ಭೀಕರ ಅಪಘಾತದಲ್ಲಿ ಧಗಧಗಿಸಿ ಉರಿದ ಕಾರುಗಳು; ಗಾಯಾಳುಗಳ ರಕ್ಷಣೆಗೆ ತಮ್ಮ ಪ್ರಾಣ ಒತ್ತೆ ಇಟ್ಟ ಪೊಲೀಸರು

1 min read

Tumkurnews
ತುಮಕೂರು; ಜಿಲ್ಲೆಯ ಕೊರಟಗೆರೆ ರಾಜ್ಯ ಹೆದ್ದಾರಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಓರ್ವ ಮಹಿಳೆಯು ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡು ನರಳುತ್ತಿದ್ದ 10 ಜನರನ್ನು ಕೊರಟಗೆರೆ ಪಿಎಸೈ ಚೇತನ್‌ಗೌಡ ಸ್ಥಳೀಯರ ಸಹಾಯದಿಂದ ತಮ್ಮ ಪೊಲೀಸ್ ವಾಹನದಲ್ಲಿ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಪ್ರಾಣ ಉಳಿಸಿರುವ ಘಟನೆ ಶನಿವಾರ ರಾತ್ರಿ ನಡೆದಿದೆ‌‌.
ಕೊರಟಗೆರೆ ತಾಲೂಕು ಕಸಬಾ ಹೋಬಳಿ ಹಂಚಿಹಳ್ಳಿ ಗ್ರಾಪಂ ವ್ಯಾಪ್ತಿಯ ಜಿ.ನಾಗೇನಹಳ್ಳಿ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಎರಡು ಕಾರುಗಳ ನಡುವೆ ಶನಿವಾರ ರಾತ್ರಿ ಮುಖಾಮುಖಿ ಭೀಕರ ಅಪಘಾತವಾಗಿದೆ. ಅಪಘಾತದ ರಭಸಕ್ಕೆ ರಾಜ್ಯ ಹೆದ್ದಾರಿಯಿಂದ ಇಳಿಜಾರಿನ ಪ್ರದೇಶಕ್ಕೆ ಹಾರಿಹೋದ ಕಾರೊಂದರ ಪೆಟ್ರೋಲ್ ಟ್ಯಾಂಕು ಸಿಡಿದು ಬೆಂಕಿ ಆವರಿಸಿಕೊಂಡಿದ್ದು ಧಗಧಗನೇ ಹೊತ್ತಿ ಉರಿದಿದೆ‌.
ಪ್ರಾಣ ಒತ್ತೆ ಇಟ್ಟ ಪಿಎಸೈ; ಪ್ರಾಣಾಪಾಯದಲ್ಲಿದ್ದ ಗಾಯಾಳುಗಳ ರಕ್ಷಣೆಗೆ ಪಿ.ಎಸ್.ಐ ಚೇತನ್ ತಮ್ಮ ಪ್ರಾಣವನ್ನು ಒತ್ತೆ ಇಟ್ಟಿದ್ದಾರೆ. ಅಪಘಾತದಲ್ಲಿ ಕೈಕಾಲು ಮುರಿದುಕೊಂಡು ರಸ್ತೆಯಲ್ಲಿ ನರಳುತ್ತಿದ್ದ 10 ಜನರನ್ನು ತಮ್ಮ ಪೊಲೀಸ್ ವಾಹನದಲ್ಲಿಯೇ ಸಿಬ್ಬಂದಿ ಸಹಾಯದಿಂದ ಆಸ್ಪತ್ರೆಗೆ ಕಳುಹಿಸಿದ್ದಾರೆ. ನಂತರ ಧಗಧಗನೇ ಉರಿಯುತ್ತಿದ್ದ ಕಾರಿನಲ್ಲಿ ಬಿದ್ದಿದ್ದ ಮಹಿಳೆಯ ದೇಹವನ್ನು ಇಳಿಜಾರಿನಿಂದ ತಾವೇ ರಸ್ತೆಗೆ ಎತ್ತಿಕೊಂಡು ಬಂದು ಆಟೋ ಮೂಲಕ ಆಸ್ಪತ್ರೆಗೆ ರವಾನಿಸಿ ಆಕೆಯ ಪ್ರಾಣ ಉಳಿಸುವ ಪ್ರಯತ್ನ ಮಾಡಿದ್ದಾರೆ‌. ಆದರೆ ದುರಾದೃಷ್ಟವಶಾತ್ ಆಕೆ ಸಾವನ್ನಪ್ಪಿದ್ದು ಇತರರು ಪ್ರಾಣಾಯಾಮದಿಂದ ಪಾರಾಗಿದ್ದಾರೆ.

ಅಮೃತ್ತೂರು ಹೆಡ್ ಕಾನ್ಸ್‌ಟೇಬಲ್ ರೌದ್ರವತಾರ: ಎಸ್ಪಿ ಹೇಳಿದ್ದೇನು? ವಿಡಿಯೋ
ನಿರ್ಲಕ್ಷ ಮತ್ತು ಅತಿವೇಗದ ಚಾಲನೆ; ಕಾರು ಚಾಲಕರ ನಿರ್ಲಕ್ಷ ಮತ್ತು ಅತಿವೇಗದ ಚಾಲನೆಯಿಂದ ಎರಡು ಕಾರುಗಳ ನಡುವೆ ಭೀಕರ ಅಪಘಾತ ನಡೆದಿದೆ. ಅಪಘಾತದಲ್ಲಿ ಬೆಂಗಳೂರು ಮೂಲದ ಮಹಿಳೆ ಪುಪ್ಪಲತಾ ಎಂಬಾಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಶ್ರೀನಿವಾಸ್, ಮಂಜುನಾಥ, ಮನು, ರಂಗನಾಥ ಸೇರಿದಂತೆ ಗಂಭೀರವಾಗಿ ಗಾಯಗೊಂಡ 10 ಜನರನ್ನು ಕೊರಟಗೆರೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ತುಮಕೂರು ಸಾರ್ವಜನಿಕ ಆಸ್ಪತ್ರೆ ಮತ್ತು ಬೆಂಗಳೂರು ನಿಮ್ಹಾನ್ಸ್’ಗೆ ದಾಖಲಿಸಲಾಗಿದೆ.
ರಾಜ್ಯ ಹೆದ್ದಾರಿನಲ್ಲಿ ನಡೆದ ಅಪಘಾತದಲ್ಲಿ ಧಗಧಗನೇ ಉರಿಯುತ್ತಿದ್ದ ಕಾರಿನ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿವರ್ಗ ನಂದಿಸುವಲ್ಲಿ ಯಶಸ್ವಿ ಆಗಿದ್ದಾರೆ. ಸ್ಥಳಕ್ಕೆ ಮಧುಗಿರಿ ಡಿವೈಎಸ್ಪಿ ವೆಂಕಟೇಶನಾಯ್ಡು, ಕೊರಟಗೆರೆ ಸಿಪಿಐ ಸುರೇಶ್, ಪಿಎಸೈ ಚೇತನ್‌ಗೌಡ ಸೇರಿದಂತೆ 112 ಪೊಲೀಸ್ ವಾಹನ, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

You May Also Like

More From Author

+ There are no comments

Add yours