ಹಾಲನೂರು ಶ್ರೀ ಮಲ್ಲೇಶ್ವರ ಸ್ವಾಮಿ ರಥೋತ್ಸವ
Tumkurnews
ತುಮಕೂರು: ತಾಲ್ಲೂಕಿನ ಹಾಲನೂರು ಗ್ರಾಮದ ಶ್ರೀ ಮಲ್ಲೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಅದ್ದೂರಿಯಾಗಿ ಜರುಗಿತು.
ಮಂಗಳವಾರ ಮಧ್ಯಾಹ್ನ ಮುಜರಾಯಿ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮದ ಮುಖಂಡರ ಸಮ್ಮುಖದಲ್ಲಿ ನಡೆದ ಪಾರ್ವತಿ ದೇವಿ ಸಮೇತ ಶ್ರೀ ಮಲ್ಲೇಶ್ವರ ಸ್ವಾಮಿ ರಥವನ್ನು ಜಯಘೋಷಗಳೊಂದಿಗೆ ಎಳೆಯುವ ಮೂಲಕ ಸಾವಿರಾರು ಭಕ್ತಾದಿಗಳು ಸ್ವಾಮಿಯ ಕೃಪೆಗೆ ಪಾತ್ರರಾದರು.
ಜಾತ್ರಾ ಮಹೋತ್ಸವದ ಪ್ರಯುಕ್ತ ಇಡೀ ಗ್ರಾಮ ಕೇಸರಿಮಯವಾಗಿ ಶೃಂಗಾರಗೊಂಡಿದೆ.
ಶ್ರೀ ಮಲ್ಲೇಶ್ವರ ಸ್ವಾಮಿ ಜಾತ್ರೆಯ ಪ್ರಮುಖ ಆಕರ್ಷಣೆ ಉಪ್ಪರಿಗೆ ವಾಹನ ಬರುವ ಹುಣ್ಣಿಮೆ ದಿನ ಶುಕ್ರವಾರ ಬೆಳಗಿನ ಜಾವ ನಡೆಯಲಿದೆ. ಪ್ರತಿ ದಿನ ಅನ್ನ ದಾಸೋಹ ಏರ್ಪಡಿಸಲಾಗಿದೆ.
+ There are no comments
Add yours