ತುಮಕೂರು; ಇಂದು 11 ನಾಮಪತ್ರ ಸಲ್ಲಿಕೆ
Tumkurnews
ತುಮಕೂರು; ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇಂದಿನಿಂದ ಆರಂಭಗೊಂಡಿದ್ದು, ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು(ಏಪ್ರಿಲ್ 15, 2023) 11 ನಾಮಪತ್ರಗಳು ಸ್ವೀಕೃತಗೊಂಡಿವೆ.
128-ಚಿ.ನಾ.ಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಜನತಾದಳ(ಜಾತ್ಯಾತೀತ) ಪಕ್ಷದಿಂದ ಸಿ.ಬಿ ಸುರೇಶ್‍ಬಾಬು 1 ನಾಮಪತ್ರ ಸಲ್ಲಿಸಿದ್ದಾರೆ.
129-ತಿಪಟೂರು ವಿ.ಸ.ಕ್ಷೇತ್ರಕ್ಕೆ ಜನತಾದಳ(ಜಾತ್ಯಾತೀತ) ಪಕ್ಷದಿಂದ ಕೆ.ಟಿ ಶಾಂತಕುಮಾರ್ 1 ನಾಮಪತ್ರ ಸಲ್ಲಿಸಿದ್ದಾರೆ.
130-ತುರುವೇಕೆರೆ ವಿ.ಸ.ಕ್ಷೇತ್ರಕ್ಕೆ ಜನತಾದಳ ಜಾತ್ಯಾತೀತದಿಂದ ಎಂ.ಟಿ.ಕೃಷ್ಣಪ್ಪ 1 ನಾಮಪತ್ರ ಹಾಗೂ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ರಾಮ್‍ಪ್ರಸಾದ್ 2 ನಾಮಪತ್ರ ಸಲ್ಲಿಸಿದ್ದಾರೆ.
131-ಕುಣಿಗಲ್ ವಿ.ಸ.ಕ್ಷೇತ್ರಕ್ಕೆ ಯಾವುದೇ ನಾಮಪತ್ರ ಸ್ವೀಕೃತಿಯಾಗಿರುವುದಿಲ್ಲ.
132-ತುಮಕೂರು ನಗರ ವಿ.ಸ.ಕ್ಷೇತ್ರಕ್ಕೆ ಸೋಷಿಯಾಲಿಸ್ಟಿಕ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯೂನಿಸ್ಟ್) ಎಂ.ವಿ. ಕಲ್ಯಾಣಿ ಅವರು 1 ನಾಮಪತ್ರ ಸಲ್ಲಿಸಿದ್ದಾರೆ.
133-ತುಮಕೂರು ಗ್ರಾಮಾಂತರ ಯಾವುದೇ ನಾಮಪತ್ರ ಸ್ವೀಕೃತಿಯಾಗಿರುವುದಿಲ್ಲ.
134-ಕೊರಟಗೆರೆ ವಿ.ಸ.ಕ್ಷೇತ್ರಕ್ಕೆ ಜನತಾದಳ(ಜಾತ್ಯಾತೀತ) ಪಕ್ಷದಿಂದ ಪಿ.ಆರ್ ಸುಧಾಕರಲಾಲ್ 1 ನಾಮಪತ್ರ, ಉತ್ತಮ ಪ್ರಜಾಕೀಯ ಪಕ್ಷದಿಂದ ನಾಗೇಂದ್ರ ಟಿ.ಎನ್ 1 ನಾಮಪತ್ರ ಸಲ್ಲಿಸಿದ್ದಾರೆ.
135-ಗುಬ್ಬಿ ವಿ.ಸ.ಕ್ಷೇತ್ರಕ್ಕೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಪ್ರವೀಣ್ ಎಸ್.ಆರ್ 1 ನಾಮಪತ್ರ ಸಲ್ಲಿಸಿರುತ್ತಾರೆ.
136-ಶಿರಾ ವಿ.ಸ.ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ರಂಗನಾಥ 1 ನಾಮಪತ್ರ, ಆಮ್ ಆದ್ಮಿ ಪಕ್ಷದಿಂದ ಶಶಿಕುಮಾರ್ ಆರ್. 1 ನಾಮಪತ್ರ ಸಲ್ಲಿಸಿದ್ದಾರೆ.
137-ಪಾವಗಡ ವಿ.ಸ.ಕ್ಷೇತ್ರಕ್ಕೆ ಯಾವುದೇ ನಾಮಪತ್ರ ಸ್ವೀಕೃತಿಯಾಗಿರುವುದಿಲ್ಲ.
138-ಮಧುಗಿರಿ ವಿ.ಸ.ಕ್ಷೇತ್ರಕ್ಕೆ ಯಾವುದೇ ನಾಮಪತ್ರ ಸ್ವೀಕೃತಿಯಾಗಿರುವುದಿಲ್ಲ.
ಒಟ್ಟಾರೆ ಜನತಾದಳ (ಜಾತ್ಯಾತೀತ) ಪಕ್ಷದಿಂದ 4, ಆಮ್ ಆದ್ಮಿ ಪಕ್ಷದಿಂದ 1, ಸ್ವತಂತ್ರ 1 ಮತ್ತು ಇತರೆ ಪಕ್ಷಗಳಿಂದ 5 ನಾಮಪತ್ರಗಳು ಸ್ವೀಕೃತವಾಗಿವೆ.
+ There are no comments
Add yours