ವಿವಾದದಿಂದ ಚಿತ್ರಕ್ಕೆ ವ್ಯಾಪಕ ಪ್ರಚಾರ, ಡಾಲಿಗೆ ಪ್ರಚಂಡ ಜನ ಬೆಂಬಲ
ಬೆಂಗಳೂರು; ನಟ ಡಾಲಿ ಧನಂಜಯ ಅಭಿನಯದ ಹೆಡ್ ಬುಷ್ ಚಲನ ಚಿತ್ರದಲ್ಲಿ ವೀರಶೈವ ಲಿಂಗಾಯತ ಧರ್ಮಕ್ಕೆ ಅವಹೇಳನ ಮಾಡಲಾಗಿದೆ ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಡಾಲಿ ಧನಂಜಯ ಪರವಾಗಿ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಬಡವರ ಮಕ್ಕಳನ್ನು ಬೆಳೆಯಲು ಬಿಡಿ ಎಂಬ ಅಭಿಯಾನ ಶುರುವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ‘ಬಡವರ ಮಕ್ಕಳನ್ನು ಬೆಳೆಯಲು ಬಿಡಿ’ ಎಂದು ಡಾಲಿ ಅಭಿಮಾನಿಗಳು ವಿರೋಧಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಮುಖ್ಯವಾಗಿ ಈ ಹಿಂದೆ ಹಲವು ಚಿತ್ರಗಳಲ್ಲಿ ಹಿಂದೂಗಳನ್ನು ಅವಹೇಳನ ಮಾಡಿದಾಗ ಆಗದ ವಿವಾದ ಈಗ ಏಕೆ ಆಗುತ್ತಿದೆ? ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ.
ಉಪೇಂದ್ರನ ಯಾಕೆ ಪ್ರಶ್ನಿಸಿಲ್ಲ?; ‘ನಟ ಉಪೇಂದ್ರ, ತನ್ನ ಉಪೇಂದ್ರ ಚಿತ್ರದಲ್ಲಿ ಬ್ರಾಹ್ಮಣನಿಗೆ ಸಾರಾಯಿ ಕುಡಿಸಿದಾಗ, ಗಣಪತಿ ದೇವರಿಗೆ ಅಪಮಾನ ಮಾಡಿದಾಗ ಯಾವ ಜನಾಂಗಿಯ ನಿಂದನೆಯಾಗಲಿ ಮತ್ತು ಧಾರ್ಮಿಕ ನಿಂದನೆಯಾಗಲಿ ಆಗಲಿಲ್ಲ. ಯಾಕೆಂದರೆ ಆತ ಬ್ರಾಹ್ಮಣ ಎಂಬ ಕಾರಣಕ್ಕೆ. ಆದರೆ ಡಾಲಿ ಧನಂಜಯ ಯಾವುದೇ ಇಂತಹ ಕೃತ್ಯ ಎಸಗದೆ ಹೋದರು ಆತ ಅಪರಾಧಿ. ವೀರಗಾಸೆಯ ಹೆಸರಿನಲ್ಲಿ ಜನಾಂಗಿಯ ನಿಂದನೆ ಮತ್ತು ಧಾರ್ಮಿಕ ನಿಂದನೆಯ ಆರೋಪ ಮಾಡಲಾಗುತ್ತಿದೆ. ಯಾಕೆಂದರೆ ಡಾಲಿ ಧನಂಜಯ ಲಿಂಗಾಯತ (ಅಬ್ರಾಹ್ಮಣ). ಇಷ್ಟೆ ಬ್ರಾಹ್ಮಣನಿಗು, ಅಬ್ರಾಹ್ಮಣನಿಗೂ ಇರುವ ವ್ಯತ್ಯಾಸ’ ಎಂದು ಡಾಲಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನ ಧನಂಜಯ ಪರ ನಿಲ್ತಾರೆ; “ಕಿಡಿಗೇಡಿಗಳ ಹೀನ ಕೃತ್ಯಕ್ಕೆ ಕಳೆದುಕೊಳ್ಳಬೇಡಿ ಕನ್ನಡ ರತ್ನವ. ಧನಂಜಯ ವಿಚಲಿತರಾಗಬೇಡಿ, ನಿಮ್ಮೊಂದಿಗೆ ನಾವಿದ್ದೇವೆ.
