Tumkurnews
ತುಮಕೂರು; ಜಿಲ್ಲೆಯ ಮಧುಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಮಧುಗಿರಿ ಟೌನ್ ಮೇದರಹಟ್ಟಿ, 4ನೇ ಬ್ಲಾಕ್‍ನ ತನ್ನ ಮನೆಯಿಂದ ಫಾರೂಕ್ ಎಂಬ 30 ವರ್ಷದ ವ್ಯಕ್ತಿಯು ನಾಪತ್ತೆಯಾಗಿದ್ದಾನೆ.
ಜುಲೈ 16ರಂದು ಬೆಳಿಗ್ಗೆ 5 ಗಂಟೆಗೆ ನಮಾಜ್ ಮಾಡಿ ಬರುತ್ತೇನೆಂದು ಹೋದವನು ಮರಳಿ ಮನೆಗೆ ಬಂದಿರುವುದಿಲ್ಲ ಎಂದು ದೂರು ದಾಖಲಾಗಿದೆ.
ಈತನು ಸುಮಾರು 170 ಸೆಂ.ಮೀ. ಎತ್ತರ, ಕೋಲುಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಹಿಂದಿ, ಕನ್ನಡ ಹಾಗೂ ಉರ್ದು ಮಾತನಾಡುತ್ತಾನೆ. ಮನೆಯಿಂದ ಹೋಗುವಾಗ ಬ್ಲಾಕ್ ಕಲರ್ ಷರ್ಟ್, ಬ್ಲೂ ಕಲರ್ ಜೀನ್ಸ್ ಪ್ಯಾಂಟ್ ಧರಿಸಿದ್ದನು.
ಈತನ ಬಗ್ಗೆ ಸುಳಿವು ಸಿಕ್ಕಲ್ಲಿ ದೂ.ವಾ.ಸಂ.08137-282381, 282313, 0816-2272451ನ್ನು ಸಂಪರ್ಕಿಸಬಹುದಾಗಿದೆ ರ್ಎಂದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
+ There are no comments
Add yours