ಜಲಜೀವನ್ ಯೋಜನೆಯ 4.72 ಕೋಟಿ ರೂ.ಗಳ ಕಾಮಗಾರಿಗೆ ಚಾಲನೆ; ಡಾ.ಜಿ ಪರಮೇಶ್ವರ್

1 min read

 

Tumkurnews
ಕೊರಟಗೆರೆ; ಜಲಜೀವನ್ ಮಿಷನ್ ಮನೆ ಮನೆಗೆ ಗಂಗಾ ಯೋಜನೆಯ 4.72 ಕೋಟಿ ರೂ.ಗಳ ಕಾಮಗಾರಿಗೆ ಶಾಸಕ ಡಾ.ಜಿ ಪರಮೇಶ್ವರ್ ಚಾಲನೆ ನೀಡಿದರು.
ಅವರು ತಾಲೂಕಿನ ಹಂಚಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲೇಶಪುರ ಗ್ರಾಮದಲ್ಲಿ  ತಾಲ್ಲೂಕು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಹಂಚಿಹಳ್ಳಿ ಗ್ರಾಮ ಪಂಚಾಯಿತಿಯ ಮುದ್ದರಂಗಯ್ಯನ ಪಾಳ್ಯ, ಹಂಚಿಹಳ್ಳಿ, ಜಿ.ನಾಗೇನಹಳ್ಳಿ, ಮಲ್ಲೇಶಪುರ, ಕ್ಯಾಮೇನಹಳ್ಳಿ ಗ್ರಾಮ ಪಂಚಾಯಿತಿಯ ಚಿಂಪುಗಾನಹಳ್ಳಿ, ಕೋಡ್ಲಹಳ್ಳಿ, ಬೂದಗವಿ ಗ್ರಾಮ ಪಂಚಾಯಿತಿಯ ನೇಗಲಾಲ ಗ್ರಾಮಗಳಲ್ಲಿ ಮನೆಗಳಿಗೆ ಕಾರ್ಯಾತ್ಮಕ ಕುಡಿಯುವ ನೀರಿನ ನಳ ಸಂಪರ್ಕ ಕಲ್ಪಿಸುವ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕ ಡಾ.ಜಿ ಪರಮೇಶ್ವರ್ ಮಾತನಾಡಿ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶುದ್ದ ಕುಡಿಯುವ ನೀರು ಸೇರಿದಂತೆ ಬಳಕೆಯ ನೀರನ್ನು ಹಾಗೂ ಸ್ವಚ್ಛ ಪರಿಸರವನ್ನು ಒದಗಿಸುವುದು ನಮ್ಮ ಕರ್ತವ್ಯ, ಕೊರಟಗೆರೆ ಕ್ಷೇತ್ರದಲ್ಲಿ ಈ ಕಾರ್ಯವನ್ನು ಹಂತ ಹಂತವಾಗಿ ಒದಗಿಸಿಕೊಂಡು ಬರುತ್ತಿದ್ದೇವೆ, ಜನರು ಹಾಗೂ ಗ್ರಾಮಗಳಿಗೆ ನೀರು ಒದಗಿಸುವ ನೌಕರರು ನೀರಿನ ಮಹತ್ವನ್ನು ಅರಿತು ಅವಶ್ಯಕ ಮತ್ತು ಮಿತವಾಗಿ ಬಳಸಿ ವ್ಯರ್ಥವಾಗದಂತೆ ಜವಾಬ್ದಾರಿಯಿಂದ ನೋಡಿಕೊಳ್ಳಬೇಕು ಎಂದರು.
ಕೊರಟಗೆರೆ ಕ್ಷೇತ್ರದ ಜನರ ಆಶೀರ್ವಾದದಿಂದ ಈ ಬಾರಿ ರಾಜ್ಯದ ಉಪಮುಖ್ಯಮಂತ್ರಿ ಯಾಗುವ ಅವಕಾಶ ದೊರೆಯಿತು. ನಾನು ನಮ್ಮ ಕ್ಷೇತ್ರದ ಜನರ ಆ ಭಾಗ್ಯದ ಋಣವನ್ನು ತೀರಿಸುವ ಕೆಲಸ ಹಾಗೂ ಸೇವೆಯನ್ನು ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ. ಕಳೆದ 5 ವರ್ಷದಿಂದ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು, ಸಾವಿರಾರು ಕೋಟಿ ಅನುದಾನವನ್ನು ಆಭಿವೃದ್ಧಿಗಾಗಿ ತಂದಿದ್ದೇನೆ.

ತೀತಾ ಜಲಾಶಯದ ಸೇತುವೆ ಸಂಪೂರ್ಣ ಕುಸಿತ; ಸಂಚಾರ ಸ್ಥಗಿತ

ಕೋವಿಡ್ ಸಂದರ್ಭದಲ್ಲಿ ಕ್ಷೇತ್ರದಲ್ಲಿ ರೋಗದಿಂದ ಬಳಲುತ್ತಿದ್ದವರ ಮನೆಗಳಿಗೆ ನನ್ನ ವೈದ್ಯಕೀಯ ಅಸ್ಪತ್ರೆಯಿಂದ ವೈದ್ಯರನ್ನು, ಔಷದಿ ಕಿಟ್‌ಗಳನ್ನು, ಸಂಘ ಸಂಸ್ಥೆಗಳಿಗೆ ಎಲ್ಲಾ ರೀತಿಯ ಸಹಕಾರವನ್ನು ನನ್ನ ವೈದ್ಯಕೀಯ ಅಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಯನ್ನು ನೀಡಿಸಿದ್ದೇನೆ, ಜನರು ಸಂಕಷ್ಟದಲ್ಲಿದ್ದಾಗ ಅವರಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ತಿಳಿಸಿದರು.
ಕಾರ್ಯಕ್ರದಲ್ಲಿ ಚಾಲನಾ ನಾಮ ಫಲಕದಲ್ಲಿ ಶಾಸಕರ ಹೆಸರು ಹಾಕದೆ ಗುತ್ತಿಗೆದಾರರ ಹೆಸರು ಇದ್ದದಕ್ಕೆ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು‌. ಈ ಸಂಬಂಧ ಶಾಸಕರು ಅಧಿಕಾರಿಗೆ ಗಮನ ವಹಿಸುವಂತೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಎ.ಇ.ಇ ರವಿಕುಮಾರ್, ಗ್ರಾಮ ಪಂಚಾಯಿತಿ ಅದ್ಯಕ್ಷೆ ವಿಜಯಕುಮಾರಿ, ಉಪಾದ್ಯಕ್ಷ ರಂಗನಾಥ್, ಪಿಡಿಓ, ಸದಸ್ಯರಾದ ಕಾತ್ಯಾಯಿನಿ, ರೇಣುಕಮ್ಮ, ಲಲಿತ, ಪ.ಪಂ ಸದಸ್ಯ ಎ.ಡಿ ಬಲರಾಮಯ್ಯ, ನಂದೀಶ್, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಕೋಡ್ಲಹಳ್ಳಿ ಅಶ್ವಥನಾರಾಯಣ, ಮುಖಂಡರಾದ ಗೊಂದಿಹಳ್ಳಿ ರಂಗರಾಜು, ರಾಮಸ್ವಾಮಿ, ಗಟ್ಲಹಳ್ಳಿ ಕುಮಾರ್, ಶೇಷಪ್ಪ, ಸೇರಿದಂತೆ ಇತರರು ಹಾಜರಿದ್ದರು.

About The Author

You May Also Like

More From Author

+ There are no comments

Add yours