, ಶ್ರೀ ಸಿದ್ಧಗಂಗಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಿದ್ಧಗಂಗಾ ಮಠದ ಜೊತೆಗೆ ರಾಮನಗರ ಜಿಲ್ಲೆ, ಮಾಗಡಿ ತಾಲ್ಲೂಕು, ಕಂಚುಗಲ್ ಬಂಡೇಮಠಕ್ಕೆ ಹರ್ಷ ಕೆ.ಎಂ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕು ಬಸವ ಕಲ್ಯಾಣ ಮಠಕ್ಕೆ ಗೌರೀಶ್ ಕುಮಾರ್ ಅವರನ್ನು ಉತ್ತರಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.
ನೂತನ ಮೂವರು ಉತ್ತರಾಧಿಕಾರಿಗಳನ್ನು ಇದೇ ಏಪ್ರಿಲ್ 23ರ ಅಕ್ಷಯ ತೃತೀಯ ಹಾಗೂ ಬಸವ ಜಯಂತಿಯಂದು ನಿರಂಜನ ಪಟ್ಟಾಧಿಕಾರ ಹಾಗೂ ಉತ್ತರಾಧಿಕಾರಿಗಳನ್ನಾಗಿ ನೇಮಕ ಮಾಡುವ ಕಾರ್ಯಕ್ರಮವನ್ನು ಸಿದ್ಧಗಂಗಾ ಮಠದಲ್ಲಿ ಆಯೋಜಿಸಲಾಗಿದೆ.
ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ ಜನ್ಮ ದಿನವಿಂದು, ಶ್ರೀಗಳ ಸಂಪೂರ್ಣ ವಿವರ ಓದಿ
+ There are no comments
Add yours