ನಟ ಧನಂಜಯ ವಿರುದ್ಧ ಚಿತ್ರರಂಗದಲ್ಲಿ ಸಂಚು, ವೀರಶೈವ ಲಿಂಗಾಯತರನ್ನು ತುಳಿಯುತ್ತಿದ್ದಾರೆ; ಅಭಿಮಾನಿಗಳ ಆಕ್ರೋಶ

1 min read

 

ಡಾಲಿ ಧನಂಜಯ ವಿರುದ್ಧ ಸಂಚು, ಚಿತ್ರರಂಗದಲ್ಲಿ ಬೆಳೆಯಲು ಬಿಡುತ್ತಿಲ್ಲ; ಅಭಿಮಾನಿಗಳ‌ ಆಕ್ರೋಶ

ಬೆಂಗಳೂರು; ಡಾಲಿ ಧನಂಜಯ್ ಅಭಿನಯದ ಹೆಡ್ ಬುಷ್ ಕನ್ನಡ ಚಲನ ಚಿತ್ರ ವಿವಾದಕ್ಕೀಡಾದ ಬೆನ್ನಲ್ಲೇ ವೀರಶೈವ ಲಿಂಗಾಯತ ಧರ್ಮದಲ್ಲೇ ಡಾಲಿ ಧನಂಜಯಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಹೆಡ್ ಬುಷ್ ಚಲನಚಿತ್ರದಲ್ಲಿ ವೀರಭದ್ರ ಸ್ವಾಮಿ ಹಾಗೂ ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲಾಗಿದೆ. ವೀರಶೈವ ಲಿಂಗಾಯತ ಸಮುದಾಯದ ಕೆಲವು ಮಂದಿ ಹೆಡ್ ಬುಷ್ ಚಲನಚಿತ್ರವನ್ನು ಬಹಿಷ್ಕರಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಡಾಲಿ ಧನಂಜಯ ವಿರುದ್ಧ ಷಡ್ಯಂತ್ರ ನಡೆಸಲಾಗುತ್ತಿದೆ. ವೀರಶೈವ ಲಿಂಗಾಯತ ಸಮುದಾಯದ ಕಲಾವಿದರನ್ನು ಚಿತ್ರರಂಗದಿಂದ ದೂರ ಇಡುವ ಪಿತೂರಿ ನಡೆಸುತ್ತಿದೆ ಎಂಬ ಆಕ್ರೋಶವೂ ವ್ಯಕ್ತವಾಗಿದೆ. ಡಾಲಿ ಧನಂಜಯ ಪರವಾಗಿ ಅನೇಕರು ತಮ್ಮ ಅಭಿಪ್ರಾಯಗಳನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ತುಳಿಯುವ ಪ್ರಯತ್ನ ಬೇಡ; ‘ಬಡವರ ಮಕ್ಕಳನ್ನು ಬೆಳೆಸಿ, ಹಾರೈಸಿ. ಅದನ್ನು ಬಿಟ್ಟು ತುಳಿಯುವ ಪ್ರಯತ್ನ ಬೇಡ’ ಎಂದು ವ್ಯಕ್ತಿಯೊಬ್ಬರು ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು, ಈ ಬರಹ ಸಾಕಷ್ಟು ಶೇರ್ ಆಗುತ್ತಿದೆ.
“ನಾನು ಸಂಪೂರ್ಣ ಚಿತ್ರ ನೋಡಿದ್ದೇನೆ, ನಾನು ಶ್ರೀ ವೀರಭದ್ರ ಸ್ವಾಮಿಯವರಿಗೆ ಅತ್ಯಂತ ಪರಮ ಭಕ್ತ. ಇಲ್ಲಿ ಉದ್ದೇಶ ಇರೋದು ಹಿಂದೆ ಒಬ್ಬನಿಗೆ ‘ಮೊದಲು ಮಾನವನಾಗು’ ಎಂದು ಧನಂಜಯ ಅವರು ಹೇಳಿದ್ದು, ಇಂದು ಅದರ ಸಂಚು ರೂಪಿಸುವ ತಂತ್ರ ನಡೆಯುತ್ತಿದೆ. ಮೊದಲಿಗೆ ಧನಂಜಯ ಅವರನ್ನು ಎಡಪಂಥೀಯ ಅನ್ನೋದನ್ನು ಬಿಂಬಿಸಿ ಜನರಲ್ಲಿ ಅವನ ವಿರುದ್ಧ ಕೆಟ್ಟ ಭಾವನೆ ಮೂಡಿಸಿ ಅವರನ್ನು ತೇಜೋವಧೆ ಮಾಡಲು ಹೊರಟಿರುವುದು ಇಲ್ಲಿ ಎದ್ದು ಕಾಣುತ್ತಿದೆ. ಯಾಕೆ ಲಿಂಗಾಯಿತರು ಯಾವ ಕ್ಷೇತ್ರದಲ್ಲೂ ಬೆಳೆಯೋ ಆಗಿಲ್ವಾ? ಧನಂಜಯ ಅವರು ವಿದ್ಯಾವಂತರು, ಸಾಹಿತ್ಯ ತಿಳಿದಿರುವವರು, ಜೊತೆಗೆ ಅಲ್ಲಮಪ್ರಭು ಅವರಂತಹ ಮಹಾಶರಣರ ನಟನೆಯನ್ನು ಮಾಡಿದವರು, ಅವರಿಗೆ ಯಾವುದೇ ಕ್ಷೇತ್ರದಲ್ಲಿ ಯಾರ ಮೇಲೆ ಅವಮಾನ ಮಾಡುವ ಉದ್ದೇಶವಿಲ್ಲ ಅವರು ವೀರಭದ್ರಸ್ವಾಮಿಯ ಪರಮ ಭಕ್ತನಾಗಿದ್ದು, ವೀರಗಾಸೆಗೆ ಅವಮಾನಿಸುವ ಯಾವ ಅಂಶವು ಇಲ್ಲದಂತೆ ನೋಡಿಕೊಂಡಿದ್ದಾರೆ. ದೂಷಿಸುವವರು ದಯವಿಟ್ಟು ಸಿನಿಮಾ ನೋಡಿ ಕೂಲಂಕುಶವಾಗಿ ವಿಮರ್ಶಿಸಬೇಕಾಗಿ ಕೇಳಿಕೊಳ್ಳುತ್ತೇವೆ. ಸುಖಾಸುಮ್ಮನೆ ಇಲ್ಲ ಸಲ್ಲದ ಅಪಪ್ರಚಾರ ಬೇಡ, ತುಳಿಯುವ ಕುತಂತ್ರ ಬೇಡ” ಎಂದು ಡಾಲಿ ಧನಂಜಯ ಅಭಿಮಾನಿಗಳು ಮನವಿ ಮಾಡಿದ್ದಾರೆ.

About The Author

You May Also Like

More From Author

+ There are no comments

Add yours