ಅಭಿವೃದ್ದಿ ವಿಚಾರದಲ್ಲಿ ರಾಜಕೀಯ ಮಾಡಬೇಡಿ; ಸಂಸದ ಬಸವರಾಜ್ ಮನವಿ

1 min read

 

Tumkur news
ತುಮಕೂರು; ಜನಸಾಮಾನ್ಯರು ತಮ್ಮ ಜಮೀನು ಮತ್ತಿತರ ದಾಖಲೆಗಳಿಗಾಗಿ ಸರಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವ ಸಲುವಾಗಿ ಸರಕಾರವೇ ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿಯ ಕಡೆಗೆ ಎಂಬ ಕಾರ್ಯಕ್ರಮದ ಮೂಲಕ ಸರಕಾರಿ ಆಡಳಿತವನ್ನೇ ಜನರ ಮನೆಬಾಗಿಲಿಗೆ ತಂದಿದ್ದು,ಇದರ ಲಾಭವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಸಂಸದ ಜಿ.ಎಸ್ ಬಸವರಾಜು ತಿಳಿಸಿದರು‌.

ಭೀಮಸಂದ್ರಪಾಳ್ಯ ಸರ್ಕಾರಿ ಶಾಲೆ ಕೊಠಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ; ಶಾಸಕ ಜಿ.ಬಿ‌ ಜ್ಯೋತಿಗಣೇಶ್
ತಮ್ಮ ಹುಟ್ಟೂರಾದ ಗಂಗಸಂದ್ರ(ಗಂಗಾಧರ ನಗರ)ದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿಯ ಕಡೆಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ತಹಶೀಲ್ದಾರರೊಂದಿಗೆ ಸರ್ವೆ, ತೋಟಗಾರಿಕೆ, ಕೃಷಿ, ರೇಷ್ಮೆ,ಮಹಿಳಾ ಮತ್ತು ಮಕ್ಕಳ ಕಲ್ಯಾಣ, ನಗರಪಾಲಿಕೆ ಅಧಿಕಾರಿಗಳು ಸ್ಥಳದಲ್ಲಿದ್ದು, ಸಾರ್ವಜನಿಕರು ನೀಡುವ ಅರ್ಜಿಗಳಿಗೆ ಸಾಧ್ಯವಾದ ಮಟ್ಟಿಗೆ ಇಂದೇ ಪರಿಹಾರ ಸೂಚಿಸಲಿದ್ದಾರೆ. ಹಾಗಾಗಿ ಜನರು ತಮ್ಮ ಅಹವಾಲುಗಳನ್ನು ಸಲ್ಲಿಸಿ, ಪರಿಹಾರ ಕಂಡುಕೊಳ್ಳಬೇಕೆಂದರು.

