Tumkurnews
ತುಮಕೂರು; ಜಿಲ್ಲೆಯ ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಹೇರೂರು ಗ್ರಾಮ ಕಸಬಾ ಹೋಬಳಿ, ಕುಣಿಗಲ್ ತಾಲ್ಲೂಕಿನ ಕಂಚಗಾಲಪುರಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.
ಕಂಚಗಾಲಪುರ ಅಮಾನಿಕೆರೆ ಸರ್ವೆ ನಂ.125/1ರ ಜಮೀನಿನ ಪಕ್ಕದ ಉತ್ತರದ ಕಡೆ ಚಿಕ್ಕಕೆರೆ ಕೋಡಿಯಿಂದ ಮಂಗಳ ಜಲಾಶಯಕ್ಕೆ ಹರಿದು ಹೋಗುವ ನೀರಿನ ತೊರೆಯ ಪಕ್ಕದ ಜಮೀನಿನ ದಡದಲ್ಲಿ ಆಗಸ್ಟ್ 9ರಂದು ಬೆಳಿಗ್ಗೆ 10 ಗಂಟೆ ಸಮಯದಲ್ಲಿ ಸುಮಾರು 40 ರಿಂದ 45 ವರ್ಷದ ಅಪರಿಚಿತ ಗಂಡಸಿನ ಶವವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಾರಸುದಾರರು ತಿಳಿದುಬಂದಿರುವುದಿಲ್ಲ.
ಮೃತನು ಸುಮಾರು 5.6 ಅಡಿ ಎತ್ತರ ಸಾಧಾರಣ ಮೈಕಟ್ಟು, ದುಂಡು ಮುಖ ಹೊಂದಿದ್ದು, ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ದೂ.ವಾ.ಸಂ. 08132-220229, 0816-2272451ನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ.
+ There are no comments
Add yours