ಅಪರಿಚಿತ ವ್ಯಕ್ತಿ ಶವ ಪತ್ತೆ
Tumkurnews
ಕುಣಿಗಲ್; ತಾಲ್ಲೂಕಿನ ಹುಲಿಯೂರು ದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯ ಹಸಿಗೆ ಹೋಬಳಿ 130 ಸರ್ವೆ ನಂಬರ್ ನಲ್ಲಿರುವ ಅರಣ್ಯ ಪ್ರದೇಶದಲ್ಲಿ ಸೆಪ್ಟೆಂಬರ್ 4 ರಂದು ಅಪರಿಚಿತ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸುಮಾರು 15 ರಿಂದ 20 ದಿನಗಳ ಹಿಂದೆ ಮೃತ ಪಟ್ಟಿರುವಂತೆ ಕಂಡುಬಂದಿದೆ. ಮೃತನ ಹೆಸರು, ವಿಳಾಸ, ವಾರಸುದಾರರ ಬಗ್ಗೆ ತಿಳಿದು ಬಂದಿರುವುದಿಲ್ಲ. ಮೃತನ ಮೈಮೇಲೆ ಮಾಸಲು ಬಣ್ಣದ ಒಳ ಉಡುಪು ಇರುತ್ತದೆ. ಈತನ ವಾರಸುದಾರರು ಇದ್ದಲ್ಲಿ ದೂ.ವಾ.ಸಂ. 08132-220229, 0816-2272451, 22264412ನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮನವಿ ಮಾಡಿದ್ದಾರೆ.
+ There are no comments
Add yours