ಶಿರಾ; ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ

1 min read

ಮದ್ಯ ಮಾರಾಟ ನಿಷೇಧ
Tumkurnews
ಶಿರಾ; ನಗರದಲ್ಲಿ ಸೆ.10ರಂದು ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಸೆ.10ರಂದು ಬೆಳಿಗ್ಗೆ 9ಗಂಟೆಗೆ ಗಣೇಶ ವಿಸರ್ಜನಾ ಕಾರ್ಯಕ್ರಮದ ಪ್ರಯುಕ್ತ ಶ್ರೀ ಗವಿ ಆಂಜನೇಯ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದೆ ಶಾಂತಿ ಕಾಪಾಡುವ ಹಾಗೂ ವಿಸರ್ಜನಾ ಮೆರವಣಿಗೆ ಸುಗಮವಾಗಿ ನೆರವೇರುವ ಉದ್ದೇಶದಿಂದ ಸೆ.9ರ ಸಂಜೆ 6 ಗಂಟೆಯಿಂದ ಸೆ.10ರ ಮಧ್ಯರಾತ್ರಿ 12 ಗಂಟೆಯವರೆಗೆ ಶಿರಾ ನಗರದ 5 ಕಿ.ಮೀ ವ್ಯಾಪ್ತಿಯಲ್ಲಿ ಒಣ ದಿನವೆಂದು ಘೋಷಿಸಿ ಕೆಎಸ್‍ಬಿಸಿಎಲ್ ಡಿಪೋ ಹೊರತು ಪಡಿಸಿ ಎಲ್ಲಾ ತರಹದ ಮದ್ಯ ಮಾರಾಟ, ಸಾಗಾಣಿಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಆದೇಶಿಸಿದ್ದಾರೆ.

ಕುಡಿದು ಟೈಟಾಗಿ ಶಾಲೆಗೆ ಬರುವ ಶಿಕ್ಷಕಿ!; ವಿಡಿಯೋ

About The Author

You May Also Like

More From Author

+ There are no comments

Add yours