ಹೆಬ್ಬೂರು ಹಿಂದೂ ಘನಪುರಿ ಗಣೇಶನ ಅದ್ಧೂರಿ ವಿಸರ್ಜನೆ; ಸುರೇಶ್ ಗೌಡ ಭಾಗಿ

1 min read

Tumkurnews
ತುಮಕೂರು; ತಾಲ್ಲೂಕಿನ ಹೆಬ್ಬೂರು ಗ್ರಾಮದಲ್ಲಿ ಪ್ರತಿಷ್ಟಾಪಿಸಿದ್ದ ಮೊದಲನೇ ವರ್ಷದ ಹಿಂದೂ ಘನಪುರಿ ಗಣೇಶ ವಿಸರ್ಜನಾ ಕಾರ್ಯಕ್ರಮ ಭಕ್ತಿ ವೈಭವದಿಂದ ನೆರವೇರಿತು.
ಹೆಬ್ಬೂರಿನ ಪ್ರಮುಖ ರಾಜ ಬೀದಿಗಳಲ್ಲಿ ಭವ್ಯ ಮೆರವಣಿಗೆಯ ಮುಖಾಂತರ ಗಣೇಶ ಮೂರ್ತಿಗೆ ವಿಶೇಷವಾಗಿ ಹೂವಿನ ಅಲಂಕಾರ ಮಾಡಿ ಸುಮಾರು 16 ಜಾನಪದ ಕಲಾತಂಡಗಳ ವಾದ್ಯಗೋಷ್ಠಿಯೊಂದಿಗೆ ಹಾಗೂ ಸಿಡಿಮದ್ದುಗಳ ಪಟಾಕಿಗಳೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಹೆಬ್ಬೂರಿನ ದೊಡ್ಡಕೆರೆಗೆ ಗಣಪನನ್ನು ವಿಸರ್ಜಿಸಲಾಯಿತು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಮಾಜಿ ಶಾಸಕ ಬಿ. ಸುರೇಶ್ ಗೌಡ ಮಾತನಾಡಿ, ಹಿಂದೂ ಸಮಾಜದಲ್ಲಿ ಕೋಟ್ಯಂತರ ದೇವರುಗಳಿದ್ದು, ಅದರಲ್ಲಿ ಮೊದಲ ಸ್ಥಾನ ಗಣಪನಿಗೆ ನೀಡುತ್ತೇವೆ. ವರ್ಷಕ್ಕೊಮ್ಮೆ ಬರುವ ಗಣೇಶ ಹಬ್ಬವನ್ನು ಇನ್ನು ಮುಂದಿನ ದಿನಗಳಲ್ಲಿ ಅದ್ದೂರಿಯಾಗಿ ನೆರವೇರಿಸಲಾಗುವುದು ಎಂದು ತಿಳಿಸಿದರು.
ಈ ಗಣೇಶೋತ್ಸವ ಕಾರ್ಯಕ್ರಮದ ಪ್ರಾರಂಭದಿಂದ ಹಲವಾರು ರೀತಿಯ ಗ್ರಾಮೀಣ ಕ್ರೀಡಾಕೂಟದಲ್ಲಿ ಹಿರಿಯ ಮತ್ತು ಕಿರಿಯರೆಲ್ಲರೂ ಭಾಗವಹಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿ ವಿಜೇತರಾದ ಎಲ್ಲರಿಗೂ ಬಹುಮಾನ ನೀಡಿದರು. ವಿಸರ್ಜನ ಮಹೋತ್ಸವದ ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ಸದಣ್ಣ, ಗ್ರಾಪಂ ಅಧ್ಯಕ್ಷೆ ಮಧು, ಬಿಜೆಪಿ ಕಾರ್ಯಕಾರಿಣಿ ಸದಸ್ಯ ಪ್ರಭಾಕರ್, ಎಪಿಎಂಸಿ ಅಧ್ಯಕ್ಷ ಉಮೇಶ್ ಗೌಡ, ಬಾಬು, ಡಿ.ಕೆ.ಸಿ ಪ್ರಕಾಶ್, ದೀಪು, ಮಾಸ್ತಿಗೌಡ, ನಾಗರಾಜ್, ಹೆಬ್ಬೂರು ಗ್ರಾಮದ ಹಿರಿಯ ಮುಖಂಡರು, ಯುವಕರು ಹಾಗೂ ಹಿಂದೂ ಪರಿಷತ್ ಕಾರ್ಯಕರ್ತರುಗಳು ಹಾಜರಿದ್ದರು.

About The Author

You May Also Like

More From Author

+ There are no comments

Add yours