ವರ್ಕೌಟ್ ಆದ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಭರವಸೆ; ಪಂಚರತ್ನ ಯಾತ್ರೆಗೆ ಮಹಿಳೆಯರಿಂದ ಭರ್ಜರಿ ಸ್ವಾಗತ

1 min read

ಮಹಿಳೆಯರಿಂದ ಪಂಚರತ್ನ ಯಾತ್ರೆಗೆ ಭರ್ಜರಿ ಸ್ವಾಗತ; ಎಚ್.ಡಿ.ಕೆ ಹರ್ಷ

Tumkurnews
ತುಮಕೂರು; ಜೆಡಿಎಸ್‌ ಹಮ್ಮಿಕೊಂಡಿರುವ ಪಂಚರತ್ನ ಯಾತ್ರೆ ಮಂಗಳವಾರ ಗುಬ್ಬಿ ‌ವಿಧಾನ ಸಭೆ ಕ್ಷೇತ್ರವನ್ನು ಪೂರೈಸಿದ್ದು, ದಾರಿಯುದ್ದಕ್ಕೂ ಸಿಕ್ಕಿರುವ ಭವ್ಯ ಸ್ವಾಗತಕ್ಕೆ ಮಾಜಿ ಸಿಎಂ‌ ಎಚ್.ಡಿ ಕುಮಾರಸ್ವಾಮಿ ಬೆರಗಾಗಿದ್ದಾರೆ.
ಮಂಗಳವಾರ ಗುಬ್ಬಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಯಾತ್ರೆಯುದ್ದಕ್ಕೂ ಜನರು ಅಪಾರ ಪ್ರೀತಿ ತೋರುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಮಹಿಳೆಯರು ವಿಶೇಷವಾದ ಗೌರವ ಮತ್ತು ಪ್ರೀತಿಯಿಂದ ಪಂಚರತ್ನ ಯಾತ್ರೆಯನ್ನು ಸ್ವಾಗತಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. “ನಾವು ಬಿಜೆಪಿಗೆ ಮತ ಕೊಟ್ಟು ನಮ್ಮ ಮನೆಗಳು ಹಾಳಾಗಿವೆ, ತಪ್ಪು ಮಾಡಿದ್ದೇವೆ ನಾವು, ಈ ಬಾರಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಲು ಮಾನಸಿಕವಾಗಿ ಸಿದ್ಧರಾಗಿದ್ದೇವೆ” ಎಂಬ ಮಾತುಗಳನ್ನು ಮಹಿಳೆಯರು ಹೇಳುತ್ತಿದ್ದಾರೆ ಎಂದು ಕುಮಾರ ಸ್ವಾಮಿ ಸಂತಸ ವ್ಯಕ್ತಪಡಿಸಿದರು.

ಪಂಚರತ್ನ ಯಾತ್ರೆಗೆ ತೆರೆ ಎಳೆದ ಎಚ್.ಡಿ ಕುಮಾರಸ್ವಾಮಿ; HDK ಕೊಟ್ಟ ಕಾರಣಗಳೇನು?
ಈ ಬಾರಿ ಸ್ಪಷ್ಟ ಬಹುಮತ ತರಬೇಕೆಂಬ ಗುರಿ ಇಟ್ಟುಕೊಂಡು ಯಾತ್ರೆ ಹೊರಟಿದ್ದೇವೆ. ಈ ಬಾರಿ ನಾವು ಗುರಿ ತಲುಪುತ್ತೇವೆ. ಸೋಮವಾರ ‌ಶಿರಾದಲ್ಲಿ ಮಧ್ಯಾಹ್ನ ನಡೆಯಬೇಕಿದ್ದ ಸಾರ್ವಜನಿಕ ಸಭೆಯು 7 ಗಂಟೆ ತಡವಾಗಿ ಸಂಜೆ ನಡೆಯಿತು. ಆದರೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಚುನಾವಣೆಗೆ 5 ತಿಂಗಳು ‌ಮೊದಲೇ ನಮ್ಮ ಕಾರ್ಯಕರ್ತರು ಚುನಾವಣೆ ವಾತಾವರಣವನ್ನು ಸೃಷ್ಟಿಸಿದ್ದಾರೆ ಎಂದರು.
ಯಾತ್ರೆಯು ಶಿರಾ ಪಟ್ಟಣಕ್ಕೆ ಬಂದಾಗ ನಾಲ್ಕು ಕ್ರೇನ್ ಗಳಲ್ಲಿ ಎಳನೀರು ಹಾರ, ಮೆಕ್ಕೆಜೋಳ ಹಾರ, ಕಡ್ಲೇಕಾಯಿ ಹಾರ, ಕ್ಯಾಪ್ಸಿಕಂ ಹಾರ ಹಾಕಿ ಸ್ವಾಗತಿಸಿದರು‌. ತಾವು ಬೆಳೆದ ಬೆಳೆಗಳಿಂದಲೇ ಹಾರ ಮಾಡಿ ರೈತರು ನಮ್ಮ ರಥಯಾತ್ರೆಯನ್ನು ಸ್ವಾಗತಿಸುತ್ತಿದ್ದಾರೆ. ಇದು ದೊಡ್ಡ ಮಟ್ಟದ ವಿಶೇಷವಾಗಿದೆ ಎಂದು ಎಚ್.ಡಿ‌ ಕುಮಾರಸ್ವಾಮಿ ಯಾತ್ರೆಯ ಯಶಸ್ಸನ್ನು ಪತ್ರಕರ್ತರೊಂದಿಗೆ ಹಂಚಿಕೊಂಡರು. ಒಟ್ಟಾರೆಯಾಗಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಎಚ್.ಡಿ ಕುಮಾರ ಸ್ವಾಮಿ ನೀಡಿರುವ ಭರವಸೆಯು ಮಹಿಳೆಯರನ್ನು ಜೆಡಿಎಸ್’ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿರುವಂತೆ ತೋರುತ್ತಿದ್ದು, ಅಂತಿಮವಾಗಿ ಚುನಾವಣೆಯಲ್ಲಿ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.

ಪಂಚರತ್ನ ಯಾತ್ರೆಗೆ ಕಲ್ಪತರು ನಾಡಿನಲ್ಲಿ ಅಭೂತಪೂರ್ವ ಸ್ವಾಗತ; HDK ನೀಡಿದ‌ ಭರವಸೆಗಳೇನು? ಇಲ್ಲಿದೆ ನೋಡಿ

About The Author

You May Also Like

More From Author

+ There are no comments

Add yours