Tumkurnews
ತುಮಕೂರು; ವಿದ್ಯಾರ್ಥಿ ಜೀವನವು ಯಶಸ್ವಿಯಾಗಿ ಸಾರ್ಥಕತೆ ಕಾಣಬೇಕಾದರೆ ಕಲಿಕೆಯ ದಾಹ ಬೇಕು, ಉತ್ಸಾಹ ಬೇಕು ಮತ್ತು ವಿದ್ಯಾರ್ಥಿ ಜೀವನದ ಕಷ್ಟಸಾಧ್ಯವಾದ ಸವಾಲುಗಳನ್ನು ಎದುರಿಸಲೇಬೇಕು. ಕಲಿಕೆಯಂಬ ಗುಣವನ್ನು ಸಮಾಜವು ಅನಾದಿಕಾಲದಿಂದಲೂ ಗೌರವಿಸುತ್ತಾ ಬಂದಿದೆ. ವ್ಯಕ್ತಿ, ಸಮಾಜ ಹಾಗು ರಾಷ್ಟ್ರದ ಉಳಿವು ಮತ್ತು ಮುಂದುವರಿಕೆಗೆ ಸದೃಢ ಚಿಂತನೆಗಳು ಅತ್ಯವಶ್ಯಕ ಎಂದು ಭಾರತೀಯ ಸೇನೆಯ ಅಧಿಕಾರಿ ಕರ್ನಲ್ ಬಾಲಚಂದ್ರ ಮೂರ್ತಿ ಅಭಿಪ್ರಾಯ ಪಟ್ಟರು. ಅವರು ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ನಡೆದ ‘ವಿದ್ಯಾರ್ಥಿ ದೇವೋಭವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯಮಂತ್ರಿ ರೈತ ವಿದ್ಯಾನಿಧಿಗೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ
ನ್ಯಾಯಯುತ ಕಾರಣದೊಂದಿಗೆ, ಛಲದಿಂದ ದೇಶ ಸೇವೆ ಮಾಡುವ ಅವಕಾಶ ಸೈನಿಕನಿಗಿರುತ್ತದೆ. ಸೈನ್ಯವು ಮಹಿಳೆಯರನ್ನು ವಿಶೇಷವಾಗಿ ಗೌರವಿಸುತ್ತದೆ. ಪ್ರತಿದಿನ ಎದ್ದಾಗ ಮತ್ತೊಂದು ದಿನ ದೇಶ ಸೇವೆ ಮಾಡುವ ಅವಕಾಶ ನಮಗಿದೆಯೆಂದು ನಮ್ಮ ಮಾತೃಭೂಮಿ ನೆನಪಿಸುತ್ತದೆ. ದೇಶದ ರಕ್ಷಣೆಗಾಗಿ ಹೋರಾಡಿ ವೀರಮರಣ ಹೊಂದಿದವರಿಗೆ ಸ್ಮಾರಕ ನಿರ್ಮಿಸಿ, ಅವರ ದೇಶ ಸೇವೆಯನ್ನು ನೆನಪಿಸಿಕೊಂಡು ಗೌರವಿಸುವ ಸಂಸ್ಕೃತಿಯನ್ನು ಸಮಾಜವು ಮೈಗೂಡಿಸಿಕೊಳ್ಳಬೇಕು’ ಎಂದರು.
ಹೆಚ್ಚಾಗುತ್ತಿದೆ ಡೆಂಗ್ಯೂ; ಸಾವು, ನೋವಾಗದಂತೆ ಎಚ್ಚರವಹಿಸಿ; ಜಿಲ್ಲಾಧಿಕಾರಿ ಸೂಚನೆ
ವಿಶೇಷ ಮಾರ್ಗದರ್ಶನ ಉಪನ್ಯಾಸ ನೀಡಿದ ಆಶ್ರಮದ ಮುಖ್ಯಸ್ಥರಾದ ಸ್ವಾಮಿ ವೀರೇಶಾನಂದ ಸರಸ್ವತೀ ಮಾತನಾಡಿ, ಶಾಲೆಯಲ್ಲಿ ಪಾಠಪ್ರವಚನಗಳು ಕ್ರಮಾಗತವಾಗಿ ನೆರವೇರಲು ವೇಳಾಪಟ್ಟಿ ಇರುವಂತೆ ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲೂ ಸಮಯದ ಅಪವ್ಯಯವನ್ನು ತಡೆಯಲು ಅಧ್ಯಯನಕ್ಕೆ ಯೋಗ್ಯವಾದ ವೇಳಾಪಟ್ಟಿಯನ್ನು ರೂಪಿಸಿಕೊಳ್ಳಬೇಕು. ಸಮಯದ ಮಹತ್ವ ತಿಳಿದವನಿಗೆ ಜೀವನದ ಬೆಲೆ ಅರಿವಾಗುತ್ತದೆ. ಜೀವನವನ್ನು ಯಶಸ್ವಿಯಾಗಿಸಲು ಅತ್ಯವಶ್ಯಕವಾಗಿ ಬೇಕಾದ ಕೀಲಿಕೈ ಉತ್ಸಾಹ. ಶಿಸ್ತುಬದ್ಧ ಅಧ್ಯಯನದೊಂದಿಗೆ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ತರಗತಿಗಳಲ್ಲಿ ವಿದ್ಯಾರ್ಥಿಗಳ ಶ್ರದ್ಧಾಪೂರ್ವಕ ನಡೆವಳಿಕೆಯು ಶಿಕ್ಷಕರಿಗೆ ಅವರ ಬಗ್ಗೆ ಪ್ರೀತಿ, ವಿಶ್ವಾಸ ಮತ್ತು ಬದ್ಧತೆಯನ್ನು ವೃದ್ಧಿಸುತ್ತದೆ. ವಿದ್ಯಾರ್ಥಿಗಳು ಶಿಕ್ಷಕರ ವೈಯಕ್ತಿಕ ಜೀವನವನ್ನು ನೋಡುವ ಗೋಜಿಗೇ ಹೋಗಬಾರದು ಮತ್ತು ಅವರನ್ನು ಟೀಕಿಸಲೂಬಾರದು ಎಂದು ತಿಳಿಸಿದರು.
ವೇದಿಕೆಯಲ್ಲಿ ಶಿಕ್ಷಣತಜ್ಞ ವಿದ್ಯಾಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸ್ವಾಮಿ ಧೀರಾನಂದಜೀ ಮತ್ತು ಸ್ವಾಮಿ ಪರಮಾನಂದಜೀ ಧ್ಯಾನ ಮತ್ತು ಭಜನೆಯನ್ನು ನೆರವೇರಿಸಿದರು. ಸಮಾಜ ಸೇವಕಿ ಶ್ಯಾಮಲಾ ವಿದ್ಯಾಶಂಕರ್ ವೇದಿಕೆಯಲ್ಲಿದ್ದರು.
+ There are no comments
Add yours