ಅರುಂಧತಿ ಸಿನಿಮಾ ನೋಡಿ ಆತ್ಮಹತ್ಯೆಗೆ ಯತ್ನಿಸಿದ ಕಾಲೇಜು ವಿದ್ಯಾರ್ಥಿ!

1 min read

Tumkurnews
ತುಮಕೂರು; ಅರುಂಧತಿ ಸಿನಿಮಾ ನೋಡಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಮಧುಗಿರಿ ತಾಲ್ಲೂಕು ಗಿಡ್ಡಯ್ಯನಪಾಳ್ಯ ನಿವಾಸಿ ರೇಣುಕಾ(22) ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಪ್ರಕರಣದ ವಿವರ; ಆತ್ಮಹತ್ಯೆಗೆ ಯತ್ನಿಸಿರುವ ರೇಣುಕಾ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಆತನನ್ನು ಪೋಷಕರು ತುಮಕೂರಿನ ಹಾಸ್ಟೆಲ್ ಗೆ ಸೇರಿಸಿದ್ದರು. ಹಾಸ್ಟೆಲ್ ಸೇರಿದ ಬಳಿಕ ಓದಿನ ಕಡೆಗೆ ಆಸಕ್ತಿ ಕಳೆದುಕೊಂಡ ರೇಣುಕಾ ಸಿನಿಮಾ ನೋಡುವ ಗೀಳು ಬೆಳೆಸಿಕೊಂಡಿದ್ದನು. ತೆಲುಗಿನ ಅರುಂಧತಿ ಸಿನಿಮಾದಿಂದ ಪ್ರಭಾವಿತನಾಗಿದ್ದ ಈತ, ಹಲವಾರು ಬಾರಿ ಅರುಂಧತಿ ‌ಸಿನಿಮಾವನ್ನು ನೋಡಿ ಅದರಲ್ಲಿನ ನಾಯಕಿಯಂತೆ ಆಗಬೇಕು ಎಂದುಕೊಂಡಿದ್ದನು.

KSRTC; ತುಮಕೂರು ವಿಭಾಗಕ್ಕೆ ಒಂದೇ ದಿನ 1 ಕೋಟಿ ಆದಾಯ!

ಸದರಿ ಸಿನಿಮಾದಲ್ಲಿ ದುಷ್ಟ ಶಕ್ತಿ ಹೊಂದಿದ ಶತೃವನ್ನು ಸಾಯಿಸಲು ನಾಯಕಿ ಸ್ವಯಂ ಮರಣಹೊಂದುತ್ತಾಳೆ. ಆಕೆಯ ಶವವನ್ನು ಧಹಿಸಿ ಅವಳ ಮೂಳೆಯಿಂದ ಆಯುಧ ತಯಾರಿಸಲಾಗುತ್ತದೆ. ಆಕೆ ಪುನರ್ಜನ್ಮ ಪಡೆದು ಅದೇ ಆಯುಧದಿಂದ ಶತೃ ಸಂಹಾರ ಮಾಡುತ್ತಾಳೆ.

ಈ ಕಥಾ ಹಂದರ ಹೊಂದಿರುವ ಸಿನಿಮಾದಿಂದ ಪ್ರಭಾವಿತನಾದ ವಿದ್ಯಾರ್ಥಿ ರೇಣುಕಾ, ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಕೂಡಲೇ ಪೋಷಕರು ಬೆಂಕಿ ನಂದಿಸಿದ್ದು, ತುಮಕೂರಿನಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಗಸ್ಟ್ 12ರಿಂದ 25ರ ವರೆಗೆ ನಿಷೇದಾಜ್ಞೆ; ಉಲ್ಲಂಘಿಸಿದರೆ ಬಂಧಿಸಲು ಡಿಸಿ ಆದೇಶ
ಮುಕ್ತಿಗಾಗಿ ಬೇಡಿದ; ಬೆಂಕಿ ಹಚ್ಚಿಕೊಂಡು ನರಳಾಡುತ್ತಿದ್ದ ವಿದ್ಯಾರ್ಥಿಯು ತನ್ನ ತಂದೆ ಬಳಿ ಮುಕ್ತಿ ಕೊಡಪ್ಪ, ಮುಕ್ತಿ ಕೊಡಪ್ಪ ಎಂದು ಬೇಡಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದ್ದು, ಮನಕಲಕುವಂತಿದೆ. ಹೆತ್ತವರು ಮಕ್ಕಳು ಓದಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿ ಎಂದು ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿಸುತ್ತಾರೆ. ಆದರೆ ಇಂತಹ ವಿದ್ಯಾರ್ಥಿಗಳು ಅನಗತ್ಯ ಆಸಕ್ತಿಗಳನ್ನು ಬೆಳೆಸಿಕೊಂಡು ಈ ರೀತಿಯಲ್ಲಿ ಜೀವನ ಹಾಳುಮಾಡಿಕೊಳ್ಳುವುದು ಮಾತ್ರ ವಿಪರ್ಯಾಸವಾಗಿದೆ.

(ವಿಡಿಯೋ)

https://youtu.be/Txl_dzYkoT0

ಕಳ್ಳರ ಪಾಲಿನ ಸ್ವರ್ಗ; ತುಮಕೂರು KSRTC ಬಸ್ ನಿಲ್ದಾಣ!

About The Author

You May Also Like

More From Author

+ There are no comments

Add yours