Tumkurnews
ತುಮಕೂರು; ಶಿರಾ ತಾಲ್ಲೂಕು ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕನಹಳ್ಳಿ ಗ್ರಾಮದ ಸಮೀಪ ಅಪಘಾತಕ್ಕೀಡಾಗಿ ಅಪರಿಚಿತ ವ್ಯಕ್ತಿ ಸಾವಿಗೀಡಾಗಿದ್ದಾನೆ.
ಇಲ್ಲಿನ ಪವನ್ ಡಾಬಾ ಹತ್ತಿರದ ಎನ್.ಹೆಚ್ 48 ರಸ್ತೆ ದಾಟುವಾಗ ಯಾವುದೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಅಪಘಾತಗೊಂಡು ಆಗಸ್ಟ್ 15ರಂದು ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ಸುಮಾರು 35 ವರ್ಷದ ಅಪರಿಚಿತ ಗಂಡಸು ಸಾವನ್ನಪ್ಪಿದ್ದಾನೆ.
ಮೃತನ ಶವವನ್ನು ಶಿರಾ ಸರ್ಕಾರಿ ಆಸ್ಪತ್ರೆಯ ಶೈತ್ಯಾಗಾರದಲ್ಲಿ ಇರಿಸಿದ್ದು, ವಾರಸುದಾರರು ತಿಳಿದು ಬಂದಿರುವುದಿಲ್ಲ. ಮೃತನು ಸುಮಾರು 5.5 ಅಡಿ ಎತ್ತರ, ದುಂಡು ಮುಖ, ನೀಳವಾದ ಶರೀರ ಹೊಂದಿದ್ದು, ಮೃತನ ಮೈಮೇಲೆ ಬಿಳಿ ಮಾಸಲು ಬಣ್ಣದ ಷರ್ಟ್, ಸಿಮೆಂಟ್ ಕಲರ್ ಪ್ಯಾಂಟ್ ಇರುತ್ತದೆ. ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ದೂ.ವಾ.ಸಂ. 08135-274738, 275257, 0816-2272451, ಮೊ.ಸಂ.948082955, 9480802934ನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮನವಿ ಮಾಡಿದ್ದಾರೆ.
+ There are no comments
Add yours