ನ್ಯಾಯಬೆಲೆ ಅಂಗಡಿ ಮಂಜೂರಾತಿಗೆ ಅರ್ಜಿ ಆಹ್ವಾನ

1 min read

Tumkurnews

ತುಮಕೂರು; ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಹೊಸದಾಗಿ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ.

ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಆಶ್ರೀಹಾಳ ಕಾಲೋನಿ, ಆಲದ ತಾಂಡ್ಯ, ಬಂದ್ರೇಹಳ್ಳಿ ತಾಂಡ್ಯ, ಭೀಮಾನಾಯ್ಕನ ತಾಂಡ್ಯ, ಗೋಡೆಕೆರೆ ಗೊಲ್ಲರಹಟ್ಟಿ, ಕರೆಬಾಲನಹಟ್ಟಿ, ತಮ್ಮಡಿಹಳ್ಳಿ ಗೊಲ್ಲರಹಟ್ಟಿ, ತಮ್ಮಡಿ ಹಳ್ಳಿ ಎಸ್.ಸಿ./ಎಸ್.ಟಿ. ಕಾಲೋನಿ ಹಾಗೂ ಉಮ್ಲಾನಾಯ್ಕನ ತಾಂಡ್ಯ ಗ್ರಾಮಗಳಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ.

ಮಾರಣಾಂತಿಕ ಹಲ್ಲೆ; ಪೊಲೀಸರಿಗೆ ಸರೆಂಡರ್‌ ಆದ ಆರೋಪಿ

ಆಶ್ರೀಹಾಳ ಕಾಲೋನಿ 252, ಆಲದ ತಾಂಡ್ಯ 221, ಬಂದ್ರೇಹಳ್ಳಿ ತಾಂಡ್ಯ 196, ಭೀಮಾನಾಯ್ಕನ ತಾಂಡ್ಯ 289, ಗೋಡೆಕೆರೆ ಗೊಲ್ಲರಹಟ್ಟಿ 552, ಕರೆಬಾಲನಹಟ್ಟಿ 555, ತಮ್ಮಡಿಹಳ್ಳಿ ಗೊಲ್ಲರಹಟ್ಟಿ 250, ತಮ್ಮಡಿ ಹಳ್ಳಿ ಎಸ್.ಸಿ., ಎಸ್.ಟಿ. ಕಾಲೋನಿ 110 ಹಾಗೂ ಉಮ್ಲಾನಾಯ್ಕನ ತಾಂಡ್ಯ 245 ಪಡಿತರ ಚೀಟಿ ಹೊಂದಿರುವ ಕುಟುಂಬಗಳಿದ್ದು, ನ್ಯಾಯಬೆಲೆ ಅಂಗಡಿ ಮಂಜೂರಾತಿ ಪಡೆಯಲು ಇಚ್ಛಿಸುವ ಅರ್ಜಿದಾರರು ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ಧತಿ ಆದೇಶ 2016ರ ನಿಯಮ (11) ಉಪ ನಿಯಮ(2)ರಲ್ಲಿ ಕಲ್ಪಿಸಲಾಗಿರುವ ಆದ್ಯತೆಗಳನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ.

ಹೊಸ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿ ಕಾಣೆ

ನ್ಯಾಯಬೆಲೆ ಅಂಗಡಿಯನ್ನು ಮಂಜೂರಾತಿ ಕೋರಿ ಅರ್ಜಿ ಸಲ್ಲಿಸುವ ಸಂಘ ಸಂಸ್ಥೆಗಳು/ಇತರರು ಭರ್ತಿ ಮಾಡಿದ ನಿಗಧಿತ ಅರ್ಜಿ ನಮೂನೆ ‘ಎ’ಯೊಂದಿಗೆ ಸಹಕಾರ ಸಂಘ/ಸಂಸ್ಥೆ ಅಥವಾ ಸ್ವ-ಸಹಾಯ ಸಂಘಗಳಾದಲ್ಲಿ ನೋಂದಾವಣಿ ಪತ್ರ, ಸಹಕಾರ ಸಂಘ/ಸಂಸ್ಥೆಗಳಾದಲ್ಲಿ ಕಳೆದ 3 ವರ್ಷಗಳ ದೃಢೀಕೃತ ಲೆಕ್ಕ ಪರಿಶೋಧನಾ ವರದಿ, ಸಂಘ/ಸಂಸ್ಥೆಗಳ ಪರವಾಗಿ ನ್ಯಾಯಬೆಲೆ ಅಂಗಡಿ ನಡೆಸಲು ಮತ್ತು ಪ್ರಮಾಣ ಪತ್ರ ಸಲ್ಲಿಸಲು ಅಧಿಕಾರ ಪಡೆದಿರುವ ಪ್ರತಿನಿಧಿಯನ್ನು ನೇಮಿಸಿರುವ ಬಗ್ಗೆ ನಿರ್ಣಯ/ನೇಮಕಾತಿ ಪತ್ರ, ಕರ್ನಾಟಕ ಸೊಸೈಟಿಸ್ ರಿಜಿಸ್ಟ್ರೇಷನ್ ಆಕ್ಟ್ 1959ರಡಿ ವಿಚಾರಣೆ ಹಾಗೂ ಟ್ರಯಲ್ ಮತ್ತು ಲಿಕ್ವಿಡೇಷನ್ ನಡವಳಿ ನಡೆದಿರುವುದಿಲ್ಲ ಎಂಬ ಬಗ್ಗೆ ಸಕ್ಷಮ ಪ್ರಾಧಿಕಾರಿಯು ನೀಡಿರುವ ದೃಢೀಕರಣ ಪತ್ರ, ವ್ಯಾಪಾರ ಮಳಿಗೆಯ ಖಾತೆ ಅಥವಾ ಬಾಡಿಗೆ/ಕರಾರು ಪತ್ರ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಸಹಕಾರ ಸಂಘದವರು ಅಧಿಕೃತವಾಗಿ ನೇಮಿಸಿರುವ ಪ್ರತಿನಿಧಿಯ ಇತ್ತೀಚಿನ 3 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಸಹಕಾರ ಸಂಘಗಳು/ಸ್ತ್ರಿ-ಶಕ್ತಿ ಗುಂಪುಗಳು ಮತ್ತು ಮಹಿಳಾ ಸ್ವಸಹಾಯ ಗುಂಪುಗಳು ಕನಿಷ್ಟ 3 ವರ್ಷದ ಹಿಂದೆ ನೋಂದಾವಣಿಯಾಗಿರಬೇಕು.

About The Author

You May Also Like

More From Author

+ There are no comments

Add yours