ತುಮಕೂರು; ಅಕ್ರಮವಾಗಿ ಸಾಗಿಸುತ್ತಿದ್ದ 2.62ಲಕ್ಷ ರೂ. ಜಪ್ತಿ

1 min read

 

ಅಕ್ರಮವಾಗಿ ಸಾಗಿಸುತ್ತಿದ್ದ 2.62ಲಕ್ಷ ರೂ. ಜಪ್ತಿ

Tumkurnews
ತುಮಕೂರು; ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಸಂಬಂಧ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಚೆಕ್‍ಪೋಸ್ಟ್’ಗಳನ್ನು ನಿರ್ಮಿಸಲಾಗಿದ್ದು, ಎಫ್.ಎಸ್.ಟಿ. ಮತ್ತು ಎಸ್‍ಎಸ್‍ಟಿ ತಂಡಗಳು ಕಾರ್ಯ ನಿರ್ವಹಿಸುತ್ತಿರುತ್ತವೆ.
ಏಪ್ರಿಲ್ 17ರಂದು ರಾತ್ರಿ 8-15ರ ಸಮಯದಲ್ಲಿ ತುಮಕೂರಿನ ಜಾಸ್ ಟೋಲ್ ಹತ್ತಿರ ಚುನಾವಣಾ ಚೆಕ್‍ಪೋಸ್ಟ್’ನಲ್ಲಿ ಕೆಎ-34-ಎನ್-9504 ಕಾರಿನಲ್ಲಿ ಬಂದ ಸುಧೀರ್ ಎಂಬುವವರ ವಾಹನವನ್ನು ತಪಾಸಣೆ ನಡೆಸಿದಾಗ 2,62,000 ರೂ.ಗಳಿದ್ದು, ಈ ಕುರಿತು ಸಮಂಜಸವಾದ ಉತ್ತರ ನೀಡದೇ ಇರುವುದರಿಂದ ಎಸ್.ಎಸ್.ಟಿ. ತಂಡದ ಮುಖ್ಯಸ್ಥ ಸಿ.ಆರ್ ರಾಘವೇಂದ್ರ ಅವರು ಸದರಿಯವರನ್ನು ಹಾಗೂ ಹಣವನ್ನು ವಶಕ್ಕೆ ಪಡೆದಿರುತ್ತಾರೆ ಹಾಗೂ ಮುಂದಿನ ಕ್ರಮಕ್ಕಾಗಿ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.

(ಚಿತ್ರ; ಸಾಂದರ್ಭಿಕ)

ಹಾಲಿನ ಡೈರಿಗಳಲ್ಲಿ ವರ್ಷಕ್ಕೆ 1 ಕೋಟಿ ರೂ. ವಂಚನೆ! ಹೈನುಗಾರರೇ ಎಚ್ಚರ!

About The Author

You May Also Like

More From Author

+ There are no comments

Add yours