ಪುರೋಹಿತರು ಜನರ ನಿರೀಕ್ಷೆಗೆ ತಕ್ಕಂತೆ, ಆಚಾರ, ವಿಚಾರ ಹೊಂದಬೇಕು; ಹಿರೇಮಠ ಶ್ರೀ

1 min read

 

Tumkurnews
ತುಮಕೂರು; ಜನರು ನಮಗೆ ಗೌರವ ಕೊಡುತ್ತಾರೆ ಎಂದರೆ ಅವರು ನಮ್ಮಿಂದ ಕೆಲವನ್ನು ನಿರೀಕ್ಷಿಸುತ್ತಾರೆ. ಹಾಗಾಗಿ ಪುರೋಹಿತರಾಗಿರುವ ನಾವುಗಳು, ಜನರ ನಿರೀಕ್ಷೆಗೆ ತಕ್ಕಂತೆ, ಆಚಾರ, ವಿಚಾರ, ಉಡುಗೆ, ತೊಡುಗೆಗಳನ್ನು ಹೊಂದುವುದು ಸೂಕ್ತ ಎಂದು ಹಿರೇಮಠಾಧ್ಯಕ್ಷ ಡಾ.ಶ್ರೀ ಶಿವಾನಂದ ಶಿವಾಚಾರ್ಯಸ್ವಾಮೀಜಿ ತಿಳಿಸಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾ ತುಮಕೂರು ಜಿಲ್ಲಾ ಶಾಖೆ ಉದ್ಘಾಟನೆ ಹಾಗೂ ಶ್ರೀವೀರಭದ್ರೇಶ್ವರ ಜಯಂತೋತ್ಸವದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿ ಜೀವನವು ಯಶಸ್ವಿಯಾಗಿ ಸಾರ್ಥಕತೆ ಕಾಣಬೇಕಾದರೆ ಕಲಿಕೆಯ ದಾಹ ಬೇಕು; ಕರ್ನಲ್ ಬಾಲಚಂದ್ರ ಮೂರ್ತಿ
ಮಂತ್ರಗಳ ಸ್ಪಷ್ಟ ಉಚ್ಛಾರಣೆಯ ಜೊತೆಗೆ, ಅವುಗಳ ಅರ್ಥವನ್ನು ಜನರಿಗೆ ಬಿಡಿಸಿ ಹೇಳುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು, ಎಂದಿಗೂ ಮಂತ್ರಕ್ಕಾಗಿ ಮೊಬೈಲ್ ಮೊರೆ ಹೋಗಬಾರದು ಎಂದು ಕಿವಿ ಮಾತು ಹೇಳಿದರು.
ತುಮಕೂರಿನ ಹಿರೇಮಠದ ವತಿಯಿಂದ ಹಳೆ ನಿಜಗಲ್ ಬಳಿ ನಿರ್ಮಾಣವಾಗಿರುವ ಶ್ರೀವೀರಭದ್ರಸ್ವಾಮಿ ತಪೋವನದಲ್ಲಿ ವೇದೋಪನಿಷತ್ತಿನ ಜೊತೆಗೆ ರುದ್ರ, ಅಷ್ಟೋತ್ತರ ಸೇರಿದಂತೆ ಹಲವು ಮಂತ್ರ ಕಲಿಸುವ ತರಗತಿಯನ್ನು ಮೇಲಿಂದ ಮೇಲೆ ನಮ್ಮ ನೇತೃತ್ವದಲ್ಲಿ ಆಯೋಜಿಸಲಾಗುತ್ತದೆ. ಯಾರಾದರು ಕಲಿಯಲು ಆಸಕ್ತಿ ಉಳ್ಳವರು ಬಂದರೆ ಅವರಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಮುಖ್ಯಮಂತ್ರಿ ರೈತ ವಿದ್ಯಾನಿಧಿಗೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ
