ಬಿಜೆಪಿ ಕಚೇರಿಯಲ್ಲಿ ಒನಕೆ ಓಬವ್ವ, ಕನಕದಾಸ ಜಯಂತಿ ಆಚರಣೆ

1 min read

 

ಬಿಜೆಪಿ ಕಚೇರಿಯಲ್ಲಿ ಕನಕದಾಸ, ಒನಕೆ ಓಬವ್ವ ಜಯಂತಿ ಆಚರಣೆ

Tumkurnews
ತುಮಕೂರು; ಸಂತ ಶ್ರೇಷ್ಠ, ತ್ಯಾಗಮಯಿ, ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಪ್ರಮುಖರಾದ ಕೀರ್ತನಕಾರರು ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ದಾಂತಗಳಿಗೆ ಕಾಣಿಕೆಯನ್ನಿತ್ತವರು ಕನಕದಾಸರು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೈ.ಹೆಚ್ ಹುಚ್ಚಯ್ಯ ತಿಳಿಸಿದರು.
ಭಾರತೀಯರು ಕನಕದಾಸರ ನಡೆ, ನುಡಿಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬಿಜೆಪಿ ಕಚೇರಿಯಲ್ಲಿ 535ನೇ ಸಂತ ಶ್ರೇಷ್ಠ ಕನಕದಾಸರ ಜಯಂತಿ ಮತ್ತು ವೀರ ವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ. ಸಂಗೀತ ಪ್ರಪಂಚಕ್ಕೆ ತನ್ನದೇ ಆದಂತಹ ಕೊಡುಗೆಗಳನ್ನು ಮುಂಡಿಗೆಗಳ ರೂಪದಲ್ಲಿ ನೀಡಿದ್ದಾರೆ. ಸುಮಾರು 316 ಕೀರ್ತನೆಗಳು ಹಾಗೂ ಇನ್ನಿತರೆ ಸಾಹಿತ್ಯಗಳಲ್ಲಿ ಮುಖ್ಯ ಕಾವ್ಯಕೃತಿಗಳಾದ ಮೋಹನ ತರಂಗಿಣಿ, ನಳಚರಿತ್ರೆ, ರಾಮಧ್ಯಾನ ಚರಿತೆ, ಹರಿಭಕ್ತಸಾರ, ನೃಸಿಂಹಸ್ತವಗಳು ಪ್ರಮುಖವಾಗಿ ಕಂಡುಬರುತ್ತವೆ. ಇವರ ಶ್ರೇಷ್ಠ ಕೀರ್ತನೆಗಳನ್ನು ಪ್ರತಿಯೊಬ್ಬ ಧರ್ಮಿಯರೂ ಅಳವಡಿಸಿಕೊಳ್ಳಬೇಕು ಇಂತವರ ಜಯಂತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿ, ಸಾರ್ಥಕಪಡಿಸಿಕೊಳ್ಳುವಂತ ಸುವರ್ಣಾಕ್ಷರಗಳಲ್ಲಿ ಇರುವಂತಹ ಕಾರ್ಯವಾಗಿದೆ ಎಂದು ವೈ.ಹೆಚ್.ಹುಚ್ಚಯ್ಯ ವಿವರಿಸಿದರು.

ಹಲವು ನಾಯಕರು ಬಿಜೆಪಿಗೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ; ಬಿ.ಎಸ್.ವೈ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಎಸ್ ರವಿಶಂಕರ್, ಕನಕದಾಸರು ಸಂತ ತತ್ವಜ್ಞಾನಿ, ಕವಿ, ಸಂಗೀತಗಾರರಾಗಿದ್ದರು. ಇವರು ಐತಿಹಾಸಿಕ ವಿಶ್ವ ಪ್ರಸಿದ್ಧವಾಗಿದ್ದ ವಿಜಯನಗರ ಹಂಪಿಯ ಪತನವನ್ನು (1565) ಸಹ ನೋಡಿದ್ದವರು. ಇವರ ಶಂಬರಾಸುರ ವಧೆ, ಬಾಣಾಸುರ ವಧೆ, ಹರಿಹರ ಯುದ್ಧಗಳು ಹೀಗೆ ವೀರರಸ, ರೌದ್ರರಸ ಕಾವ್ಯದಲ್ಲಿ ಮೇಳೈಸಿವೆ ಎಂದರು.

ಬಿಜೆಪಿ ನೂತನ ಜಿಲ್ಲಾಧ್ಯಕ್ಷರಾಗಿ ಹೆಬ್ಬಾಕ ರವಿ ನೇಮಕ
ಸ್ವಾತಿಕ ಸತಿ ಒನಕೆ ಓಬವ್ವ; ಒನಕೆ ಓಬವ್ವ ಚಿತ್ರದುರ್ಗದ ಪಾಳೇಗಾರರ ರಾಜ ಮದಕರಿ ನಾಯಕರ ಸೈನ್ಯದಲ್ಲಿ ಕೋಟೆ ಕಾವಲುಗಾರ ಕಹಳೆ ಮುದ್ದಹನುಪ್ಪನವರ ಗೃಹಿಣಿಯಾಗಿದ್ದು, ಹೈದರಾಲಿ ಚಿತ್ರದುರ್ಗದ ಕೋಟೆಯನ್ನು ಕುತಂತ್ರದಿಂದ ವಶಪಡಿಸಿಕೊಳ್ಳಲು ಮುಂದಾದಾಗ, ಶತ್ರುಗಳನ್ನು ಏಕಾಂಗಿಯಾಗಿ ಎದುರಿಸಿ ವೀರ ಮರಣ ಹೊಂದಿ ಅಜರಾಮರಾದವರು. ಅವರು ಸ್ವಾತಿಕ ಸತಿಯಾಗಿ ಬಾಳಿ ಬೆಳಗಿದ ಓಬವ್ವ ಮಹಾಶಕ್ತಿಯಾಗಿ, ಶತ್ರು ಸೈನ್ಯದ ಎದೆ ನಡುಗಿಸಿ, ಅಮರರಾದವರು ಎಂದು ಹೆಚ್.ಎಸ್ ರವಿಶಂಕರ್ ಹೆಬ್ಬಾಕ ಸ್ಮರಿಸಿದರು.

ತುಮಕೂರು ಜಿಲ್ಲೆಯಲ್ಲಿ 21 ಲಕ್ಷ ಮತದಾರರು!; ತಿದ್ದುಪಡಿಗೆ ಅವಕಾಶ ನೀಡಿದ ಆಯೋಗ

About The Author

You May Also Like

More From Author

+ There are no comments

Add yours