Tumkurnews
ತುಮಕೂರು; ಖಾಸಗಿ ಬಸ್ ಹಾಗೂ ಇನೋವಾ ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ.
ಇಲ್ಲಿನ ಹಿರೇಹಳ್ಳಿ ಸಮೀಪ ಘಟನೆ ಸಂಭವಿಸಿದ್ದು, ತುಮಕೂರು ಕಡೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಡಿವೈಡರ್’ಗೆ ಡಿಕ್ಕಿ ಹೊಡೆದು ಎದುರುನಿಂದ ಬೆಂಗಳೂರು ಕಡೆಯಿಂದ ತುಮಕೂರು ಕಡೆಗೆ ಬರುತ್ತಿದ್ದ ಇನೋವಾ ಕಾರಿಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಇನೊವಾ ಕಾರು ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತರ ವಿವರ;
1) ಗೋವಿಂದ ನಾಯಕ್(58), ksccf ಮ್ಯಾನೇಜರ್ (ಮೆಡಿಕಲ್), ಚಳ್ಳಕೆರೆ(ತಾ).
2) ತಿಪ್ಪಮ್ಮ(ಗೋವಿಂದ ನಾಯಕ್ ಪತ್ನಿ) (52).
3) ಚಾಲಕ ರಾಜೇಶ್(ಕುಣಿಗಲ್)
4) 6ನೇ ತರಗತಿ ವಿದ್ಯಾರ್ಥಿ ದಿನೇಶ್(12)
5) ಪಿಂಕಿ(15)
ಗಾಯಾಳುಗಳು
1) ಶ್ರೀಕಂಠಪ್ಪ(78), ಕಡೂರು
2) ಮಂಜುನಾಥ್(45), ದಾವಣಗೆರೆ
3) ಬುಡ್ಡಮ್ಮ(45), ಶಿರಾ
4) ಭಾಗ್ಯಮ್ಮ(38), ಶಿರಾ
5) ಮಂಜುನಾಥ್(41), ಶಿರಾ
+ There are no comments
Add yours