ತುಮಕೂರು ಪಾಲಿಕೆ ಚುನಾವಣೆ; ಬಿಜೆಪಿಗೆ ತೀವ್ರ ಮುಖಭಂಗ, ಕಾಂಗ್ರೆಸ್, ಜೆಡಿಎಸ್ ಜಯಭೇರಿ!

1 min read

 

Tumkurnews
ತುಮಕೂರು; ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆದಿದ್ದು, ನೂತನ ಮೇಯರ್ ಆಗಿ ಕಾಂಗ್ರೆಸ್ ಪಕ್ಷದ ಪ್ರಭಾವತಿ ಸುಧೀಶ್ವರ್( 9 ನೇ ವಾರ್ಡ್) ಹಾಗೂ ಉಪ ಮೇಯರ್ ಆಗಿ ಜೆಡಿಎಸ್ ಪಕ್ಷದ ನರಸಿಂಹ ಮೂರ್ತಿ(23ನೇ ವಾರ್ಡ್) ಆಯ್ಕೆಯಾಗಿದ್ದಾರೆ.
ಈ ಮೂಲಕ ಪಾಲಿಕೆ ಅಧಿಕಾರದಿಂದ ಬಿಜೆಪಿಯನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಹೊರಗಿಡುವಲ್ಲಿ ಯಶಸ್ವಿಯಾಗಿದೆ. ಈ ಹಿಂದಿನ ಅವಧಿಯಲ್ಲಿ ಬಿಜೆಪಿ ಪಕ್ಷದ ಕೃಷ್ಣಪ್ಪ ಮೇಯರ್ ಆಗಿದ್ದರು. ಇದೀಗ ಬಿಜೆಪಿಯನ್ನೇ ಅಧಿಕಾರದಿಂದ ದೂರ ಇಡುವಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಯಶಸ್ವಿಯಾಗಿದ್ದು, ಬಿಜೆಪಿಗೆ ತೀವ್ರ ಮುಖಭಂಗವಾಗಿದೆ.

About The Author

You May Also Like

More From Author

+ There are no comments

Add yours