ಕುರಿ, ಮೇಕೆಗಳ ಸಂತೆ, ಜಾತ್ರೆ ಮತ್ತು ಸಾಗಾಣಿಕೆ ನಿಷೇಧ ತೆರವು

1 min read

 

ಕುರಿ, ಮೇಕೆಗಳ ಸಂತೆ, ಜಾತ್ರೆ ಮತ್ತು ಸಾಗಾಣಿಕೆ ಪುನರಾರಂಭ
Tumkur news
ತುಮಕೂರು; ಜಿಲ್ಲೆಯಾದ್ಯಂತ ಜಾನುವಾರುಗಳಲ್ಲಿ ಮಾತ್ರ ಚರ್ಮಗಂಟು ರೋಗವು ಕಂಡುಬಂದಿದ್ದು, ಕುರಿ, ಮೇಕೆಗಳಲ್ಲಿ ಹರಡುವುದಿಲ್ಲವಾದ್ದರಿಂದ ಕುರಿ, ಮೇಕೆಗಳ ಸಂತೆ, ಜಾತ್ರೆ ಮತ್ತು ಸಾಗಾಣಿಕೆಯನ್ನು ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಪುನರಾರಂಭಿಸಲಾಗಿದೆ ಎಂದು ಪಶುಪಾಲನಾ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

ಹಾಲಿನ ಡೈರಿಗಳಲ್ಲಿ ವರ್ಷಕ್ಕೆ 1 ಕೋಟಿ ರೂ. ವಂಚನೆ! ಹೈನುಗಾರರೇ ಎಚ್ಚರ!
ಈ ಹಿಂದೆ ಚರ್ಮಗಂಟು ರೋಗವು ದನ ಮತ್ತು ಎಮ್ಮೆಗಳಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಜಾನುವಾರು ಸಂತೆ, ಜಾತ್ರೆ, ಜಾನುವಾರು ಮಾರುಕಟ್ಟೆ ಹಾಗೂ ಜಾನುವಾರುಗಳ ಸಾಗಾಣಿಕೆಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿತ್ತು. ಅದರಂತೆ ಮುಂದಿನ ಆದೇಶದವರೆಗೆ ದನ ಮತ್ತು ಎಮ್ಮೆಗಳ ಸಂತೆ, ಜಾತ್ರೆ ಮತ್ತು ಸಾಗಾಣಿಕೆಯನ್ನು ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಾನುವಾರುಗಳಲ್ಲಿ ಚರ್ಮಗಂಟು ರೋಗ; ಜಾನುವಾರ ಸಂತೆ, ಜಾತ್ರೆ, ಮಾರುಕಟ್ಟೆ, ಸಾಗಾಣಿಕೆ ನಿಷೇಧ

You May Also Like

More From Author

+ There are no comments

Add yours