Tumkurnews
ತುಮಕೂರು; ರಾಜ್ಯಾಧ್ಯಂತ 70 ಚಲನಚಿತ್ರ ಮಂದಿರಗಳಲ್ಲಿ ಡಿಸೆಂಬರ್ 2 ರಂದು ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ “ಧರಣಿ ಮಂಡಲ ಮಧ್ಯದೊಳಗೆ” ಚಲನಚಿತ್ರ ತಂಡ ತುಮಕೂರಿಗೆ ಭೇಟಿ ನೀಡಿ, ಪ್ರೇಕ್ಷಕರೊಂದಿಗೆ ಬೆರತು ಚಿತ್ರದ ಪ್ರಚಾರ ನಡೆಸಿತು.
ಮೊದಲು ಚಿತ್ರ ತಂಡ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ, ಸಿದ್ದಗಂಗಾ ಮಠದ ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳ ಗುದ್ದುಗೆ ದರ್ಶನ ಪಡೆಯಿತು. ನಂತರ, ಶ್ರೀ ಸಿದ್ದಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದರು. ನಂತರ ಧರಣಿ ಮಂಡಲ ಮಧ್ಯದೊಳಗೆ ಚಲನಚಿತ್ರ ಪ್ರದರ್ಶನಗೊಳ್ಳುತ್ತಿರುವ ಮಾರುತಿ ಚಿತ್ರ ಮಂದಿರಕ್ಕೆ ಭೇಟಿ ನೀಡಿ, ಪ್ರೇಕ್ಷಕರೊಂದಿಗೆ ಚಿತ್ರ ವೀಕ್ಷಿಸಿದರು.
ಈ ವೇಳೆ ಮಾತನಾಡಿದ ಧರಣಿ ಮಂಡಲ ಮಧ್ಯದೊಳಗೆ ಚಲನಚಿತ್ರದ ನಿರ್ದೇಶಕ ಶ್ರೀಧರ್ ಶಿಕಾರಿಪುರ ಮಾತನಾಡಿ, ಎಲ್ಲಾ ಹೊಸಬರು ಸೇರಿ ಒಂದು ಪ್ರಯೋಗಾತ್ಮಕ ಸಿನಿಮಾವನ್ನು ತಯಾರಿಸಿದ್ದೇವೆ. ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಮೂವಿ ಇದಾಗಿದ್ದು, ಜನರು ಚಿತ್ರಮಂದಿರಕ್ಕೆ ಬಂದು ವೀಕ್ಷಿಸುವ ಮೂಲಕ ಹೊಸಬರ ಪ್ರಯತ್ನಕ್ಕೆ ಬೆನ್ನು ತಟ್ಟಬೇಕೆಂದು ಮನವಿ ಮಾಡಿದರು.
ಧರಣಿ ಮಂಡಲ ಮಧ್ಯದೊಳಗೆ ಚಲನಚಿತ್ರದ ನಿರ್ಮಾಪಕ ತುಮಕೂರಿನ ಓಂಕಾರ್ ಮಾತನಾಡಿ, ಎಲ್ಲಾ ಹೊಸಬರೇ ಪಾತ್ರ ನಿರ್ವಹಿಸಿದ್ದು, ಒಂದು ವರ್ಗದ ಪ್ರೇಕ್ಷಕರನ್ನು ಮನದಲ್ಲಿಟ್ಟುಕೊಳ್ಳದೆ ಎಲ್ಲಾವರ್ಗದ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಈ ಚಿತ್ರ ತಯಾರಿಸಲಾಗಿದೆ. ಒಂದೊಂದು ಪಾತ್ರವು ಒಂದೊಂದು ವರ್ಗವನ್ನು ಪ್ರತಿನಿಧಿಸುತ್ತದೆ. ಇಂದೊಂದು ಕ್ರೈಮ್ ಡಾಮಾ, ವ್ಯಾಲೂಸ್ ಜೊತೆಗೆ, ಮನರಂಜನೆಯನ್ನು ನೀಡಲಾಗಿದೆ. ಒಳ್ಳೆಯ ನಂಬಿಕೆಗಳು ಹೇಗೆ ನಮ್ಮನ್ನು ಕಾಪಾಡುತ್ತವೆ ಎಂಬುದನ್ನು ಮಾನವೀಯ ಮುಖದ ಮೂಲಕ ಹೇಳಲಾಗಿದೆ. ವ್ಯಸನ ಮುಕ್ತ ಸಮಾಜದ ಪರಿಕಲ್ಪನೆಯನ್ನು ಈ ಚಿತ್ರ ಹೊಂದಿದೆ ಎಂದರು.
ಚಿತ್ರದ ನಾಯಕ ನಟಿ ಐರಾ ಕೃಷ್ಣಾ ಮಾತನಾಡಿ, ನಾನು ಮೂಲತಃ ಉಡುಪಿಯವಳು, ಈ ಚಲನಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ನಿರ್ವಹಿಸಿದ್ದೇನೆ. ಇಂದು ತುಮಕೂರಿನಲ್ಲಿ ಪ್ರಮೋಷನ್‍ಗೆ ಬಂದಿದೇವೆ. ಒಂದು ಒಳ್ಳೆಯ ಉದ್ದೇಶದಿಂದ ಸಿನಿಮಾ ಮಾಡಿದ್ದೇವೆ. ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಪ್ರೇಕ್ಷಕರು ದಿನದಿಂದ ದಿನಕ್ಕೆ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ ನೋಡಲು ಥಿಯೇಟರ್’ಗೆ ಬರುತ್ತಿರುವುದು ಸಂತೋಷದ ವಿಚಾರವಾಗಿದೆ. ಹೀಗೆ ಎಲ್ಲರೂ ಚಿತ್ರಮಂದಿರಕ್ಕೆ ಬಂದು ನೋಡಿ, ಆಶೀರ್ವದಿಸುವಂತೆ ಕೋರುತ್ತೇವೆ ಎಂದರು.
ಈ ವೇಳೆ ನಾಯಕನಟ ನವೀನ್ ಶಂಕರ್, ಸಿದ್ದು ಮೂಲಿಮನಿ ಸೇರಿದಂತೆ ಚಿತ್ರತಂಡದ ಹಲವರಿದ್ದರು.
ವರ್ಕೌಟ್ ಆದ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಭರವಸೆ; ಪಂಚರತ್ನ ಯಾತ್ರೆಗೆ ಮಹಿಳೆಯರಿಂದ ಭರ್ಜರಿ ಸ್ವಾಗತ
+ There are no comments
Add yours