ಶಿಕ್ಷಕಿಯ ಮನೆ ಕೆಲಸಕ್ಕೆ ವಸತಿ ಶಾಲೆ ವಿದ್ಯಾರ್ಥಿನಿಯರ ಬಳಕೆ; ಕಣ್ಮುಚ್ಚಿ ಕುಳಿತ ಇಲಾಖೆ

1 min read

 

Tumkurnews
ತುಮಕೂರು; ತಾಲ್ಲೂಕಿನ ಹೆಬ್ಬೂರಿನ ನರಸಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕಿಯೋರ್ವಳು ವಿದ್ಯಾರ್ಥಿಗಳನ್ನು ತಮ್ಮ ಮನೆ ಕೆಲಸಗಳಿಗೆ ಬಳಸಿಕೊಳ್ಳುತ್ತಿರುವ ಆರೋಪ ಕೇಳಿ ಬಂದಿದೆ.
ವಸತಿ ಶಾಲೆಯ ಕ್ವಾಟ್ರಸ್‌ನಲ್ಲಿರುವ ಮುಬಿನಾ ಎಂಬ ಶಿಕ್ಷಕಿ, ವಸತಿ ನಿಲಯದ ವಿದ್ಯಾರ್ಥಿನಿಯರನ್ನು ತಮ್ಮ ಮನೆಯಲ್ಲಿ ಮಾತ್ರೆ ತೊಳೆಯುವುದು, ನೆಲ ಒರೆಸುವುದು, ಮಕ್ಕಳನ್ನು ಆಟವಾಡಿಸುವುದು ಸೇರಿದಂತೆ ಮನೆ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ತಮಗೆ ಓದಲು ಬಿಡುತ್ತಿಲ್ಲ ಎಂದು ವಿದ್ಯಾರ್ಥಿನಿಯರು ಗಂಭೀರ ಆರೋಪ ಮಾಡಿದ್ದಾರೆ.
ತಮ್ಮ ಮನೆ ಕೆಲಸ ಮಾಡದ ವಿದ್ಯಾರ್ಥಿನಿಯರನ್ನು ನಿಂದಿಸುವುದು, ಅಂಕ ಕಡಿಮೆ ನೀಡುವುದು ಮಾಡುತ್ತಾರೆ, ತಮ್ಮ ವಿರುದ್ಧ ಬೇರೆ ವಿದ್ಯಾರ್ಥಿನಿಯರನ್ನು ಎತ್ತಿ ‌ಕಟ್ಟುತ್ತಾರೆ, ಶಿಕ್ಷಕಿ ಮುಬಿನಾರಿಂದಾಗಿ ವಸತಿ‌ ಶಾಲೆಯ ಶೈಕ್ಷಣಿಕ ವಾತಾವರಣ ಹಾಳಾಗಿದೆ ಎಂದು ವಿದ್ಯಾರ್ಥಿನಿಯರು‌ ದೂರಿದ್ದಾರೆ.
ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಜಂಟಿ‌ ನಿರ್ದೇಶಕಿ ಪ್ರೇಮಾ ಅವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ವಿದ್ಯಾರ್ಥಿನಿಯರು ಶಿಕ್ಷಕರೊಂದಿಗೆ ಮಾತನಾಡಿದರೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ, ಒಟ್ಟಾರೆಯಾಗಿ ಶಿಕ್ಷಕಿ ಮುಬಿನಾ ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಎಸ್ಸೆಸ್ಸೆಲ್ಸಿಯ ಹಲವು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

(ಚಿತ್ರ; ವಿದ್ಯಾರ್ಥಿನಿಯರು ಶಿಕ್ಷಕಿ ಮನೆಯಲ್ಲಿ ಮಗು ಆಡಿಸುತ್ತಿರುವುದು)

ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಿಗೆ ಅರ್ಜಿ ಆಹ್ವಾನ

About The Author

You May Also Like

More From Author

+ There are no comments

Add yours