ಶಾಲೆಗಳಲ್ಲಿ ಗಣೇಶೋತ್ಸವಕ್ಕೆ ಅಡ್ಡಿ ಇಲ್ಲ; ನಮಾಜ್’ಗೆ ಅವಕಾಶ ಕೊಡಲ್ಲ; ಸಚಿವ ನಾಗೇಶ್ ಖಡಕ್ ನುಡಿ

1 min read

Tumkurnews
ತುಮಕೂರು; ಭಾರತದ ಸ್ವಾತಂತ್ರ್ಯ ಹೋರಾಟದ ಅಸ್ತ್ರವಾಗಿ ಮಾಡಿಕೊಂಡ ಗಣೇಶ ಉತ್ಸವದ ಆಚರಣೆಗೆ ಯಾವುದೇ ಅಡ್ಡಿ, ಆತಂಕ ಇಲ್ಲ. ಆದರೆ, ಹೊಸದಾಗಿ ಶಾಲೆಗಳಲ್ಲಿ ಅಲ್ಲಾನ ಪೂಜೆ, ನಮಾಜ್‌ಗೆ ಅವಕಾಶ ಇಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸ್ಪಷ್ಟನೆ ನೀಡಿದರು.
ಶಾಲೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್‌ಗೆ ಅಡ್ಡಿಯಾಗಿದೆ. ಇದೀಗ ಶಾಲೆಗಳಲ್ಲಿ ಧಾರ್ಮಿಕ ಆಚರಣೆಯಾದ ಗಣಪತಿ ಉತ್ಸವಗಳನ್ನು ಮಾಡಬಾರದು ಎಂದು ಕೆಲ ಮುಸ್ಲಿಮರು ನೀಡಿದ ಹೇಳಿಕೆಗೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸ್ಪಷ್ಟನೆ ನೀಡಿದರು.

ತುಮಕೂರು; 47 ವರ್ಷದ ಪುರುಷ, 32 ವರ್ಷದ‌ ಮಹಿಳೆ ನಾಪತ್ತೆ
ತಿಪಟೂರಿನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಸಚಿವ ಬಿ.ಸಿ ನಾಗೇಶ್, ಗಣಪತಿ ಉತ್ಸವ ಸ್ವಾತಂತ್ರ್ಯ ಹೋರಾಟದ ಅಸ್ತ್ರವಾಗಿ ದೇಶದಲ್ಲಿ ಶುರುವಾಗಿದೆ. ಇದಕ್ಕೂ ಮುಂಚೆ ಎಲ್ಲಾ ದೇವರ ಪೂಜೆ ತರಹ ಮನೆಯಲ್ಲಿಯೇ ನಡೆಯುತ್ತಿತ್ತು. ಸ್ವಾತಂತ್ರ್ಯ ಹೋರಾಟದ ಸಂಘಟನೆಯ ಫಲವಾಗಿ ಶಾಲೆಗಳಲ್ಲಿ, ಹಾಸ್ಟೆಲ್‌ಗಳಲ್ಲಿ ಹಾಗೂ ಸಾರ್ವಜನಿಕರ ಸ್ಥಳಗಳಲ್ಲಿ ಗಣಪತಿ ಉತ್ಸವಗಳು ಶುರುವಾದವು. ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ನಾಥ ತಿಲಕರ ನೇತೃತ್ವದಲ್ಲಿ ದೇಶದ ಸಂಘಟನೆಗೆ ಎಲ್ಲಾ ಜಾಗಗಳಲ್ಲೂ ನಡೆದುಕೊಂಡು ಬಂದಿವೆ ಎಂದರು.

ತುಮಕೂರಿನಲ್ಲಿ ಕಾವೇರಿಸಿದ ಸಾವರ್ಕರ್; ಫ್ಲೆಕ್ಸ್’ಗೆ ಪೊಲೀಸ್ ಭದ್ರತೆ
ಈ ಗಣಪತಿ ಉತ್ಸವ ಯಾವುದೋ ಸರ್ಕಾರ ಬಂದ ನಂತರ ಶುರುವಾದ ಪದ್ಧತಿ ಅಲ್ಲ. ತಲೆಮಾರುಗಳಿಂದ ನಡೆದುಕೊಂಡು ಬಂದ ಪದ್ಧತಿಗಳಾಗಿವೆ ಎಂದು ಸಚಿವರು ಸ್ಪಷ್ಟನೆ ನೀಡಿದರು.
ಸ್ವಾತಂತ್ರ್ಯದ ಹೋರಾಟಕ್ಕೆ ಭಾರತೀಯರನ್ನು ಒಗ್ಗೂಡಿಸುವ ಸಲುವಾಗಿ ಮಾಡಿದ ಅಸ್ತ್ರ ಈ ಗಣೇಶ ಉತ್ಸವ. ಈ ತರಹದ ಪದ್ಧತಿಗಳನ್ನು ಯಾವತ್ತೂ ನಿಲ್ಲಿಸುವುದಕ್ಕೆ ಆಗುವುದಿಲ್ಲ. ಹೊಸದಾಗಿ ಶಾಲೆಗಳಲ್ಲಿ ಅಲ್ಲಾನ ಪೂಜೆ ಹಾಗೂ ನಮಾಜ್ ಮಾಡಬೇಕು ಅಂದರೆ ಅದೆಲ್ಲ ಆಗಲ್ಲ ಎಂದು ಖಡಕ್ಕಾಗಿ ಹೇಳಿದರು.

ಸೌದಿಗೆ ಹೋಗಿ ಸೆಟಲ್ ಆದ ಪತ್ನಿ; ಮಕ್ಕಳೊಂದಿಗೆ ವಿಷ ಸೇವಿಸಿ ಪತಿ ಆತ್ಮಹತ್ಯೆ
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರೋದಕ್ಕೂ ಮುಂಚೆ ಯಾವುದು ಶುರುವಾಗಿತ್ತೋ ಅವೆಲ್ಲವೂ ನಡೆದುಕೊಂಡು ಹೋಗುತ್ತವೆ. ಈ ಪದ್ಧತಿಯನ್ನು ಸರ್ಕಾರ ನಡೆಸಿ ಅಂತಲೂ ಹೇಳಿಲ್ಲ. ನಡೆಸಬೇಡಿ ಅಂತಲೂ ಆದೇಶ ಮಾಡಿಲ್ಲ. ತಲೆಮಾರುಗಳಿಂದ ಪ್ರಾಕ್ಟೀಸ್ ಮಾಡಿಕೊಂಡು ಬಂದಿರುವ ಪದ್ಧತಿಯನ್ನು ತಡೆಯೋಕೆ ಆಗಲ್ಲ ಎಂದು ತಿಳಿಸಿದರು.

About The Author

You May Also Like

More From Author

+ There are no comments

Add yours