ಬಟ್ಟೆ ತೊಳೆಯಲು ಕೆರೆಗೆ ಹೋಗಿದ್ದ ಮಹಿಳೆ ನಾಪತ್ತೆ; ಶೋಧ ಕಾರ್ಯಾಚರಣೆ

1 min read

Tumkurnews
ತುಮಕೂರು; ಬಟ್ಟೆ ಹೊಗೆಯಲು ಹೋಗಿ ಮಹಿಳೆಯೋರ್ವಳು ಕೆರೆ ನೀರಿನಲ್ಲಿ ಮುಳುಗಿರುವ ಘಟನೆ ಪಾವಗಡ ತಾಲ್ಲೂಕಿನಲ್ಲಿ ಭಾನುವಾರ ನಡೆದಿದೆ.
ಬ್ಯಾಡನೂರು ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ದೇವಿರಮ್ಮ(34) ಎಂಬಾಕೆ ಕೆರೆ ನೀರಿನಲ್ಲಿ ಮುಳುಗಿದ್ದು, ಸ್ಥಳೀಯರ ನೆರವಿನಿಂದ ಪೊಲೀಸ್ ಹಾಗೂ ಅಗ್ನಿಶಾಮಕ ದಳ ಶೋಧ ಕಾರ್ಯ ನಡೆಸುತ್ತಿದೆ. ನೀರಿನಲ್ಲಿ ಮುಳುಗಿರುವ ಮಹಿಳೆಗೆ ಮಾತು ಬಾರದ ಪತಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಇರುವುದಾಗಿ ತಿಳಿದು ಬಂದಿದೆ.

ಮಳೆ ಅವಾಂತರ; ವಿದ್ಯುತ್ ಸ್ಪರ್ಶಿಸಿ ಪಾವಗಡದ ವಾಟರ್ ಮ್ಯಾನ್ ಸಾವು
22 ವರ್ಷಗಳ ಬಳಿಕ ಭರ್ತಿ; ಕಳೆದೊಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ 22 ವರ್ಷಗಳ ನಂತರ ಬ್ಯಾಡನೊರು ಕೆರೆ ತುಂಬಿದ್ದು, ಕೋಡಿಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಈ ಭಾಗದ ಜನರು ಕೆರೆಗೆ ಬಂದು ಬಾಗಿನ ಅರ್ಪಿಸುವುದನ್ನು ಮಾಡುತ್ತಿದ್ದಾರೆ. ಅಪಾಯದ ಸುಳಿವರಿತು ಈಗಾಗಲೇ ಜಿಲ್ಲಾಡಳಿತ ಜನರು ಕೆರೆ ಕಟ್ಟೆಗಳ ಕಡೆ ಸುಳಿಯದಂತೆ ಎಚ್ಚರಿಕೆ ನೀಡಿದೆ. ಆದಾಗ್ಯೂ ಜನರು ಕೆರೆಕಟ್ಟೆಗಳತ್ತ ಸುಳಿಯುತ್ತಿದ್ದು, ಇಂತಹ ಅವಘಡಗಳು ಸಂಭವಿಸುತ್ತಿವೆ.

(ಘಟನೆ ಸ್ಥಳ, ಕಾರ್ಯಾಚರಣೆ ವಿಡಿಯೋ)

ಕುಕ್ಕರ್ ಸ್ಪೋಟ; ಅಂಗನವಾಡಿ ಕಾರ್ಯಕರ್ತೆಗೆ ಗಾಯ
ಶಾಸಕರ ಭೇಟಿ; ಘಟನೆ ಸ್ಥಳಕ್ಕೆ ಶಾಸಕ ವೆಂಕಟರಮಣಪ್ಪ ಹಾಗೂ ತಹಶಿಲ್ದಾರ್ ವರದರಾಜ್ ಭೇಟಿ ನೀಡಿ ಶೋಧ ಕಾರ್ಯಾಚರಣೆಯನ್ನು ಅವಲೋಕಿಸಿದರು.

ವರದಿ; ಇಮ್ರಾನ್ ಉಲ್ಲಾ, ಪಾವಗಡ

About The Author

You May Also Like

More From Author

+ There are no comments

Add yours