Tumkurnews
ತುಮಕೂರು; ಮದುವೆಯಾಗುವಂತೆ ಯುವಕರು ಒತ್ತಾಯಿಸಿದ್ದರಿಂದ ಬಾಲಕಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಜಿಲ್ಲೆಯ ತಿಪಟೂರು ತಾಲ್ಲೂಕಿನ ಮಡೆನೂರು ಭೋವಿ ಕಾಲೋನಿಯ 15 ವರ್ಷದ ಬಾಲಕಿ ಮೃತ ದುರ್ದೈವಿ. ತಾಲ್ಲೂಕಿನ ಅಯ್ಯನಬಾವಿ ಗ್ರಾಮದ ಕಲ್ಯಾಣಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ.
ದೂರು ದಾಖಲು; ಮೃತ ಬಾಲಕಿಯು ತಿಪಟೂರಿನ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಕಳೆದ ಐದಾರು ತಿಂಗಳಿನಿಂದ ಗ್ರಾಮದ ಕೆಲ ಪುಂಡ ಯುವಕರು ಮದುವೆಯಾಗುವಂತೆ ಬಾಲಕಿಯನ್ನು ಒತ್ತಾಯಿಸುತ್ತಿದ್ದರು. ಇದರಿಂದ ಬೇಸತ್ತ ತಮ್ಮ ಮಗಳು ಕಲ್ಯಾಣಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಾಲಕಿಯ ಪೋಷಕರು ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
58 ವರ್ಷದ ಪುರುಷ, 23 ವರ್ಷದ ಮಹಿಳೆ ನಾಪತ್ತೆ
+ There are no comments
Add yours