ಅಳಿಲನ್ನು ನುಂಗುತ್ತಿದ್ದ ಕೊಳಕುಮಂಡಲ ಹಾವಿನ ರಕ್ಷಣೆ
Tumkurnews
ತುಮಕೂರು; ಇಲ್ಲಿನ ಮಹಾಲಕ್ಷ್ಮಿ ನಗರದ ಧನುಷ್ ಚಡಗ ಎಂಬುವವರ ಮನೆಯ ಕೈ ತೋಟದಲ್ಲಿ ಅಳಿಲನ್ನು ನುಂಗುತ್ತಿದ್ದ ಹಾವನ್ನು ರಕ್ಷಿಸಿ ಸಮೀಪದ ಅರಣ್ಯಕ್ಕೆ ಬಿಡಲಾಯಿತು.
ತೋಟದಲ್ಲಿ ಕೊಳಕುಮಂಡಲ ಹಾವು ಅಳಿಲನ್ನು ನುಂಗುತ್ತಿರುವುದನ್ನು ನೋಡಿದ ಧನಷ್ ಅವರು ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆ (ವಾರ್ಕೊ)ಗೆ ಕರೆಮಾಡಿ ತಿಳಿಸಿದರು. ಸ್ಥಳಕ್ಕೆ ಆಗಮಿಸಿದ ವಾರ್ಕೊ ಸಂಸ್ಥೆಯ ಉರಗ ತಜ್ಞ ಮನು ಅಗ್ನಿವಂಶಿ, ಹಾವು ಅಳಿಲನ್ನು ಪೂರ್ತಿಯಾಗಿ ನುಂಗುವರೆಗೂ ಕಾದು ನಂತರ ಸುರಕ್ಷಿತವಾಗಿ ರಕ್ಷಿಸಿ ಸಮೀಪದ ಅರಣ್ಯ ಪ್ರದೇಶಕ್ಕೆ ಬಿಟ್ಟರು. ಕೊಳಕುಮಂಡಲ ಹಾವು ಸಾಮಾನ್ಯವಾಗಿ ಇಲಿ ಮತ್ತು ಕಪ್ಪೆಗಳನ್ನು ತಿಂದು ಜೀವಿಸುತ್ತವೆ. ಅಳಿಲನ್ನು ತಿನ್ನುವುದು ಅಪರೂಪ ಎಂದು ಉರಗ ತಜ್ಞ ಮನು ತಿಳಿಸಿದರು. ಹಾವುಗಳ ರಕ್ಷಣೆಗೆ ಮಾಡಲು ವಾರ್ಕೊ ಸಂಸ್ಥೆಗೆ 9964519576 ಕರೆಮಾಡಬಹುದು ಎಂದು ಅವರು ಮನವಿ ಮಾಡಿದರು.
+ There are no comments
Add yours