ಜೆಡಿಎಸ್ ಕಚೇರಿಯಲ್ಲಿ ಕನಕದಾಸ, ಒನಕೆ ಓಬವ್ವ ಜಯಂತಿ ಆಚರಣೆ
Tumkurnews
ತುಮಕೂರು; ಸಮಾಜದಲ್ಲಿರುವ ಅಸಮಾನತೆಯನ್ನು ತೊಡೆದು ಹಾಕಲು ಹೋರಾಟ ನಡೆಸಿದ ಮಹನೀಯರಲ್ಲಿ ಕನಕದಾಸರು ಬಹಳ ಪ್ರಮುಖರಾದವರು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ ಆಂಜನಪ್ಪ ತಿಳಿಸಿದರು.
ನಗರಲ್ಲಿನ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಿದ್ದ ಕನಕದಾಸರು ಮತ್ತು ಒನಕೆ ಓಬವ್ವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನಕದಾಸ ಮೋಹನ ತರಂಗಿಣಿ, ರಾಮಧಾನ್ಯ ಚರಿತ್ರೆಯ ಮೂಲಕ ಈ ನಾಡಿನಲ್ಲಿದ್ದ ಅಸ್ಪೃಷ್ಯತೆ, ಅಸಮಾನತೆ ತೊಡೆದು ಹಾಕಲು ಪ್ರಯತ್ನಿಸಿದ್ದರು. ಅವರ ರಾಮಧಾನ್ಯ ಚರಿತ್ರೆ ವರ್ಣಭೇಧವನ್ನು ತೀವ್ರವಾಗಿ ಖಂಡಿಸಿದ್ದಾರೆ ಎಂದರು.
ಜೆಡಿಎಸ್ ಶಾಸಕ ಎಂ.ವಿ ವೀರಭದ್ರಯ್ಯ ಚುನಾವಣೆ ನಿವೃತ್ತಿ ಘೋಷಣೆ!; ಕಾರಣವೇನು? ವಿಡಿಯೋ
ಚಿತ್ರದುರ್ಗ ಕೋಟೆಯ ಕಾವಲುಗಾರನ ಪತ್ನಿಯಾಗಿದ್ದ ಒನಕೆ ಓಬವ್ವ, ಹೈದರಾಲಿಯ ಸೈನ್ಯ ಕಳ್ಳಕಿಂಡಿಯ ಮೂಲಕ ಕೋಟೆಯ ಒಳನುಗ್ಗುತ್ತಿರುವುದನ್ನು ಕಂಡು, ಕೈಗೆ ಸಿಕ್ಕ ಒನಕೆಯಿಂದಲೇ ನುಸುಳುತ್ತಿದ್ದ ವೈರಿ ಸೈನಿಕರನ್ನು ಸದೆ ಬಡೆದು ಕೋಟೆಯನ್ನು ರಕ್ಷಿಸಿದ ಮಹಾನ್ ಧೈರ್ಯ ಶಾಲಿ ಹೆಣ್ಣು ಮಗಳು, ಆಕೆಯ ಗುಣ ನಮ್ಮ ಹೆಣ್ಣು ಮಕ್ಕಳಲ್ಲಿ ಬರಬೇಕು ಎಂದರು.
ರಾಜ್ಯ ಪ್ರಧಾನಕಾರ್ಯದರ್ಶಿ ಎನ್.ಗೋವಿಂದರಾಜು ಮಾತನಾಡಿ, 15ನೇ ಶತಮಾನದಲ್ಲಿ ಚಾಲ್ತಿಯಲ್ಲಿದ್ದ ಅಸ್ಪೃಷ್ಯತೆ, ಅಸಮಾನತೆಯನ್ನು ತೊಡೆದು ಹಾಕಲು ಕನಕದಾಸರರು ತಮ್ಮ ಜೀವಿತಾವಧಿಯಲ್ಲಿ ಬಹಳಷ್ಟು ಹೋರಾಟ ನಡೆಸಿದ್ದರು. ಶ್ರೀಕೃಷ್ಣನ ಭಕ್ತರಾಗಿ, ತಮ್ಮ ಕೀರ್ತನೆಗಳ ಮೂಲಕ ಚಾಟಿ ಬೀಸಿದ ಮಹನೀಯರಲ್ಲಿ ಅವರು ಮೊದಲಿಗರು. ಇವರು ಹಾಕಿಕೊಟ್ಟ ಸಮಾನತೆಯ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕಾದ ಅನಿವಾರ್ಯತೆ ಇಂದು ನಮ್ಮ ಮುಂದಿದೆ. ಹಾಗೆಯೇ ಕೋಟೆ ರಕ್ಷಣೆಗಾಗಿ ಹೋರಾಟ ನಡೆಸಿದ ಒನಕೆ ಓಬವ್ವ ಅವರ ಆದರ್ಶವನ್ನು ನಾವೆಲ್ಲರೂ ಮೈಗೂಡಿಸಿ ಕೊಳ್ಳಬೇಕಿದೆ. ಓದು, ಬರಹ ಇಲ್ಲದಿದ್ದರೂ ಸಮಯ ಪ್ರಜ್ಞೆಯಿಂದ ವೈರಿಗಳಿಂದ ಕೋಟೆ ರಕ್ಷಿಸಿದ ಆ ಮಹಾತಾಯಿಯನ್ನು ನಾಡಿನ ಎಲ್ಲ ಜನರು ಸ್ಮರಿಸಬೇಕಿದೆ ಎಂದರು.
ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ; ಕಠಿಣ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ
ಕಾರ್ಯಕ್ರಮದಲ್ಲಿ ಪಾಲಿಕೆಯ ಉಪಮೇಯರ್ ನರಸಿಂಹಮೂರ್ತಿ, ಪಾಲಿಕೆಯ ಸ್ಥಾಯಿಸಮಿತಿ ಅಧ್ಯಕ್ಷ ಶ್ರೀನಿವಾಸ್, ಮಂಜುನಾಥ್, ಜೆಡಿಎಸ್ ನಗರ ಘಟಕದ ಅಧ್ಯಕ್ಷ ವಿಜಯಕುಮಾರ್, ಸೋಲಾರ್ ಕೃಷ್ಣಮೂರ್ತಿ, ದೇವರಾಜು, ರಂಗನಾಥ್, ಜಿಲ್ಲಾ ಮಾಧ್ಯಮ ವಕ್ತಾರ ಮಧುಸೂಧನ್ ಸೇರಿದಂತೆ ಮಹಿಳಾ ವಿಭಾಗಗಳ ಮುಖಂಡರು ಪಾಲ್ಗೊಂಡಿದ್ದರು.
+ There are no comments
Add yours