ಅಡಿಕೆ ಸುಲಿಯಲು ಬಂದ ಯುವತಿ ನಾಪತ್ತೆ
Tumkurnews
ಶಿವಮೊಗ್ಗ; ಭದ್ರಾವತಿ ತಾಲೂಕು ಗುಮಡಘಟ್ಟ ಗ್ರಾಮದ ಪುಟ್ಟೆಗೌಡ ಎಂಬುವವರ ಮನೆಗೆ ಅಡಿಕೆ ಸುಲಿಯುವ ಕೆಲಸಕ್ಕಾಗಿ ಬಂದಿದ್ದ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕು ಬೀರೂರಿನ ಯುವತಿಯೋರ್ವಳು ನಾಪತ್ತೆಯಾಗಿದ್ದಾಳೆ.
ವಿದ್ಯಾರ್ಥಿಗಳಿಗೆ ಶುಭ ಸುದ್ದಿ! SSP ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ
ಬೀರೂರಿನ ರೂಪ ಗೋಪಾಲ ಎಂಬುವವರ ಮಗಳು ಐಶ್ವರ್ಯ(14) ಎಂಬ ಯುವತಿಯು ದಿ: 20/08/2022 ರಿಂದ ಕಾಣೆಯಾಗಿದ್ದಾಳೆ. ಈಕೆಯ ಎತ್ತರ 155 ಸೆ.ಮೀ., ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ದುಂಡುಮುಖ ಹೊಂದಿದ್ದು, ಕನ್ನಡ ಭಾಷೆ ಮಾತಾನಾಡುತ್ತಾಳೆ. ಕಾಣೆಯಾಗುವಾಗ ನೀಲಿ ಬಣ್ಣದ ಚೂಡಿದಾರ್ ಧರಿಸಿದ್ದಳು. ಈ ಯುವತಿಯನ್ನು ಕಂಡಲ್ಲಿ ಹೊಳೆಹೊನ್ನೂರು ಪೊಲೀಸ್ ಠಾಣೆಯ ದೂ.ಸಂ.: 08282-235494, 08182-261400, 9480803359 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ಮನವಿ ಮಾಡಿದೆ.
+ There are no comments
Add yours