KSRTC ವಿದ್ಯಾರ್ಥಿ ಬಸ್ ಪಾಸ್ ವಿತರಣೆ ಯಾವಾಗ?

1 min read

 

KSRTC ವಿದ್ಯಾರ್ಥಿ ಬಸ್ ಪಾಸ್ ವಿತರಣೆ ಯಾವಾಗ?

Tumkurnews
ಬೆಂಗಳೂರು: ಪ್ರಸಕ್ತ ಸಾಲಿನ ರಿಯಾಯಿತಿ ದರದ ವಿದ್ಯಾರ್ಥಿ ಬಸ್ ಪಾಸ್ ವಿತರಣೆ ಯಾವಾಗ ಆರಂಭವಾಗುತ್ತದೆ ಎಂಬ ಬಗ್ಗೆ ಈವರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಸೇರಿದಂತೆ ಯಾವುದೇ ಸಾರಿಗೆ ಜನ ನಿಗಮದಿಂದ ಯಾವುದೇ ಪ್ರಕಟಣೆ ಹೊರ ಬಿದ್ದಿಲ್ಲ, ಹೀಗಾಗಿ ರಾಜ್ಯಾದ್ಯಂತ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗಿದ್ದಾರೆ‌‌.
2023-24ನೇ ಸಾಲಿನ ಅವಧಿಯಲ್ಲಿ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ನೀಡಿದ್ದ ವಿದ್ಯಾರ್ಥಿ ಬಸ್ ಪಾಸ್ ಅವಧಿಯು ಇದೇ 2024ರ ಮಾರ್ಚ್ 30ಕ್ಕೆ ಮುಕ್ತಾಯವಾಗಿದೆ. ಸದರಿ ವಿದ್ಯಾರ್ಥಿಗಳಿಂದ ನಿಗದಿತ ಶುಲ್ಕ ಪಾವತಿಸಿಕೊಂಡು ಏಪ್ರಿಲ್ 31ರ ವರೆಗೆ ಹಳೇ ಬಸ್ ಪಾಸ್ ಅನ್ನು ನವೀಕರಣ(ರಿನೀವಲ್) ಮಾಡಿ ಕೊಡಲಾಗುತ್ತಿದೆ. ಹೀಗಾಗಿ ಈ ಬಗೆಯ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಿಲ್ಲ.
ಪದವಿ, ಪಿಯು ವಿದ್ಯಾರ್ಥಿಗಳಿಗೆ ತೊಂದರೆ: ಪ್ರಥಮ ವರ್ಷದ ಪದವಿ ಹೊರತುಪಡಿಸಿ ಉಳಿದ ಪದವಿ ತರಗತಿಗಳು ಆರಂಭವಾಗಿದ್ದು, ಈ ವಿದ್ಯಾರ್ಥಿಗಳಿಗೆ ಬಸ್ ಪಾಸ್ ನವೀಕರಣ ಮಾಡಿಕೊಡುತ್ತಿಲ್ಲ ಎನ್ನುವುದು ಸಮಸ್ಯೆಯಾಗಿದೆ. ಜೊತೆಗೆ ಕೆಲವು ಖಾಸಗಿ ಪಿಯು ಕಾಲೇಜುಗಳು ಈಗಾಗಲೇ ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸಿವೆ. ಈ ವಿದ್ಯಾರ್ಥಿಗಳಿಗೆ ಹೊಸ ಬಸ್ ಪಾಸ್ ವಿತರಣೆ ಮಾಡುತ್ತಿಲ್ಲ ಹಾಗೂ ಹಳೆಯ ಪಾಸ್ ಅನ್ನು ನವೀಕರಣ ಮಾಡಿಕೊಡುತ್ತಿಲ್ಲ.‌ ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ಬಸ್ ಪಾಸ್ ಸಿಗದೇ ಪರದಾಡುವಂತಾಗಿದೆ.
ಹಣ ಹೊಂದಿಸಲು ಪರದಾಟ: ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದ್ದು, ಜನರು, ರೈತಾಪಿ ವರ್ಗ ದುಡಿಮೆ ಇಲ್ಲದೇ ಕಂಗಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿ ನಿತ್ಯ ಬಸ್ ಚಾರ್ಜ್’ಗೆ ಹಣ ಹೊಂದಿಸುವುದು ಬಡ ಹಾಗೂ ರೈತಾಪಿ ಪೋಷಕರಿಗೆ ಕಷ್ಟವಾಗಿದೆ. ಸರ್ಕಾರ ಕೂಡಲೇ ಎಚ್ಚೆತ್ತು ಆದಷ್ಟು ಬೇಗ ವಿದ್ಯಾರ್ಥಿಗಳಿಗೆ ರಿಯಾಯಿತಿ ಬಸ್ ಪಾಸ್ ವಿತರಣೆ ಮಾಡಬೇಕಿದೆ.
ಜೂನ್ ವರೆಗೂ ಕಾಯಬೇಕೆ?: ಪ್ರತಿವರ್ಷ ಸಾರಿಗೆ ನಿಗಮಗಳು ಜೂನ್ ಮಾಹೆಯಲ್ಲಿ ವಿದ್ಯಾರ್ಥಿ ಬಸ್ ಪಾಸ್ ವಿತರಣೆ ಕಾರ್ಯ ಆರಂಭಿಸುತ್ತವೆ. ಈ ವರ್ಷವೂ ಅದೇ ಮಾದರಿಯಂತೆ ಜೂನ್ ಎರಡನೇ ವಾರದವರೆಗೂ ಕಾಯಬೇಕೇ ಎನ್ನುವುದು ವಿದ್ಯಾರ್ಥಿಗಳು ಹಾಗೂ ಪೋಷಕರ ಪ್ರಶ್ನೆಯಾಗಿದೆ. ಒಟ್ಟಾರೆಯಾಗಿ ಸಾರಿಗೆ ನಿಗಮಗಳು ಈ ಬಗ್ಗೆ ಎಚ್ಚೆತ್ತು‌‌ ಶೀಘ್ರವಾಗಿ ವಿದ್ಯಾರ್ಥಿ ಬಸ್ ಪಾಸ್ ವಿತರಣೆಗೆ ಚಾಲನೆ ನೀಡಬೇಕಿದೆ.

About The Author

You May Also Like

More From Author

+ There are no comments

Add yours