ಡೈವರ್ಸ್’ಗೆ ಬಂದವರು ದಾಂಪತ್ಯಕ್ಕೆ ರಿವರ್ಸ್!; ಐದು ಜೋಡಿಗಳನ್ನು ಒಂದು ಮಾಡಿದ ಕೋರ್ಟ್

1 min read

 

ದಂಪತಿಗಳನ್ನು ಪುನಃ ಒಂದು ಮಾಡಿದ ತುಮಕೂರು ಕೌಟುಂಬಿಕ ನ್ಯಾಯಾಲಯ

Tumkurnews
ತುಮಕೂರು; ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ಬಾಕಿ ಇದ್ದ ವಿವಿಧ ಪ್ರಕರಣಗಳಲ್ಲಿ 5 ಜೋಡಿಗಳನ್ನು ಪುನಃ ಒಂದು ಮಾಡಿ ಹಾರ ಬದಲಾಯಿಸಿ ಒಬ್ಬರಿಗೊಬ್ಬರು ಸಿಹಿ ತಿನ್ನಿಸಿದ ಅಪರೂಪದ ಪ್ರಸಂಗಕ್ಕೆ ಜಿಲ್ಲಾ ಕೌಟುಂಬಿಕ ನ್ಯಾಯಾಲಯ ಸಾಕ್ಷಿಯಾಗಿದೆ.
ಲೋಕ್ ಅದಾಲತ್’ನಲ್ಲಿ ಕೌಟುಂಬಿಕ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣಗಳಲ್ಲಿ, ದಂಪತಿಗಳಲ್ಲಿ ಚಿಕ್ಕ ಚಿಕ್ಕ ಮನಸ್ತಾಪಗಳು, ವೈಮನಸ್ಯಗಳು ಇದ್ದವು ಅದಕ್ಕೆ ಜೀವನಾಂಶ, ವಿಚ್ಛೇದನಕ್ಕೆ ಅರ್ಜಿ ಹಾಕಿ ನ್ಯಾಯಾಲಯಕ್ಕೆ ಬಂದಿದ್ದ ದಂಪತಿಗಳ ಪೈಕಿ 5 ದಂಪತಿಗಳನ್ನು ನ್ಯಾಯಾಧೀಶರು, ಮಧ್ಯಸ್ಥಿಕೆದಾರರು, ಎರಡೂ ಕಡೆಯ ವಕೀಲರು ಸೇರಿ ಬುದ್ಧಿ ಹೇಳಿ ಒಂದು ಮಾಡಿ ಅವರ ಪ್ರಕರಣವನ್ನು ಮುಕ್ತಾಯ ಮಾಡಿ ಕಳುಹಿಸಿದರು. ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಒಂದು ಪ್ರಕರಣದಲ್ಲಿ 60 ವರ್ಷ ಮೇಲ್ಪಟ್ಟ ವೃದ್ಧರು ಸಹ ಬೇರೆ ಬೇರೆಯಾಗಿದ್ದನ್ನು ಗಮಿನಿಸಿದ ನ್ಯಾಯಾಧೀಶರು ಕಕ್ಷಿದಾರರ ವಕೀಲರು ಮತ್ತು ಕಕ್ಷಿದಾರರಿಗೆ ಮನವಿ ಮಾಡಿ ಪ್ರಕರಣವನ್ನು ಮುಕ್ತಾಯಗೊಳಿಸಿದರು. ಅಲ್ಲಿ ನೆರದಿದ್ದ ಕಕ್ಷಿದಾರರು ಮತ್ತು ಸಾರ್ವಜನಿಕರು ನ್ಯಾಯಾಲಯದಲ್ಲಿ ನಡೆದ ಈ ಕಾರ್ಯಕ್ಕೆ, ನ್ಯಾಯಾಧೀಶರ ಮತ್ತು ವಕೀಲರ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಬಿ.ಗೀತಾ, ಪೋಕ್ಸೋ ನ್ಯಾಯಾಲಯದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಸಂಧ್ಯಾರಾವ್.ಪಿ, ಕೌಟುಂಬಿಕ ನ್ಯಾಯಾಲಯದ 1ನೇ ಅಧಿಕ ಪ್ರಧಾನ ಜಿಲ್ಲಾ ನ್ಯಾಯಾಧೀಶ ಎನ್.ಮುನಿರಾಜ ಮತ್ತು 3ನೇ ಅಧಿಕ ಹಿರಿಯ ಸಿವಿಲ್ ನ್ಯಾಯಾಧೀಶ ಇರ್ಫಾನ್, ನರಸಿಂಹಪ್ಪ ಮತ್ತು ವಕೀಲರುಗಳು ಹಾಜರಿದ್ದರು.

About The Author

You May Also Like

More From Author

+ There are no comments

Add yours