ಪ್ರಾಸ್ತಾವಿಕವಾಗಿ ಮಾತನಾಡಿದ ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾದ ರಾಜ್ಯ ನಿರ್ದೇಶಕ ದೇವರಾಜಶಾಸ್ತ್ರಿ,2018ರಿಂದಲೂ ಈ ಸಮಾವೇಶ ನಡೆಸಬೇಕೆಂಬ ಕನಸು ಇಂದು ನೆರವೇರಿದೆ. ವಿವಿಧ ಸಂಸ್ಕೃತಿ, ಪರಂಪರೆಯನ್ನು ಹೊಂದಿರುವ ಭಾರತದಲ್ಲಿ ವೀರಶೈವ ಸಂಸ್ಕೃತಿ ಅತ್ಯಂತ ಶ್ರೇಷ್ಠವಾದುದ್ದು, ಪಾವರ್ತಿ, ಪರಮೇಶ್ವರರ ಅಶೀರ್ವಾದದ ಫಲವಾಗಿ ಹುಟ್ಟಿದ ಶ್ರೀವೀರಭದ್ರಸ್ವಾಮಿಗೆ ವೇದ, ಉಪನಿಷತ್ತುಗಳಲ್ಲಿಯೂ ಪ್ರಮುಖ ಸ್ಥಾನವಿದೆ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಯಡಿಯೂರಿನ ಶ್ರೀರೇಣುಕಾಶಿವಾಚಾರ್ಯ ಸ್ವಾಮೀಜಿ, ದೊಡ್ಡಗುಣಿಯ ಶ್ರೀರೇವಣ್ಣ ಸಿದ್ದೇಶ್ವರ ಶಿವಾಚಾರ್ಯಸ್ವಾಮೀಜಿ, ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಾಚಾರ್ಯಸ್ವಾಮೀಜಿ, ತೆವಡಹಳ್ಳಿಯ ಶ್ರೀಚನ್ನಬಸವೇಶ್ವರ ಶಿವಾಚಾರ್ಯಸ್ವಾಮೀಜಿ ವಹಿಸಿದ್ದರು.
ವೇದಿಕೆಯಲ್ಲಿ ಮಹಾಸಭಾ ರಾಜ್ಯಪ್ರಧಾನ ಕಾರ್ಯದರ್ಶಿ ಕೆ.ಎಸ್.ವೀರಪ್ಪದೇವರು, ತುಮಕೂರು ಜಿಲ್ಲಾಧ್ಯಕ್ಷ ಟಿ.ಆರ್.ರುದ್ರೇಶಶಾಸ್ತ್ರಿ, ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಗುಬ್ಬಿಯ ಲಿಖಿತ್, ಅರೆಯೂರಿನ ಎ.ಎಂ ಭೂಮಿಕಾ, ಜೋನಿಗರಹಳ್ಳಿಯ ಪ್ರೀತಂ, ಮಾಕನಹಳ್ಳಿ ಭೂಮಿಕಾ, ಕುಂಭಿಪಾಳ್ಯದ ಕುಮಾರಿ ಹರ್ಷಿತಾ, ರುದ್ರೇಶ್ ಅವರುಗಳನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಮೆರವಣಿಗೆಗೆ ತುಮಕೂರು ನಗರ ಶಾಸಕ ಜಿ.ಬಿ ಜ್ಯೋತಿಗಣೇಶ್ ಚಾಲನೆ ನೀಡಿದರು. ನಗರದ ಟೌನ್‍ಹಾಲ್ ವೃತ್ತದಿಂದ ವೀರಶೈವ ಕಲ್ಯಾಣ ಮಂಟಪದವರೆಗೆ ಶ್ರೀವೀರಭದ್ರಸ್ವಾಮಿಯ ಪುತ್ಥಳಿಯನ್ನು ವೇಧ ಘೋಷ, ರುದ್ರ ಪಠಣ ಹಾಗೂ ವಿವಿಧ ಕಲಾತಂಡಗಳ ಪ್ರದರ್ಶನದ ಮೂಲಕ ಉತ್ಸವ ನಡೆಸಲಾಯಿತು.

About The Author

You May Also Like

More From Author

+ There are no comments

Add yours