ವೆಂಕಟೇಶ ಮೊಣಕೈ ಮೇಲೆ ಅಮ್ಮ ಮತ್ತು ನಾನು ಎಂಬ ಅಚ್ಚೆ ಹಾಕಿಸಿಕೊಂಡಿರುತ್ತಾನೆ
Tumkurnews
ತುಮಕೂರು; ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಜ್ಜಪ್ಪನಹಳ್ಳಿ ಗ್ರಾಮದ ವೆಂಕಟೇಶ ವೈ.ಎಸ್. ಎಂಬ ವ್ಯಕ್ತಿಯು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಕಾಣೆಯಾದ ವ್ಯಕ್ತಿ ಅಕ್ಟೋಬರ್ 24 ರಂದು ಸಂಜೆ 4 ಗಂಟೆಯ ಸಮಯದಲ್ಲಿ ಅಜ್ಜಪ್ಪನಹಳ್ಳಿಯ ತನ್ನ ಮನೆಯಿಂದ ಹೊರಹೋದವನು ವಾಪಸ್ಸು ಬರದೇ ಕಾಣೆಯಾಗಿರುತ್ತಾನೆ. ಈತನು 5.6 ಅಡಿ ಎತ್ತರ, ದುಂಡುಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಬಲಗೈ ಮುಂಗೈ ಮೇಲೆ ರಿಯಲ್ ಸ್ಟಾರ್, ಬಲ ಮೊಣಕೈ ಮೇಲೆ ಅಮ್ಮ ಮತ್ತು ನಾನು ಎಂಬ ಅಚ್ಚೆ ಹಾಕಿಸಿಕೊಂಡಿರುತ್ತಾನೆ. ಮನೆಯಿಂದ ಹೊರಹೋಗುವಾಗ ಹಳದಿ ಮಿಶ್ರಿತ ಟೀಶರ್ಟ್ ಹಾಗೂ ಸಿಮೆಂಟ್ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.
ಕಾಣೆಯಾದ ವ್ಯಕ್ತಿಯ ಕುರಿತು ಮಾಹಿತಿ ಸಿಕ್ಕಲ್ಲಿ ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಆರಕ್ಷಕ ಉಪ-ನಿರೀಕ್ಷಕರಿಗೆ 0816-2278381 ಸಂಪರ್ಕಿಸಬಹುದಾಗಿದೆ ಎಂದು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
+ There are no comments
Add yours