Tumkurnews
ತುಮಕೂರು; ರಾಜ್ಯದಲ್ಲಿ ಫ್ಲೆಕ್ಸ್ ವಿವಾದಗಳು ಆಗಿಂದಾಗ್ಗೆ ಆಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ನಗರದಲ್ಲಿ ಫ್ಲೆಕ್ಸ್ ಹಾನಿ ಪ್ರಕರಣ ನಡೆದ ಕಾರಣ ಫ್ಲೆಕ್ಸ್ ಕಟ್ಟುವವರಿಗೆ ಕೆಲವೊಂದು ನಿಯಮಗಳನ್ನು ವಿಧಿಸಲು ಪೊಲೀಸ್ ಇಲಾಖೆ ಮುಂದಾಗಿದೆ.
ನಗರದಲ್ಲಿ ಇನ್ನು ಮುಂದೆ ಫ್ಲೆಕ್ಸ್ ಕಟ್ಟುವವರು ಮಹಾನಗರ ಪಾಲಿಕೆಯಿಂದ ಕಡ್ಡಾಯವಾಗಿ ಅನುಮತಿ ಪತ್ರ ಪಡೆಯಬೇಕು ಹಾಗೂ ಸದರಿ ಫ್ಲೆಕ್ಸ್ ಅನ್ನು ಕಾವಲು ಕಾಯಬೇಕು, ಫ್ಲೆಕ್ಸ್ ಅನ್ನು ಯಾರು ಕಾವಲು ಕಾಯುತ್ತಾರೆ ಎಂದು ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್ ಶನಿವಾರ ತಿಳಿಸಿದ್ದಾರೆ.
ಹೆಚ್ಚಿನ ವಿವರಗಳನ್ನು ಈ ವಿಡಿಯೋದಲ್ಲಿ ನೋಡಬಹುದು
+ There are no comments
Add yours