ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್’ನಿಂದ ವಿವಿಧ ಸೌಲಭ್ಯಗಳ ವಿತರಣೆ

1 min read

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್’ನಿಂದ ವಿವಿಧ ಸೌಲಭ್ಯಗಳ ವಿತರಣೆ

Tumkurnews
ಕೊರಟಗೆರೆ; ಪಟ್ಟಣದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಬಿ.ಸಿ ಟ್ರಸ್ಟ್ ಕಾರ್ಯಾಲಯದಲ್ಲಿ ಮಾಸಾಶನ, ಆಹಾರಕಿಟ್, ವೀಲ್ ಚೇರ್, ಸುಜ್ಞಾನ ನಿಧಿ ಶಿಷ್ಯವೇತನ ವಿತರಣೆ ಕಾರ್ಯಕ್ರಮ ನೆರವೇರಿತು.
ಇದುವರೆಗೂ ಮಾಸಾಶನ ವಿತರಣೆಯನ್ನು 157 ಸದಸ್ಯರಿಗೆ ನೀಡಲಾಗಿದೆ. ಅಂಗವಿಕಲರಿಗಾಗಿ ವಿಲ್ ಚೇರ್ ನ್ನು 9 ಸದಸ್ಯರಿಗೆ ಕೊಡಲಾಗಿದೆ. ಸಂಘದ ಸದಸ್ಯರ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸುಜ್ಞಾನನಿಧಿ ಶಿಷ್ಯವೇತನವನ್ನು 155 ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಮಳೆಯ ಪ್ರಭಾವದಿಂದಾಗಿ ಮನೆ ಬಿದ್ದು ಹೋಗಿರುವುದಕ್ಕೆ ಮತ್ತು ಹಾವು ಕಚ್ಚಿ ಮರಣ ಹೊಂದಿದ ಕುಟುಂಬಕ್ಕೆ 4 ಸದಸ್ಯರಿಗೆ ವಿಶೇಷ ಅನುದಾನವಾಗಿ ನೀಡಲಾಗಿದೆ ಎಂದು ತಾಲೂಕಿನ ಯೋಜನಾಧಿಕಾರಿ ಬಾಲಕೃಷ್ಣ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ರತನ್, ಎಲ್.ರಾಜಣ್ಣ, ಪ್ರದೀಪ್ ಕುಮಾರ್, ಎಚ್.ಎಸ್ ಮಹೇಶ್ ಮತ್ತಿತರರು ಹಾಜರಿದ್ದರು.

ಸಬ್‍ ಇನ್ಸ್ ಪೆಕ್ಟರ್ ಹಾಗೂ ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

About The Author

You May Also Like

More From Author

+ There are no comments

Add yours