ಪದವಿ ಪ್ರವೇಶಾತಿಗೆ ಅರ್ಜಿ ಆಹ್ವಾನ

1 min read

ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ೨೦೨೨-೨೩ನೇ ಶೈಕ್ಷಣಿಕ ಸಾಲಿಗೆ ಪ್ರಥಮ ಬಿ.ಎಸ್ಸಿ, ಬಿ.ಸಿ.ಎ, ಹಾಗೂ ಬಿ.ವೊಕ್, ಪದವಿ ತರಗತಿಗಳಿಗೆ ಪ್ರವೇಶಾತಿ ಆರಂಭವಾಗಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಈಜಲು ಹೋಗಿ ವ್ಯಕ್ತಿ ಸಾವು

ಆಸಕ್ತ ಅಭ್ಯರ್ಥಿಗಳು www.uucms.karnataka.gov.in ಜಾಲತಾಣದ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಜುಲೈ ೧೦ ಮೊದಲ ಸುತ್ತಿನ ಪ್ರವೇಶಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಜುಲೈ ೧ರಿಂದ SMS/e-mail ಮೂಲಕ invite link ಬಂದಿರುವ ವಿದ್ಯಾರ್ಥಿಗಳು ತಮಗೆ ನೀಡಲಾಗಿರುವ ದಿನದಂದೇ ಆನ್‌ಲೈನ್ ಮೂಲಕ ಸಲ್ಲಿಸಿರುವ ಅರ್ಜಿಯ ಪ್ರತಿ ಹಾಗೂ ಮೂಲ ದಾಖಲಾತಿಗಳೊಂದಿಗೆ ಪರಿಶೀಲನೆಗೆ ಹಾಜರಾಗಬೇಕು.

ಬ್ರಿಡ್ಜ್ ನಿಂದ ಕೆಳಗೆ ಬಿದ್ದು ಬೈಕ್ ರೈಡರ್ ಸಾವು

ಜುಲೈ ೧೪ರಿಂದ ಮೆರಿಟ್ ಕಂ ರೋಸ್ಟರ್ ಆಧಾರದ ಮೇರೆಗೆ ವಿಶ್ವವಿದ್ಯಾನಿಲಯ ವಿಜ್ಞಾನ
ಕಾಲೇಜಿನ ಆವರಣದಲ್ಲಿ ಮೊದಲನೇ ಸುತ್ತಿನ ಕೌನ್ಸಿಲಿಂಗ್ ನಡೆಸಲಾಗುತ್ತದೆ. ಜುಲೈ ೧೨ರಂದು ಸಂಜೆ ೫ ಗಂಟೆಗೆ ಪ್ರಕಟಿಸಲಾಗುವುದು.

ನ್ಯಾಯಬೆಲೆ ಅಂಗಡಿ ಮಂಜೂರಾತಿಗೆ ಅರ್ಜಿ ಆಹ್ವಾನ

ಹೆಚ್ಚಿನ ಮಾಹಿತಿಗಾಗಿ ತುಮಕೂರು ವಿಶ್ವವಿದ್ಯಾನಿಲಯ tumkuruniversity.ac.in.ucst.ac.in ಜಾಲತಾಣದಲ್ಲಿ ಅಥವಾ ಕಾಲೇಜಿನ UUCMS help deskನ್ನು ಸಂಪರ್ಕಿಸಬೇಕೆಂದು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

You May Also Like

More From Author

+ There are no comments

Add yours