ರಾಜ್ಯಾದ್ಯಂತ ‘ನಮ್ಮ ಕ್ಲಿನಿಕ್’ಗಳು ಆರಂಭ, ಕಲ್ಪತರು ನಾಡಿಗೆ 10 ಕ್ಲಿನಿಕ್; ಉಪಯೋಗವೇನು ಗೊತ್ತೇ?
ಈ ಗ್ರಾಮದಲ್ಲಿ 1934ರಲ್ಲಿ ಹುಟ್ಟಿದ್ದು, ನಮ್ಮ ಕಾಲದವರು ಈಗ ಕಡಿಮೆ, ಯುವಕರೇ ಹೆಚ್ಚಾಗಿದ್ದಾರೆ. ಅವರು ಗ್ರಾಮದ ಅಭಿವೃದ್ದಿಗೆ ಏನು ಬೇಕು ಎಂಬುದನ್ನು ತಮ್ಮಲ್ಲಿಯೇ ಚರ್ಚೆ ನಡೆಸಿ, ಒಮ್ಮತದಿಂದ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿದರೆ, ಅದನ್ನು ಮಾಡಿಕೊಡಲು ಸರಕಾರ ಸಿದ್ದವಿದೆ. ನಮ್ಮ ಅಧಿಕಾರ ಮುಂದಿನ ಒಂದುವರೆ ವರ್ಷವಿದೆ. ಆ ಅವಧಿಯೊಳಗೆ ಈ ಗ್ರಾಮಕ್ಕೆ ಉತ್ತಮ ರಸ್ತೆ ನಿರ್ಮಿಸಿ, ಗ್ರಾಮದ ಹರಿಜನ ಕಾಲೋನಿಯೂ ಸೇರಿದಂತೆ ನಗರಕ್ಕೂ, ಹಳೆಯ ಊರಿಗೆ ಯಾವುದೇ ವ್ಯತ್ಯಾಸ ಇರದಂತೆ ಮೂಲಭೂತ ಸೌಕರ್ಯ ಒದಗಿಸಬೇಕೆಂಬುದು ನಮ್ಮ ಗುರಿಯಾಗಿದೆ. ಹಾಗಾಗಿ ಯುವ ಜನರು ಅಭಿವೃದ್ದಿ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ಸಂಸದ ಜಿ.ಎಸ.ಬಸವರಾಜು ಮನವಿ‌ ಮಾಡಿದರು.
ತುಮಕೂರು ಉಪವಿಭಾಗಾಧಿಕಾರಿ ಅಜಯ್ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಸರಕಾರದ ನಿರ್ದೇಶನದಂತೆ ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿಯ ಕಡೆಗೆ ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ತಿಂಗಳ 3ನೇ ಶನಿವಾರ ಒಂದೊಂದು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಗ್ರಾಮವಾಸ್ತವ್ಯ ಮಾಡಿ, ಅಲ್ಲಿನ ಜನರ ಸಮಸ್ಯೆಗಳನ್ನು ಸ್ಥಳೀಯದಲ್ಲಿಯೇ ಪರಿಶೀಲಿಸುವ ಕೆಲಸ ಮಾಡಲಾಗುತ್ತಿದೆ. ಪ್ರಸ್ತುತ ಗಂಗಸಂದ್ರ(ಗಂಗಾಧರ ನಗರ)ದಲ್ಲಿ ನಮ್ಮ ಸರ್ವೆ ಪ್ರಕಾರ ಸುಮಾರು 15 ಜನ ಅರ್ಹರಿಗೆ ಮಾಶಾಸನ ದೊರೆತಿರಲಿಲ್ಲ. ಇಂದು ಅವರಿಗೆ ಮಾಶಾಸನ ಮಂಜೂರಾತಿ ಪತ್ರ ನೀಡಲಾಗುತ್ತಿದೆ. ಇದರ ಜೊತೆಗೆ, ಪಹಣಿ ತಿದ್ದುಪಡಿ, ಪೌತಿ ಖಾತೆ, ಪಹಣಿ 3-9 ಕಲಂ ವ್ಯತ್ಯಾಸ ಸರಿಪಡಿಸುವಿಕೆ ಸೇರಿದಂತೆ ಹಲವಾರು ಇಲಾಖೆಗಳ ಅಧಿಕಾರಿಗಳು ತಮ್ಮಲ್ಲಿರುವ ಯೋಜನೆಗಳ ಕುರಿತು ಜನರಿಗೆ ಮಾಹಿತಿ ನೀಡಲಿದ್ದಾರೆ. ಸಾರ್ವಜನಿಕರು ಸಾವಧಾನದಿಂದ ಅರ್ಜಿ ನೀಡಿ, ಪರಿಹಾರ ಕಂಡುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ತುಮಕೂರು ತಾಲೂಕು ದಂಢಾಧಿಕಾರಿ ಸಿದ್ದೇಶ್, ಸಾರ್ವಜನಿಕರ ಕುಂದುಕೊರತೆಯನ್ನು ಖುದ್ದು ಬಗೆಹರಿಸುವ ನಿಟ್ಟಿನಲ್ಲಿ ಸರಕಾರವೇ ಜನರ ಮನೆ ಬಾಗಿಲಿಗೆ ಬಂದಿದೆ. ಇದೊಂದು ಸುರ್ವಣ ಅವಕಾಶ. ಇದರ ಸದುಪಯೋಗ ಪಡೆದುಕೊಂಡು, ಹಲವಾರು ದಿನದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಜಿ.ಬಿ.ಜೋತಿಗಣೇಶ್ ವಹಿಸಿದ್ದರು. ಇದೇ ವೇಳೆ 15ಕ್ಕೂ ಹೆಚ್ಚು ಜನರಿಗೆ ಮಾಶಾಸನ, ಕಾರ್ಮಿಕ ಇಲಾಖೆಯಿಂದ ಗುರುತಿನ ಕಾರ್ಡು, ರೇಷ್ಮೆ ಇಲಾಖೆಯಿಂದ ಫಲಾನುಭವಿಗಳಿಗೆ ಸವಲತ್ತು ನೀಡಲಾಯಿತು. ವೇದಿಕೆಯಲ್ಲಿ ಪಾಲಿಕೆ ಸದಸ್ಯ ಮನುಗೌಡ, ಗುರುಸಿದ್ದೇಗೌಡ, ಬಸವರಾಜು, ಡಿ.ಹೆಚ್.ಓ ಡಾ.ಮಂಜುನಾಥ್, ರೇಷ್ಮೆ ಇಲಾಖೆಯ ಉಪನಿರ್ದೇಶಕ ಡಾ.ವೈ.ಕೆ ಬಾಲಕೃಷ್ಣಪ್ಪ, ಆರ್.ಐ ರಾಘವೇಂದ್ರ, ಅಜಯಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

About The Author

You May Also Like

More From Author

+ There are no comments

Add yours