ಓಮಿನಿ ಕಾರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆ; ವಿಡಿಯೋ

1 min read

 

Tumkurnews
ತುಮಕೂರು; ಓಮಿನಿ ಕಾರಿನ ಸಮೇತವಾಗಿ ಹಳ್ಳದಲ್ಲಿ ‌ಕೊಚ್ಚಿ ಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದು, ತಿಪಟೂರು ತಾಲ್ಲೂಕು ಗಡಬನಹಳ್ಳಿಯ ಪಟೇಲ್ ಕುಮಾರಸ್ವಾಮಿ ಮೃತ ದುರ್ದೈವಿ.

ತುಮಕೂರು, ತಿಪಟೂರು, ಶಿರಾದಲ್ಲಿ ಭಾನುವಾರ‌ ನಿಷೇದಾಜ್ಞೆ; ಡಿಸಿ ಆದೇಶ

ಮೂರು ದಿನಗಳ ಹಿಂದೆ ತುರುವೇಕೆರೆ ತಾಲ್ಲೂಕು ಕೊಂಡಜ್ಜಿ ಕ್ರಾಸ್ ನಲ್ಲಿ ಹಳ್ಳ ದಾಟುವಾಗ ಓಮಿನಿ ಕಾರಿನಲ್ಲಿದ್ದ ಗಡಬನಹಳ್ಳಿಯ ಪಟೇಲ್ ಕುಮಾರ ಸ್ವಾಮಿ ಹಾಗೂ ಪುಟ್ಟಸಿದ್ದಪ್ಪ ನೀರಿನ ಸೆಳೆತಕ್ಕೆ ಸಿಲುಕಿ ಕಾರಿನ ಸಮೇತವಾಗಿ ಕೊಚ್ಚಿ ಹೋಗಿದ್ದರು. ಅದೃಷ್ಟವಶಾತ್ ಪುಟ್ಟಸಿದ್ದಪ್ಪ ಸ್ಥಳೀಯರ ಸಹಕಾರದಿಂದ ಬಚಾಬ್ ಆಗಿದ್ದರು. ಆದರೆ ಪಟೇಲ್ ಕುಮಾರಸ್ವಾಮಿಯನ್ನು ರಕ್ಷಿಸಲು ಸಾಧ್ಯವಾಗಿರಲಿಲ್ಲ.

(ಕಾರ್ಯಾಚರಣೆ ವಿಡಿಯೋ)

ಮಳೆ ಸಂತ್ರಸ್ತರಿಗೆ ಹುಳ ಬಿದ್ದಿರುವ ಊಟ ನೀಡಿದ ತುಮಕೂರು ಪಾಲಿಕೆ

ಇಂದು ಶವ ಪತ್ತೆ; ಸತತ ಕಾರ್ಯಾಚರಣೆ ಬಳಿಕ ಶನಿವಾರ ಓಮಿನಿ ಕಾರಿನ ಸಮೇತ ಪಟೇಲ್ ಕುಮಾರಸ್ವಾಮಿ ಶವ ಪತ್ತೆಯಾಗಿದೆ. ‌ಹಳ್ಳದ ಹೊಂಡವೊಂದರಲ್ಲಿ ಮುಳುಗಿ ಹೋಗಿದ್ದ ಕಾರನ್ನು ಹೊರ ತೆಗೆದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ವಾರಸುದಾರರಿಗೆ ಹಸ್ತಾಂತರಿಸಲು ಪೊಲೀಸರು ಕ್ರಮವಹಿಸಿದ್ದಾರೆ. ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳರ ಪಾಲಿನ ಸ್ವರ್ಗ; ತುಮಕೂರು KSRTC ಬಸ್ ನಿಲ್ದಾಣ!

About The Author

You May Also Like

More From Author

+ There are no comments

Add yours