ಬಿಜಯೇಂದ್ರ ಕಾಲಿಗೆ ಬಿದ್ದ ಪೊಲೀಸ್ ಆಕಾಂಕ್ಷಿಗಳು
Tumkurnews
ತುಮಕೂರು; ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ
ಪೊಲೀಸ್ ಆಕಾಂಕ್ಷಿಗಳು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಕಾಲಿಗೆ ಬಿದ್ದ ಪ್ರಸಂಗ ನಡೆದಿದೆ.
ಸಿದ್ಧಗಂಗಾ ಮಠದಲ್ಲಿ ಶನಿವಾರ ವಿಜಯೇಂದ್ರರನ್ನು ಭೇಟಿ ಮಾಡಿದ ಪೊಲೀಸ್ ಆಕಾಂಕ್ಷಿಗಳು ತಮ್ಮ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಿದರು. ಪೊಲೀಸ್ ನೇಮಕಾತಿ ವಯೋಮಿತಿಯನ್ನು 25ರಿಂದ 27 ಹಾಗೂ 27ರಿಂದ 29ಕ್ಕೆ ಹೆಚ್ಚಿಸಬೇಕು ಎಂದು ವಿಜಯೇಂದ್ರರ ಕಾಲಿಗೆ ಬಿದ್ದು ಪರಿಪರಿಯಾಗಿ ಬೇಡಿಕೊಂಡರು.
ಈ ವೇಳೆ ಮಾತನಾಡಿದ ವಿಜಯೇಂದ್ರ, ಸಿಎಂ ಗಮನಕ್ಕೆ ತಂದು ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ತಮಿಳು ನಾಡು ಸೇರಿದಂತೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದ ಪೊಲೀಸ್ ನೇಮಕಾತಿ ವಯೋಮಿತಿ ಕಡಿಮೆ ಇದೆ, ಈ ಬಗ್ಗೆ ಯುವಕರು ಆತಂಕದಲ್ಲಿದ್ದಾರೆ. ನಾನು ಸಹಾನುಭೂತಿಯಿಂದ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ ಎಂದರು.
ವಿಜಯೇಂದ್ರಗೆ ಪರಿಷತ್ ಟಿಕೆಟ್ ತಪ್ಪಿಸಿದ್ದು ಯಾರು?; ಬಹಿರಂಗ ಪಡಿಸಿದ ಅರಗ ಜ್ಞಾನೇಂದ್ರ
ಚಿತ್ರ; ಪೊಲೀಸ್ ಹುದ್ದೆ ಆಕಾಂಕ್ಷಿಗಳು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬಿ.ವೈ ವಿಜಯೇಂದ್ರಗೆ ಮನವಿ ಸಲ್ಲಿಸಿದರು.
ಬಿಎಸ್ ವೈ ಕುಟುಂಬದಿಂದ ಕುಣಿಗಲ್ ನಲ್ಲಿ ಗ್ರಹಣ ದೋಷ ಪರಿಹಾರ ಪೂಜೆ
+ There are no comments
Add yours