ನಾನು ದಾರಿ ತಪ್ಪಿ 40 ವರ್ಷ ಕಾಂಗ್ರೆಸ್’ನಲ್ಲಿದ್ದೆ; ಛಲವಾದಿ ನಾರಾಯಣಸ್ವಾಮಿ

1 min read

 

ನಾನು ದಾರಿ ತಪ್ಪಿ 40 ವರ್ಷ ಕಾಂಗ್ರೆಸ್ ನಲ್ಲಿದ್ದೆ; ಛಲವಾದಿ ನಾರಾಯಣಸ್ವಾಮಿ

Tumkurnews
ತುಮಕೂರು: ಮಾಜಿ ಶಾಸಕ ಸುರೇಶ್ ಗೌಡರನ್ನು ಗೆಲ್ಲಿಸುವುದಾಗಿ ಛಲವಾದಿ ಸಮುದಾಯ ಮಾತು ಕೊಟ್ಟಿದೆ ಅದನ್ನು ಉಳಿಸಿಕೊಳ್ಳಬೇಕು ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ಗ್ರಾಮಾಂತರ ಬಿಜೆಪಿ ಕಚೇರಿ ಶಕ್ತಿಸೌಧದಲ್ಲಿ ನಡೆದ ಛಲವಾದಿ ಸಮಾವೇಶದಲ್ಲಿ ಮಾತನಾಡಿದ ಅವರು, ಮುಂದೆ ಬರುವುದು ಬಿಜೆಪಿ ಸರ್ಕಾರ, ನೀವು ಸುರೇಶ್ ಗೌಡರನ್ನು ಗೆಲ್ಲಿಸಿದರೆ ನಾನು ಹೋರಾಟ ಮಾಡಿ ಸಚಿವರನ್ನಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ನಾನು ದಾರಿ ತಪ್ಪಿ 40 ವರ್ಷ ಕಾಂಗ್ರೆಸ್ ನಲ್ಲಿದ್ದೆ, ಬರೀ ವೋಟ್ ಬ್ಯಾಂಕ್ ಮಾಡಿಕೊಳ್ಳುತ್ತಾರೆ ಹೊರತು ಏನು ಮಾಡುವುದಿಲ್ಲ, ಮೂಗಿಗೆ ತುಪ್ಪ ಸವರುವುದನ್ನು ಬಿಟ್ಟು ಏನು ಬರೋದಿಲ್ಲ, ನಮಗೆ ನೆಕ್ಕೋದಕ್ಕೂ ಆಗಲ್ಲ, ಸುಮ್ನೇ ಇರೋಕೆ ಆಗಲ್ಲ ಎನ್ನುವಂತಹ ಸ್ಥಿತಿ ದಲಿತರಿಗೆ ಇದೆ, ಅಂಬೇಡ್ಕರ್ ಅವರನ್ನು ಸೋಲಿಸಿದ ಕಾಂಗ್ರೆಸ್, ದಲಿತರಿಗೆ ಅಧಿಕಾರ ನೀಡುತ್ತದೆಯೇ ಎಂದು ಪ್ರಶ್ನಿಸಿದರು.
ಜನತಾದಳದವ್ರು ದಲಿತರನ್ನು ಹತ್ತಿರಕ್ಕೆ ಸೇರಿಸಿಕೊಳ್ಳುವುದಿಲ್ಲ, ನೂರೋ, ಇನ್ನೂರೋ ಕೊಟ್ಟರೆ ವೋಟು ಹಾಕ್ತಾರೆ ಎಂದು ಭಾವಿಸಿದ್ದಾರೆ, ಛಲವಾದಿಗಳು ಪ್ರೀತಿ, ವಿಶ್ವಾಸಕ್ಕೆ ಸೋಲುತ್ತಾರೆ ಹೊರತು ಹಣಕ್ಕೆ ಅಲ್ಲ ಎನ್ನುವುದನ್ನು ತೋರಿಸಬೇಕು ಎಂದರು.
ಮಾಜಿ ಶಾಸಕ ಸುರೇಶ್ ಗೌಡ ಮಾತನಾಡಿ, ಮಾದಿಗ ಮತ್ತು ಛಲವಾದಿ ಸಮುದಾಯಕ್ಕೆ ಸಮಾನವಾಗಿ ಅಧಿಕಾರ ಹಂಚುವ ಮೂಲಕ ಗ್ರಾಮಾಂತರದಲ್ಲಿ ದಲಿತರಿಗೆ ಹೆಚ್ಚಿನ ಅಧಿಕಾರವನ್ನು ನೀಡಲಾಗಿತ್ತು, ಸಮುದಾಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು ಎಂದರು.
ಇಂದು ಗ್ರಾಮಾಂತರದಲ್ಲಿ ದಲಿತ ವರ್ಗದ ಯುವಕರನ್ನು ಹೆಂಡ, ಮಾಂಸಕ್ಕೆ ಸೀಮಿತಗೊಳಿಸಲಾಗುತ್ತಿದೆ, ಸಮುದಾಯದ ಅಭಿವೃದ್ಧಿಗಾಗಿ ಕಟ್ಟಿಸಿದ ಶಾಲೆಗಳು ಹಾಳು ಬಿದ್ದಿವೆ, ಶಿಕ್ಷಣದ ಗುಣಮಟ್ಟ ಕುಸಿದಿದೆ ಇಂತಹ ಆಡಳಿತದಿಂದ ಅಂಬೇಡ್ಕರ್ ಆಶಯಗಳಿಂದ ವಂಚಿಸಲಾಗುತ್ತಿದೆ.
ನಾನು ಶಾಸಕನಾಗಿ ಆಯ್ಕೆ ಆದರೆ ಛಲವಾದಿ ಸಮುದಾಯಕ್ಕೆ ಎಲ್ಲ ನೇಮಕಾತಿ ಮತ್ತು ನಾಮನಿರ್ದೇಶನ ಅಧಿಕಾರ ಸ್ಥಾನಗಳಿಗೆ ಮೀಸಲು ನೀಡುವ ಮೂಲಕ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಎರಡು ಎಕರೆ ಜಾಗದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ ನೀಡುತ್ತೇನೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ತಾಪಂ ಮಾಜಿ ಅಧ್ಯಕ್ಷ ಗಂಗಾಜಿನೇಯ, ಹೊಳಕಲ್ಲು ಗ್ರಾಪಂ ಮಾಜಿ ಸದಸ್ಯ ಗಿರೀಶ್, ರತ್ನಮ್ಮ ಇತರರಿದ್ದರು.

About The Author

You May Also Like

More From Author

+ There are no comments

Add yours