ಪೊಲೀಸರಿಗೆ ಶುಭ ಸುದ್ದಿ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ

1 min read

ಪೊಲೀಸರಿಗೆ ಶುಭ ಸುದ್ದಿ ನೀಡಿದ ಆರಗ ಜ್ಞಾನೇಂದ್ರ; 4 ಸಾವಿರ ಕೋಟಿ ವೆಚ್ಚದಲ್ಲಿ ವಸತಿ ಸೌಲಭ್ಯ

Tumkurnews
ತುಮಕೂರು; ಪೊಲೀಸ್ ಇಲಾಖೆಯನ್ನು ಬಲವರ್ಧನೆಗೊಳಿಸಲು ಇಲಾಖೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಆದ್ಯತೆ ನೀಡಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರಿನಲ್ಲಿ 1.60 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಪೊಲೀಸ್ ಠಾಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತುಮಕೂರು ಜಿಲ್ಲೆಯಲ್ಲಿ 21 ಲಕ್ಷ ಮತದಾರರು!; ತಿದ್ದುಪಡಿಗೆ ಅವಕಾಶ ನೀಡಿದ ಆಯೋಗ
ಪೊಲೀಸ್ ವ್ಯವಸ್ಥೆಗೆ ಸರ್ಕಾರ ಸಾಕಷ್ಟು ಪ್ರಾಮುಖ್ಯತೆ ನೀಡಿದ್ದು, 200 ಕೋಟಿ ವೆಚ್ಚದಲ್ಲಿ 117 ಪೊಲೀಸ್ ಠಾಣೆಗಳನ್ನು ಕಟ್ಟಲಾಗುತ್ತಿದ್ದು, ಈ ಪೈಕಿ 20 ಠಾಣೆಗಳು ಉದ್ಘಾಟನೆಯಾಗುತ್ತಿದೆ. ಪೊಲೀಸ್ ವ್ಯವಸ್ಥೆಗೆ ಸೌಲಭ್ಯಗಳ ಕೊರತೆಯಿತ್ತು. ಬಾಡಿಗೆ ಕಟ್ಟಡದಲ್ಲಿ ಪೊಲೀಸ್ ಕಚೇರಿಯಿತ್ತು, ಪೊಲೀಸ್ ಸಿಬ್ಬಂದಿಗೆ ವಸತಿ ವ್ಯವಸ್ಥೆ, ಈಗ 4 ಸಾವಿರ ಕೋಟಿ ವೆಚ್ಚದಲ್ಲಿ ಶೇ.60 ರಷ್ಟು ಪೊಲೀಸರಿಗೆ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಶುಭ ಸುದ್ದಿ ನೀಡಿದರು.

ಅಡಿಕೆ ಸುಲಿಯಲು ಬಂದ ಯುವತಿ ನಾಪತ್ತೆ
ಎರಡು ಕೊಠಡಿಗಳ ಮನೆಗಳನ್ನು ಪೊಲೀಸರಿಗೆ ನೀಡುತ್ತಿದ್ದೇವೆ. ದಿನದ 24 ಗಂಟೆ ಕರ್ತವ್ಯ ನಿರ್ವಹಿಸುವ ಪೊಲೀಸರು ಜನರ ಮಾನ, ಪ್ರಾಣ, ಆಸ್ತಿ ರಕ್ಷಕರು. ಇವರಿಗೆ ಸ್ವಂತ ಸಮಯವೇ ಇರುವುದಿಲ್ಲ. ಮಾನಸಿಕವಾಗಿ ಕುಗ್ಗುತ್ತಾರೆ. ಅವರಿಗೆ ಹೊಸ ಮನೆ ಹಾಗೂ ಠಾಣೆ ಇದ್ದಲ್ಲಿ ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಸೀನ್ ಆಫ್ ಕ್ರೈಂ ಆಫೀಸರ್ಸ್ ಹಾಗೂ ಆನ್ ಲೈನ್ ದೂರು ದಾಖಲೆ ವ್ಯವಸ್ಥೆಯನ್ನು ಕರ್ನಾಟಕದ ರಾಜ್ಯದಲ್ಲಿ ಜಾರಿಗೆ ತರಲಾಗಿದೆ. ಈ ಯೋಜನೆಯಿಂದ ಜನಸಾಮಾನ್ಯರಿಗೆ ಬಹಳ ಅನುಕೂಲವಾಗಿದೆ ಮತ್ತು ಬೇರೆ ರಾಜ್ಯಗಳ ಅಧಿಕಾರಿಗಳು ನಮ್ಮ ಈ ಪೊಲೀಸ್ ವ್ಯವಸ್ಥೆಯನ್ನು ತಿಳಿಯಲು ಬರುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಹಿಂದೆ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ವರದಿ ಬರಲು 2 ರಿಂದ 3 ವರ್ಷ ಬೇಕಾಗುತ್ತಿತ್ತು. ಈಗ ಹುಬ್ಬಳ್ಳಿ ಹಾಗೂ ಬಳ್ಳಾರಿಯಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯಗಳು ಆರಂಭಗೊಂಡಿದ್ದು, 9 ಸಂಚಾರಿ ಪ್ರಯೋಗಾಲಯಗಳನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಇದ್ದಲ್ಲಿ ಉದ್ಯಮಿಗಳು ಹೆಚ್ಚು ಬಂಡವಾಳ ಹೂಡಲು ಬರುತ್ತಾರೆ. ಇಂದು 1.60 ಕೋಟಿ ರೂ. ವೆಚ್ಚದಲ್ಲಿ ಹುಳಿಯಾರಿನ ಪೊಲೀಸ್ ಕಟ್ಟಡ ಕಟ್ಟಿ ಲೋಕಾರ್ಪಣೆ ಮಾಡಲಾಗುತ್ತಿದೆ. ಇಂದು ಹುಳಿಯಾರು ಮತ್ತು ಚಿಕ್ಕನಾಯಕನಹಳ್ಳಿಯಲ್ಲಿ ಎರಡು ನೂತನ ಕಟ್ಟಡ ಉದ್ಘಾಟನೆಗೊಂಡಿವೆ ಎಂದರು.

About The Author

You May Also Like

More From Author

+ There are no comments

Add yours