Tumkurnews
ತುಮಕೂರು; ಕೆ.ಎಸ್.ಆರ್.ಟಿ.ಸಿ ತುಮಕೂರು ವಿಭಾಗವು ಆಗಸ್ಟ್ 8ರಂದು ಒಂದೇ ದಿನ 1.14 ಕೋಟಿ ರೂ.ಗಳ ಆದಾಯ ಗಳಿಸುವ ಮೂಲಕ ಹೊಸ ದಾಖಲೆ ಬರೆದಿದೆ.
ವಿಭಾಗದ ಈ ದಾಖಲೆಗಾಗಿ ಹಿರಿಯ ವಿಭಾಗಿಯ ನಿಯಂತ್ರಣಾಧಿಕಾರಿ ಎ.ಎನ್ ಗಜೇಂದ್ರ ಕುಮಾರ್ ಅವರು ಸಿಬ್ಬಂದಿ ವರ್ಗಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ತುಮಕೂರು- ಜೋಗ ಜಲಪಾತ; KSRTC ವಿಶೇಷ ಟೂರ್ ಪ್ಯಾಕೇಜ್ ಘೋಷಣೆ
‘ತುಮಕೂರು ವಿಭಾಗದ ಎಲ್ಲಾ ವಾಹನಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡು, ಲಭ್ಯವಿರುವ ಚಾಲನಾ ಸಿಬ್ಬಂದಿಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿ, ಉತ್ತಮ ಕಾರ್ಯಯೋಜನೆಯ ಮೂಲಕ ಅನುಸೂಚಿಗಳನ್ನು ಸಕಾಲದಲ್ಲಿ ಕಾರ್ಯಾಚರಣೆ ಮಾಡಿ ಸಾರ್ವಜನಿಕ ಪ್ರಯಾಣಿಕರಿಗೆ ಸಮರ್ಪಕ ಸಾರಿಗೆ ಸೇವೆಯನ್ನು ಒದಗಿಸುವ ಮೂಲಕ ವಿಭಾಗಕ್ಕೆ ಅತ್ಯುತ್ತಮ ಆದಾಯವನ್ನು ತರಲು ಶ್ರಮಿಸಿರುವ ವಿಭಾಗದ ಎಲ್ಲಾ ಚಾಲನಾ ಸಿಬ್ಬಂದಿಗಳು, ತಾಂತ್ರಿಕ ಸಿಬ್ಬಂದಿಗಳು, ಆಡಳಿತ ಸಿಬ್ಬಂದಿಗಳು, ಎಲ್ಲಾ ಮೇಲ್ವಿಚಾರಕರು, ಅಧಿಕಾರಿಗಳು ಮತ್ತು ಅವರ ಕುಟುಂಬ ವರ್ಗದವರಿಗೆ ಹಾಗೂ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಈ ಸಾಧನೆಗೆ ಕಾರಣೀಭೂತರಾದ ಎಲ್ಲರಿಗೂ ವೈಯಕ್ತಿಕವಾಗಿ ಹಾಗೂ ವಿಭಾಗದ ವತಿಯಿಂದ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಅವರು ಅಭಿನಂದನಾ ಪತ್ರದಲ್ಲಿ ತಿಳಿಸಿದ್ದಾರೆ.
ಆಗಸ್ಟ್ 12ರಿಂದ 25ರ ವರೆಗೆ ನಿಷೇದಾಜ್ಞೆ; ಉಲ್ಲಂಘಿಸಿದರೆ ಬಂಧಿಸಲು ಡಿಸಿ ಆದೇಶ
+ There are no comments
Add yours