ಅಪಘಾತದಲ್ಲಿ ಓರ್ವ ಸಾವು: ಹಿಡಿಯಲು ಹೋದವನೂ ಶವವಾದ

1 min read

Tumkur News
ಪಾವಗಡ: ಟ್ರಾಕ್ಟರ್ ಮತ್ತು ದ್ವಿಚಕ್ರ ವಾಹನದ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ದ್ವಿಚಕ್ರ ವಾಹನ ಸವಾರರು ಮೃತಪಟ್ಟಿರುವ ಘಟನೆ ತಾಲೂಕಿನ ತುಮಕುಂಟೆ ಗೇಟ್ ಹಾಗೂ ಅರಸೀಕೆರ ಗ್ರಾಮದ ಬಳಿ ನಡೆದಿದೆ.
ಮಂಗಳವಾರ ರಾತ್ರಿ ಮಂಗಳವಾಡದ ಕಡೆಗೆ ಹೋಗುತ್ತಿದ್ದ ದ್ವಿಚಕ್ರ ವಾಹನ ಅರಸೀಕೆರೆ ಕಡೆಗೆ ಹೋಗುತ್ತಿದ್ದ ಟ್ರಾಕ್ಟರ್ ನಡುವೆ ತುಮಕುಂಟೆ ಗೇಟ್ ಬಳಿ ಮುಖಾಮುಖಿ ಢಿಕ್ಕಿ ನಡೆದಿದೆ. ಈ ಪರಿಣಾಮ ಬೈಕ್ ಸವಾರ ಕ್ಯಾತಗಾನಹಳ್ಳಿ ಗ್ರಾಮದ ನರಸಿಂಹಮೂರ್ತಿ(45) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮೋರಿಯಲ್ಲಿ ಸಿಲುಕಿದ ಗೋವನ್ನು ರಕ್ಷಿಸಿದ ಭಜರಂಗದಳ ಕಾರ್ಯಕರ್ತರು

ಈ ವೇಳೆ ಅಪಘಾತ ನಡೆಸಿದ ಟ್ರ್ಯಾಕ್ಟರ್ ಚಾಲಕ ವಾಹನ ನಿಲ್ಲಿಸದೆ ಅರಸೀಕೆರೆ ಕಡೆಗೆ ಪರಾರಿಯಾಗಿದ್ದಾನೆ. ಇದನ್ನು ತುಮಕುಂಟೆ ಗ್ರಾಮದ ತಿಮ್ಮಯ್ಯ, ಮತ್ತು ಇತರರು ದ್ವಿ ಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಹೋಗಿದ್ದಾರೆ. ಟ್ರ್ಯಾಕ್ಟರ್ ಚಾಲಕ ಟ್ರ್ಯಾಕ್ಟರ್ ನ್ನು ಅರಸೀಕೆರೆ ಬಳಿಯ ಪೆಟ್ರೋಲ್ ಬಂಕ್ ಸಮೀಪ ನಿಲ್ಲಿಸಿದ್ದು ಇದನ್ನು ಹಿಂಬಾಲಿಸಿಕೊಂಡು ಬಂದ ಬೈಕ್ ಸವಾರರು ಅತೀ ವೇಗದಲ್ಲಿದ್ದ ಪರಿಣಾಮ ರಸ್ತೆ ಬದಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಗೆ ಹಿಂಬದಿಯಿಂದ ಢಿಕ್ಕಿ ಹೊಡೆಡಿದ್ದಾರೆ ಪರಿಣಾಮ ದ್ವಿಚಕ್ರ ವಾಹನ ಸವಾರ ತುಮಕುಂಟೆ ಗ್ರಾಮದ ತಿಮ್ಮಯ್ಯ(45) ಮೃತಪಟ್ಟಿದ್ದಾರೆ.

ಕನ್ಯೆಯರ ಕಾಲುತೊಳೆಯುವ ವಿಭಿನ್ನ ಆಚರಣೆ!

ಬೈಕ್ ನಲ್ಲಿದ್ದ ಇನ್ನೋರ್ವ ಸವಾರ ತಿಪ್ಪೇಸ್ವಾಮಿ ಅವರಿಗೆ ತೀವ್ರ ಗಾಯಗಳಾಗಿವೆ. ಅರಸೀಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

About The Author

You May Also Like

More From Author

+ There are no comments

Add yours