ಅಕ್ರಮವಾಗಿ ಸಾಗಿಸುತ್ತಿದ್ದ 1.20ಲಕ್ಷ ರೂ. ಜಪ್ತಿ
Tumkurnews
ತುಮಕೂರು; ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಸಂಬಂಧ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಚೆಕ್‍ಪೋಸ್ಟ್’ಗಳನ್ನು ನಿರ್ಮಿಸಲಾಗಿದ್ದು, ವ್ಯಕ್ತಿಯೊಬ್ಬರಿಂದ 1.20 ಲಕ್ಷ ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ.
ಚೆಕ್ ಪೋಸ್ಟ್’ಗಳಲ್ಲಿ ಎಫ್.ಎಸ್.ಟಿ.ಮತ್ತು ಎಸ್‍ಎಸ್‍ಟಿ ತಂಡಗಳು ಕಾರ್ಯ ನಿರ್ವಹಿಸುತ್ತಿದ್ದು, ಸೋಮವಾರ ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಜೋನಿಗರಹಳ್ಳಿ ಕ್ರಾಸ್ ಚೆಕ್‍ಪೋಸ್ಟ್’ನಲ್ಲಿ ವ್ಯಕ್ತಿ ಸಹಿತ ಹಣವನ್ನು ವಶಕ್ಕೆ ಪಡೆಯಲಾಗಿದೆ.
ತೋವಿನಕೆರೆ ಕಡೆಯಿಂದ ಕೆಎ-06-ಈವಿ-821 ಸಿ.ಡಿ. ಡಿಲಕ್ಸ್ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಮುನಿಸ್ವಾಮಿ ಬಿನ್ ಕಾಟಯ್ಯ ಎಂಬುವರನ್ನು ನಿಲ್ಲಿಸಿ ತಪಾಸಣೆ ನಡೆಸಲಾಗಿದ್ದು, 1.20 ಲಕ್ಷ ರೂ. ಹಣ ಪತ್ತೆಯಾಗಿದೆ. ಈ ಹಣದ ಕುರಿತು ಸದರಿ ವ್ಯಕ್ತಿ ಸಮಂಜಸವಾದ ಉತ್ತರವನ್ನು ನೀಡದೆ ಇರುವುದರಿಂದ ಎಸ್‍ಎಸ್‍ಟಿ ತಂಡದ ಸದಸ್ಯರು ಸದರಿ ವ್ಯಕ್ತಿಯನ್ನು ಹಾಗೂ ಹಣವನ್ನು ವಶಕ್ಕೆ ಪಡೆದು ಎಫ್‍ಐಆರ್ ಸಂಖ್ಯೆ ಜಿಎಸ್‍ಸಿ ನಂ.131/2023ರ ರೀತ್ಯಾ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.
ಚಿತ್ರ; ಜಿಪಂ ಸಿಇಒ ಡಾ.ಕೆ ವಿದ್ಯಾಕುಮಾರಿ ಅವರು ಸೋಮವಾರ ಕುಣಿಗಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಡೆಯೂರು ಚೆಕ್ ಪೋಸ್ಟ್‌ಗೆ ಭೇಟಿ ನೀಡಿ ಪರಿಶೀಲಿಸಿದರು.
+ There are no comments
Add yours