ಮೊಟ್ಟೆ ಆಸೆಗೆ ಕೋಳಿ ಗೂಡಿಗೆ ಬಂದ ನಾಗಪ್ಪ; ಹೆಡೆ ನೋಡಿ ಬೆಚ್ಚಿ ಬಿದ್ದ ಜನ
Tumkurnews
ತುಮಕೂರು; ಮೊಟ್ಟೆ ಆಸೆಗೆ ಕೋಳಿ ಗೂಡಿಗೆ ಬಂದಿದ್ದ ನಾಗರಹಾವನ್ನು ಉರಗ ತಜ್ಞ ದಿಲೀಪ್ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.
ತಾಲ್ಲೂಕಿನ ಕೋರಾ ನಿವಾಸಿ ಕೃಷ್ಣಮೂರ್ತಿ ಎಂಬುವರ ನಿವಾಸದಲ್ಲಿನ ಕೋಳಿ ಗೂಡಿನಲ್ಲಿ ನಾಗರಹಾವು ಸೇರಿಕೊಂಡಿತ್ತು. ಉರಗ ತಜ್ಞರು ಬಂದು ಹಾವನ್ನು ಹಿಡಿದ ಬಳಿಕ ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ.
+ There are no comments
Add yours