Tumkurnews
ತುಮಕೂರು; ಮಿನಿ ಲಾರಿ ಮತ್ತು ಮೊಪೆಡ್ ನಡುವೆ ಡಿಕ್ಕಿ ಸಂಭವಿಸಿದ್ದು, ಮೊಪೆಡ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
KSRTC; ತುಮಕೂರು ವಿಭಾಗಕ್ಕೆ ಒಂದೇ ದಿನ 1 ಕೋಟಿ ಆದಾಯ!
ತುಮಕೂರಿನ ಶೆಟ್ಟಿಹಳ್ಳಿ ಸಿಗ್ನಲ್ ಬಳಿ ಘಟನೆ ಸಂಭವಿಸಿದ್ದು, ಗೂಳರಿವೆ ಗ್ರಾಮದ ಗಾರೆ ಕೆಲಸ ಮಾಡುವ ಮೂರ್ತಪ್ಪ(55) ಮೃತ ದುರ್ದೈವಿ.
ಮೂರ್ತಪ್ಪ ಅವರು ಎಚ್.ಎಂ.ಎಸ್ ಕಾಲೇಜು ಕಡೆಯಿಂದ ಶೆಟ್ಟಿಹಳ್ಳಿ ಕಡೆಗೆ ಬರುವಾಗ ಅಪಘಾತ ಸಂಭವಿಸಿದೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಮಿನಿ ಲಾರಿ ಹಾಗೂ ಚಾಲಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.
ಮೃತನ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿದೆ.
ಆಗಸ್ಟ್ 12ರಿಂದ 25ರ ವರೆಗೆ ನಿಷೇದಾಜ್ಞೆ; ಉಲ್ಲಂಘಿಸಿದರೆ ಬಂಧಿಸಲು ಡಿಸಿ ಆದೇಶ
+ There are no comments
Add yours