ಕೊರಟಗೆರೆ ತಾಲ್ಲೂಕಿನ ಮೂವರು ನಾಪತ್ತೆ

1 min read

 

ಮೂವರು ನಾಪತ್ತೆ ಪ್ರಕರಣ ದಾಖಲು

Tumkurnews
ತುಮಕೂರು; ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 3 ಪ್ರತ್ಯೇಕ ಕಾಣೆ ಪ್ರಕರಣಗಳು ದಾಖಲಾಗಿವೆ.
ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿ 32 ವರ್ಷದ ಗೋವಿಂದರಾಜು, 23 ವರ್ಷದ ನಂದೀಶ್ ಕುಮಾರ್ ಬಿ.ಎಸ್ ಹಾಗೂ 52 ವರ್ಷದ ಲಿಂಗಣ್ಣ ಎಂಬ ವ್ಯಕ್ತಿ ಕಾಣೆಯಾಗಿದ್ದು, ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಪ್ರಕರಣ 1; ಕೊರಟಗೆರೆ ತಾಲ್ಲೂಕಿನ ಸಿ.ಎನ್. ದುರ್ಗ ಹೋಬಳಿ ವೆಂಕಟರಮಣನಹಳ್ಳಿ ಗ್ರಾಮದ ಗೋವಿಂದರಾಜು ಬಿನ್ ಕಂಬಣ್ಣ ಎಂಬ ವ್ಯಕ್ತಿಯು 2021ರ ನವೆಂಬರ್ 16ರಂದು ಬೆಳಿಗ್ಗೆ ಮನೆಯಿಂದ ಜಮೀನಿನ ಬಳಿ ಹೋಗಿ ಬರುವುದಾಗಿ ಹೇಳಿ ಹೋದವರು ಮರಳಿ ಹಿಂತಿರುಗಿರುವುದಿಲ್ಲ ಎಂದು ಈತನ ಪತ್ನಿ ಶಶಿಕಲಾ ಠಾಣೆಗೆ ದೂರು ನೀಡಿದ್ದಾರೆ.
ಕಾಣೆಯಾದ ವ್ಯಕ್ತಿಯು ಸೆಕ್ಯುರಿಟ್ ಗಾರ್ಡ್ ಕೆಲಸ ಮಾಡಿ ಕೊಂಡಿದ್ದು, 5.5 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ ಓದಲು ಬರೆಯಲು ಬರುತ್ತದೆ. ಮನೆಯಿಂದ ಹೋಗುವಾಗ ಪ್ಯಾಂಟ್ ಷರ್ಟ್ ಧರಿಸಿದ್ದನು.

ಕೈ ಮೇಲೆ ‘ರಿಯಲ್ ಸ್ಟಾರ್’ ಹಚ್ಚೆ ಹಾಕಿಸಿಕೊಂಡ ವ್ಯಕ್ತಿ ನಾಪತ್ತೆ
ಪ್ರಕರಣ 2; ಕೊರಟಗೆರೆ ತಾಲ್ಲೂಕಿನ ಚೀಲಗಾನಹಳ್ಳಿ ಗ್ರಾಮದ ನಂದೀಶ್ ಕುಮಾರ್ ಬಿ.ಎಸ್. ಎಂಬ ಯುವಕನು 2022ರ ಜುಲೈ 29ರಂದು ಬೆಳಿಗ್ಗೆ 9.45 ಗಂಟೆಗೆ ಕೊರಟಗೆರೆ ಟೌನ್‍ಗೆ ಹೋಗುವುದಾಗಿ ಹೇಳಿ ಹೋಗಿದ್ದು, ಹಿಂದಿರುಗಿ ಬಂದಿರುವುದಿಲ್ಲ. ಈತನು ಹುಟ್ಟಿನಿಂದ ಕಿವುಡ ಮತ್ತು ಮೂಗನಾಗಿದ್ದು, ಸನ್ನೆಯ ಮೂಲಕ ಮಾತನಾಡುತ್ತಾನೆ ಎಂದು ಈತನ ತಾಯಿ ಮಂಜುಳಾ ಠಾಣೆಗೆ ದೂರು ನೀಡಿದ್ದಾರೆ.
ಈತನ ಎಡಗೈ ಮೇಲೆ ಅಮ್ಮ ಎಂಬ ಹಚ್ಚೆ ಗುರುತಿರುತ್ತದೆ. ಬಲಗಾಲಿನಲ್ಲಿ ಹಳೆ ಗಾಯದ ಗುರುತು ಇರುತ್ತದೆ.
ಕಾಣೆಯಾದ ಯುವಕನು 5.6 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಮನೆಯಿಂದ ಹೋಗುವಾಗ ಹಳದಿ ಬಣ್ಣದ ಕೆಂಪು ಗೆರೆಗಳುಳ್ಳ ರೆಡಿಮೇಡ್ ಶರ್ಟ್ ಸಿಮೆಂಟ್ ಬಣ್ಣದ ಬರ್ಮಡ ನಿಕ್ಕರ್ ಧರಿಸಿದ್ದನು.
ಪ್ರಕರಣ 3; ಕೊರಟಗೆರೆ ತಾಲ್ಲೂಕಿನ ಕಸಬ ಹೋಬಳಿ ಕೆರೆಯಾಗಲಹಳ್ಳಿ ಗ್ರಾಮದ ಲಿಂಗಣ್ಣ ಎಂಬ ವ್ಯಕ್ತಿಯು 2022ರ ಸೆಪ್ಟೆಂಬರ್ 30ರಂದು ಕುರಿ ಮೇಯಿಸಲು ಹೋಗಿದ್ದು, ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಕುರಿಗಳನ್ನು ನೋಡಿಕೊಳ್ಳಲು ಬೇರೊಬ್ಬರಿಗೆ ಹೇಳಿ ಹೋದವನು ಮರಳಿ ಬಂದಿರುವುದಿಲ್ಲ ಎಂದು ಈತನ ತಮ್ಮ ಹನುಮಂತರಾಯಪ್ಪ ಠಾಣೆಗೆ ದೂರು ನೀಡಿದ್ದಾರೆ. ಕಾಣೆಯಾದ ವ್ಯಕ್ತಿಯು ವ್ಯವಸಾಯ ಮಾಡಿಕೊಂಡಿದ್ದು, 5.2 ಅಡಿ ಎತ್ತರ, ಗುಂಡು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ ಮಾತನಾಡುತ್ತಾನೆ. ಮನೆಯಿಂದ ಹೋಗುವಾಗ ಬಿಳಿ ಅಂಗಿ ಬಿಳಿ ಪಂಚೆ ಧರಿಸಿದ್ದನು. ಕಾಣೆಯಾದವರ ಬಗ್ಗೆ ಸುಳಿವು ಸಿಕ್ಕವರು ದೂ.ವಾ.ಸಂ. 08138-232136, 08137-282378, 0816-2278000/112 ಅಥವಾ ಮೊ.ಸಂ. 9480802988/54/00ಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಬ್‍ಇನ್ಸ್ ಪೆಕ್ಟರ್ ಮನವಿ ಮಾಡಿದ್ದಾರೆ.

 

About The Author

You May Also Like

More From Author

+ There are no comments

Add yours