ಹೆಡ್ ಬುಷ್ ಸಿನಿಮಾ ಬಿಡುಗಡೆ ಆದಾಗಿನಿಂದ ಸಿನಿಮಾ ಬಗ್ಗೆ ನೆಗೆಟಿವ್ ಮಾತನಾಡೋರು, ಸಿನಿಮಾದ ಚೆನ್ನಾಗಿ ಓಡ್ತಿದ್ದರೂ ಸುಮ್ ಸುಮ್ನೆ ಫ್ಲಾಪ್ ಅನ್ನೋರು. ಈಗ ನೋಡಿದರೆ ವಿವಾದ! ಇವೆಲ್ಲಾ ಆಕಸ್ಮಿಕವಾಗಿ ಆಗ್ತಿದೆ ಅನ್ನುವಷ್ಟು ಮುಗ್ಧತೆ ಮಾತ್ರ ಬೇಡ. ‘ಮೊದಲು ಮಾನವನಾಗು’ ಅಂತ ಅಂದಿದ್ದಕ್ಕೆ ಆಗ್ತಿರೋ ಟಾರ್ಗೆಟ್ ಗಳು ಇವೆಲ್ಲಾ. ಆಗಲಿ, ಒಬ್ಬ ಕಲಾವಿದ ‘ಮನುಷ್ಯನಾಗು’ ಅಂದಿದ್ದಕ್ಕೆ ಆತನನ್ನು ತುಳಿಯಕ್ಕೆ ನೂರು ಜನರಾದರೆ, ಮನುಷ್ಯತ್ವ ಇರೋರು ಸಾವಿರ ಜನರು ಧನಂಜಯನ ಜೊತೆ ನಿಲ್ತಾರೆ. ಅಪ್ಪಟ ಕನ್ನಡ ಮನಸ್ಸಿನ ಧನಂಜಯ ಗೆಲ್ಲಬೇಕು. ಧನಂಜಯನ ಜೊತೆ ನಮ್ಮ ತರಹದ ಕನ್ನಡ ಮನಸ್ಸಿನ, ಮನುಷ್ಯತ್ವದ ಮಂದಿ ಸಾಕಷ್ಟು ಜನರಿದ್ದಾರೆ.
ಬಡುವ್ರ ಮಕ್ಳು ಬೆಳೀಬೇಕು ಕಣ್ರಯ್ಯ, ಇದೊಂದು ಡೈಲಾಗ್ ಕೆಲವರಿಗೆ ಮೆಣಸಿಕಾಯಿ ಇಟ್ಟಂಗಾಗಿದೆ” ಎಂದು ಧನಂಜಯ ಅಭಿಮಾನಿಗಳು ತಮ್ಮ ಫೇಸ್ ಬುಕ್ ಪೇಜ್’ನಲ್ಲಿ ಬರೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಡಾಲಿ ಧನಂಜಯ ಪರವಾಗಿ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ವಿವಾದದಿಂದ ಚಿತ್ರಕ್ಕೆ ಮತ್ತಷ್ಟು ಪ್ರಚಾರ ಸಿಕ್ಕಂತಾಗಿದೆ ಎನ್ನುವುದು ಅಭಿಮಾನಿಗಳ ಮಾತಾಗಿದೆ.
ನಟ ಧನಂಜಯ ವಿರುದ್ಧ ಚಿತ್ರರಂಗದಲ್ಲಿ ಸಂಚು, ವೀರಶೈವ ಲಿಂಗಾಯತರನ್ನು ತುಳಿಯುತ್ತಿದ್ದಾರೆ; ಅಭಿಮಾನಿಗಳ ಆಕ್ರೋಶ
+ There are no comments
Add yours