ಬಿ.ಸಿ ನಾಗೇಶ್ ತಿಪಟೂರಿನ ಮರ್ಯಾದೆ ಕಳೆಯುತ್ತಿದ್ದಾರೆ; ಟೂಡಾ ಶಶಿಧರ್ ಕಿಡಿ, ರಾಜೀನಾಮೆಗೆ ಆಗ್ರಹ

1 min read

ರಾಜೀನಾಮೆ ನೀಡಿ ತಿಪಟೂರಿನ ಮರ್ಯಾದೆ ಉಳಿಸಿ; ಬಿ.ಸಿ ನಾಗೇಶ್’ಗೆ ಟೂಡಾ ಶಶಿಧರ್ ಆಗ್ರಹ

Tumkurnews
ತಿಪಟೂರು: ಗೊಂದಲಮಯ ನಿರ್ಧಾರಗಳ ಮೂಲಕ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕುಸಿತಕ್ಕೆ ಕಾರಣರಾಗಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟೂಡಾ ಶಶಿಧರ್ ಆಗ್ರಹಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಡವರ ಮಕ್ಕಳ ಶಿಕ್ಷಣದ ಹಕ್ಕುಗಳನ್ನು ಇಂದಿನ ಸರ್ಕಾರದ ಜನವಿರೋಧಿ ನೀತಿ ಕಿತ್ತುಕೊಳ್ಳುತ್ತಿದೆ ಎಂದು ದೂರಿದರು.

ಸಚಿವ ಬಿ.ಸಿ ನಾಗೇಶ್ ವಿರುದ್ಧ ದೇಶದ್ರೋಹ ಆರೋಪ; ಪೊಲೀಸ್ ದೂರು
ರಾಜ್ಯದಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರವನ್ನು ಹದಗೆಡಿಸುವಲ್ಲಿ ಪ್ರಮುಖ ಪಾತ್ರಧಾರಿ ಬಿ.ಸಿ.ನಾಗೇಶ್ ತಿಪಟೂರಿನ ಮರ್ಯಾದೆ ಕಳೆದಿದ್ದು ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು‌.
ಬಿ.ಸಿ.ನಾಗೇಶ್ ಶಿಕ್ಷಣ ಸಚಿವರಾದ ನಂತರದಲ್ಲಿ ಸರ್ಕಾರದ ಮಟ್ಟದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ತೆಗೆದುಕೊಳ್ಳುತ್ತಿರುವ ಜನವಿರೋಧಿ ನಿರ್ಧಾರಗಳು ತಿಪಟೂರಿನ ಮರ್ಯಾದೆ ಹಾಳುಮಾಡುತ್ತಿದೆ, ನಾಗೇಶ್ ರಾಜೀನಾಮೆ ನೀಡುವ ಮೂಲಕ‌ ತಿಪಟೂರಿನ ಘನತೆ ಉಳಿಸಬೇಕು ಎಂದರು.
ಇತ್ತೀಚೆಗಷ್ಟೇ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಂದ ಶುಲ್ಕ ವಸೂಲಿಗೆ ಸುತ್ತೋಲೆ ಹೊರಡಿಸಲಾಗಿದೆ, ಹೈಸ್ಕೂಲ್ ಮಕ್ಕಳಿಗೆ ನೀಡುತ್ತಿದ್ದ ಸೈಕಲ್ ಕೂಡ ನಿಲ್ಲಿಸಲಾಗಿದೆ, ಇಂತಹ ಜನವಿರೋಧಿ ನೀತಿ ಅನುಸರಿಸುವ ಸಚಿವರು ರಾಜ್ಯದ ಬಡವರಿಗೆ ಮಾರಕ ಎಂದು ದೂರಿದರು.
ದಲಿತರು, ಹಿಂದುಳಿದ ವರ್ಗದ, ರೈತರ ಒಟ್ಟಾರೆ ಬಡ ಕುಟುಂಬದ ಮಕ್ಕಳು ಶಿಕ್ಷಣವನ್ನೇ ಪಡೆಯದೇ ಇವರಿಗೆ ಸ್ಪರ್ಧೆ ನೀಡದಂತೆ ತಡೆಯುವ ಹಿಡನ್ ಅಜೆಂಡಾ ಇದೆ ಎಂದು ಆರೋಪಿಸಿದರು.

ತುಮಕೂರು; ಬಿ.ವೈ ವಿಜಯೇಂದ್ರ ಕಾಲಿಗೆ ಬಿದ್ದ ಪೊಲೀಸ್ ಹುದ್ದೆ ಆಕಾಂಕ್ಷಿಗಳು
ರಾಜ್ಯದಲ್ಲಿ ಈ ಹಿಂದೆ ಶಿಕ್ಷಣ ಸಚಿವರಾಗಿದ್ದವರೆಲ್ಲಾ ವಿಶ್ವಕ್ಕೆ ಮಾದರಿಯಾಗುವಂತೆ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಗೆ ಕಾರ್ಯಕ್ರಮ ರೂಪಿಸಿದ್ದಾರೆ ಆದರೆ, ಬಿ.ಸಿ.ನಾಗೇಶ್ ಸಚಿವರಾದ ನಂತರ ಸರ್ಕಾರ ಶಿಕ್ಷಣ ವ್ಯವಸ್ಥೆಯನ್ನೇ ಹಾಳುಗೆಡುವುತ್ತಿದೆ ಎಂದು ಹರಿಹಾಯ್ದರು.
ಸರ್ಕಾರಿ ಶಾಲೆ ಮಕ್ಕಳಿಗೆ ಹಿಂದಿನ ಸರ್ಕಾರಗಳು ನೀಡಿರುವ ಎಲ್ಲಾ ಸೌಲಭ್ಯವನ್ನು ಇಂದಿನ ಸರ್ಕಾರ ಕಿತ್ತುಕೊಳ್ಳಲು ಆರಂಭಿಸಿದೆ ಎಂದರು.
ಉಚಿತ ಪಠ್ಯಪುಸ್ತಕ, ಬಿಸಿಯೂಟ, ಹಾಲು, ಮೊಟ್ಟೆ, ಸಮವಸ್ತ್ರ, ಶೂ, ಸೈಕಲ್ ನೀಡಲಾಗಿತ್ತು, ಇಂದಿನ ಸರ್ಕಾರ ಎಲ್ಲವನ್ನೂ ತೆಗೆದುಹಾಕುವ ಹುನ್ನಾರ ನಡೆಸಿದೆ. ಪಠ್ಯಪುಸ್ತಕ ಅವಾಂತರ ಮಾಡಲಾಯಿತು, ನಾಡಿನ ಲೇಖಕರು, ದಾರ್ಶನಿಕರಿಗೆ ಅವಮಾನ‌ಮಾಡಲಾಯಿತು, ಮಕ್ಕಳ ಸಮವಸ್ತ್ರ ಬಳಕೆಗೆ ಯೋಗ್ಯವಿಲ್ಲ ಎಂಬಂತಾಗಿದೆ, ಇದೆಲ್ಲಾ ಅವಾಂತಕ್ಕೂ ಶಿಕ್ಷಣ ಸಚಿವರ ಜನವಿರೋಧಿ ನಡೆಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೇಕಾರರ ಒಕ್ಕೂಟದ ರಾಜ್ಯ ಸಮಾವೇಶ; ತುಮಕೂರಿನಲ್ಲಿ ಭರದ ಸಿದ್ಧತೆ

About The Author

You May Also Like

More From Author

+ There are no comments

Add yours