ಅನಧಿಕೃತ ಕೃಷಿ ನೀರಾವರಿ ಪಂಪ್‍ಸೆಟ್; 5 ದಿನದೊಳಗೆ ಈ ಕೆಲಸ ಮಾಡಿ

1 min read

ಅನಧಿಕೃತ ಕೃಷಿ ನೀರಾವರಿ ಪಂಪ್‍ಸೆಟ್ ಬಳಕೆ ಸಕ್ರಮ: ಜೇಷ್ಠತಾ ಪಟ್ಟಿ ಪ್ರಕಟ

Tumkurnews
ತುಮಕೂರು; ಬೆಸ್ಕಾಂ ಗ್ರಾಮೀಣ ಉಪವಿಭಾಗ-2ರ ಹೆಬ್ಬೂರು, ಗೂಳೂರು, ಸಿದ್ದಾರ್ಥ ನಗರ ಶಾಖಾ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಕೃಷಿ ನೀರಾವರಿ ಪಂಪ್‍ಸೆಟ್‍ಗಳನ್ನು ಉಪಯೋಗಿಸುತ್ತಿದ್ದ ಸ್ಥಾವರಗಳಿಗೆ ಸಂಬಂಧಿಸಿದಂತೆ ಅಕ್ರಮ-ಸಕ್ರಮ ಯೋಜನೆಯಡಿ 2014-15 ರಿಂದ 2022-23ರವರೆಗೆ ಸಕ್ರಮೀಕರಣ ಶುಲ್ಕ 10,000 ರೂ. ಮತ್ತು ಇತರೆ ಠೇವಣಿ ಮೊತ್ತಗಳನ್ನು ಪಾವತಿಸಿರುವ ಗ್ರಾಹಕರುಗಳ ಜೇಷ್ಠತಾ ಪಟ್ಟಿಯನ್ನು ಗ್ರಾಮೀಣ ಉಪವಿಭಾಗ ಕಚೇರಿ ಹಾಗೂ ಶಾಖಾ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.
ಈವರೆಗೂ ಮೂಲ ಭೂತ ಸೌಕರ್ಯ ಕಲ್ಪಿಸದೇ ಇರುವ ಹಾಗೂ ವೋಲ್ಟೇಜ್ ಸಮಸ್ಯೆಯಿರುವಂತಹ ಹಾಗೂ ಸರ್ವೀಸ್ ಮೇನ್ಸ್ 30 ಮೀಟರ್’ಗಿಂತ ದೂರದಿಂದ ಎಳೆದು ಪಂಪ್‍ಸೆಟ್ ಚಾಲನೆಯಲ್ಲಿರುವ ಗ್ರಾಹಕರು ಉಪವಿಭಾಗ ಕಚೇರಿ ಅಥವಾ ಶಾಖಾ ಕಚೇರಿಗೆ ಭೇಟಿ ನೀಡಿ ಸೂಚನಾ ಫಲಕಗಳಲ್ಲಿ ಪ್ರಕಟಿಸಿರುವ ಜೇಷ್ಠತಾ ಪಟ್ಟಿಯನ್ನು ಪರಿಶೀಲಿಸಿಕೊಳ್ಳಬಹುದಾಗಿದೆ. ಒಂದು ವೇಳೆ ಸಕ್ರಮೀಕರಣ ಶುಲ್ಕ 10,000 ರೂ. ಮತ್ತು ಇತರೆ ಠೇವಣಿ ಮೊತ್ತಗಳನ್ನು ಪಾವತಿಸಿ ಜೇಷ್ಠತಾ ಪಟ್ಟಿಯಲ್ಲಿ ಹೆಸರು ಹಾಗೂ ಆರ್.ಆರ್.ಸಂಖ್ಯೆ ಬಿಟ್ಟು ಹೋಗಿದ್ದಲ್ಲಿ ಅಂತಹ ಗ್ರಾಹಕರು ಏ.13ರೊಳಗಾಗಿ ಹಣ ಕಟ್ಟಿರುವ ರಸೀದಿ ಮತ್ತು ಇತರೇ ಅಗತ್ಯ ಮೂಲ ದಾಖಲಾತಿಗಳೊಂದಿಗೆ ಉಪವಿಭಾಗ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಇಲ್ಲವಾದಲ್ಲಿ ಮುಂದಿನ ಆಗು-ಹೋಗುಗಳಿಗೆ ಬೆಸ್ಕಾಂ ಜವಾಬ್ದಾರಿಯಲ್ಲ ಎಂದು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.

About The Author

You May Also Like

More From Author

+ There are no comments

Add yours